ಟಿವಿ ಚಾನೆಲ್‌ಗಳ ದರ ನಿಗದಿಗೆ ಸಂಬಂಧಿಸಿ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್)ದ ಹೊಸ ಆದೇಶ ಇಂದಿನಿಂದ ಚಾಲ್ತಿಗೆ ಬರಲಿದೆ. ಅದರಂತೆ ಗ್ರಾಹಕರು ಟಿವಿ ಚಾನೆಲ್‌ಗಳಿಗೆ ಸುಮಾರು ಶೇ.30ರಷ್ಟು ಹೆಚ್ಚು ಶುಲ್ಕ ತೆರಬೇಕಾಗುತ್ತದೆ ಎಂದು ಡಿಟಿಎಚ್ ಮತ್ತು ಕೇಬಲ್ ಆಪರೇಟರ್‌ಗಳು ಸುಳಿವು ನೀಡಿದ್ದಾರೆ. ದರ ಹೆಚ್ಚಳದಿಂದ ಗ್ರಾಹಕರನ್ನು ಕಳೆದುಕೊಳ್ಳುತ್ತೇವೆಂಬ ಭೀತಿಯನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಹೆಚ್ಚುವರಿ ಶುಲ್ಕ
ಕ್ರೆಡಿಟ್ ಕಾರ್ಡ್ ಮೂಲಕ ನೀವು ಬಾಡಿಗೆ ಪಾವತಿಸುತ್ತಿದ್ದರೆ ಇನ್ನು ಮುಂದೆ ನಿಮ್ಮ ಜೇಬಿಗೆ ಕತ್ತರಿ ಗ್ಯಾರಂಟಿ. ಬ್ಯಾಂಕ್ ಆಫ್ ಬರೋಡಾ ತನ್ನ ಕ್ರೆಡಿಟ್ ಕಾರ್ಡ್‌ದಾರರಿಗೆ ಇಂಥದ್ದೊಂದು ಶಾಕ್ ನೀಡಿದೆ. ಫೆ.1ರಿಂದ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಮೂಲಕ ನೀವು ಬಾಡಿಗೆ ಪಾವತಿಸಿದರೆ ಅದಕ್ಕೆ ಶೇ.1ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
Advertisement
ಎಲ್‌ಪಿಜಿ ಬೆಲೆಪ್ರತೀ ತಿಂಗಳ ಮೊದಲ ದಿನ ಅಡುಗೆ ಅನಿಲ ಬೆಲೆ ಪರಿಷ್ಕರಣೆಯಾಗುತ್ತದೆ. ಅದರಂತೆ ಎಲ್‌ಪಿಜಿ ಬೆಲೆ ಇಂದು ಹೆಚ್ಚಾಗಲೂಬಹುದು, ಕಡಿಮೆ ಆಗಲೂಬಹುದು.
ವೆಚ್ಚ ಹೆಚ್ಚಳದ ಕಾರಣಕ್ಕೆ ತನ್ನ ಎಲ್ಲ ಪ್ರಯಾಣಿಕ ವಾಹನಗಳ ಬೆಲೆ ಏರಿಕೆ ಮಾಡುತ್ತಿರುವುದಾಗಿ ಈಗಾಗಲೇ ಟಾಟಾ ಮೋಟಾರ್ಸ್ ಘೋಷಿಸಿದೆ. ಅದರಂತೆ ಫೆ.1ರಿಂದ ನೆಕ್ಸಾನ್, ಅಲೂóಝ್, ಟಿಯಾಗೋ, ಹ್ಯಾರಿಯರ್ ಸಹಿತ ಎಲ್ಲ ಕಾರುಗಳ ಬೆಲೆ ಸರಾಸರಿ ಶೇ.1.2ರಷ್ಟು ಹೆಚ್ಚಳವಾಗಲಿದೆ. ಹಳೆ ವಾಹನಗಳು ಗುಜರಿಗೆ
15 ವರ್ಷ ಹಳೆಯ ಪೆಟ್ರೋಲ್ ವಾಹನಗಳು, 10 ವರ್ಷ ಹಳೆಯ ಡೀಸೆಲ್ ವಾಹನಗಳನ್ನು ಫೆ.1ರಿಂದ ಜಪ್ತಿ ಮಾಡುವು ದಾಗಿ ನೋಯ್ಡಾ ಪ್ರಾಧಿಕಾರ ಘೋಷಿಸಿದೆ. ಅದರಂತೆ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ಇಂಥ ವಾಹನಗಳು ರಸ್ತೆಗಿಳಿದರೆ, ಮುಟ್ಟುಗೋಲು ಹಾಕಿಕೊಂಡು ಗುಜರಿಗೆ ಹಾಕಲಾಗುತ್ತದೆ.