Advertisement
ಯಜ್ನೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ಆಯುಷ್ಯಮಗ್ರ್ಯಂ ಪ್ರತಿಮುಂಚ ಶುಭ್ರಂ ಯಜ್ನೋಪವೀತಂ ಬಲಮಸ್ತು ತೇಜಃ ||
ಎಂಬ ಮಂತ್ರವನ್ನು ಉಚ್ಚರಿಸಿ ಜನಿವಾರ ಧರಿಸಲಾಗುತ್ತದೆ. ಮೂರು ಎಳೆಯ ನೂಲಿಗೆ ಪವಿತ್ರಗಂಟನ್ನು ಹಾಕಿ, ಅದನ್ನು ನೀರಿನಲ್ಲಿ ಶುದ್ಧ ಮಾಡಿಕೊಂಡು ಓಂಕಾರ, ಅಗ್ನಿ, ನಾಗ, ಸೋಮ, ಪಿತೃ, ಪ್ರಜಾಪತಿ, ವಾಯುಂ, ಸೂರ್ಯಂ, ವಿಶ್ವಾನೆªàವ .. ಹೀಗೆ ದೇವತೆಗಳನ್ನು ಅದರಲ್ಲಿ ಆವಾಹನೆ ಮಾಡಿ, ಪೂಜಿಸಿ, ಗಾಯತ್ರಿಮಂತ್ರ ಜಪಿಸಿ ಧರಿಸುವುದು ಕ್ರಮ. ಆದರೆ ಕಾಲ ಬದಲಾದಂತೆ ಅದರ ರೂಪವೂ ಬದಲಾಗುತ್ತ ಹೋಗಿ, ಮನೆಯಲ್ಲಿ ಪೂಜಾಕಾರ್ಯಗಳಿ¨ªಾಗ ಮಾತ್ರ ಧರಿಸುವ ಧರ್ಬೆಯಿಂದ ಮಾಡಿದ ಪವಿತ್ರದಂತೆಯೇ ಜನಿವಾರವನ್ನೂ ಹಬ್ಬ, ಪೂಜಾ ದಿನಗಳಲ್ಲಿ ಮಾತ್ರ ಧರಿಸುವ ಕ್ರಮ ನಿಧಾನವಾಗಿ ರೂಢಿಗೆ ಬರುತ್ತಿದೆ.
Related Articles
Advertisement
ಅರಿಯದೆ ನಮ್ಮ ಮನಸ್ಸು ದುರ್ನಡೆತೆಯತ್ತ ಯೋಚಿಸಿದಾಗ ಮೆಯ್ಯಲ್ಲಿರುವ ಜನಿವಾರ ನಮ್ಮನ್ನು ತಡೆಯುತ್ತದೆ. ಇಲ್ಲ, ಇದು ಸರಿಯಾದುದಲ್ಲ, ಚಂಚಲರಾಗದೆ ಉತ್ತಮ ನಡೆಯನ್ನೇ ಆರಿಸಿಕೊಳ್ಳಬೇಕು ಎಂದು ಎಚ್ಚರಿಸುತ್ತದೆ. ಅದೇ ರೀತಿ, ಮದುವೆಯಾದ ಬಳಿಕೆ ಇನ್ನೊಂದು ಜನಿವಾರ ಅಂದರೆ ಒಟ್ಟಿಗೆ ಎರಡು ಜನಿವಾರವನ್ನು ಹಾಕಲಾಗುತ್ತದೆ. ಅಂದರೆ ಜೀವದ ಸಂಗಾತಿಯ ಜೊತೆಯಾಗಿ¨ªಾಳೆ, ಇಲ್ಲಿ ಸಂಯಮದಿಂದಿರಬೇಕು, ಜವಾಬ್ದಾರಿ ಹೆಚ್ಚಿದೆ ಎಂಬುದನ್ನು ನೆನಪಿಸುತ್ತಿರುತ್ತದೆ. ಅಲ್ಲದೆ ಪರಸ್ತ್ರೀಸಂಗ, ಇನ್ನಿತರ ಯಾವುದೇ ದುವ್ಯìಸನಗಳಿಗೆ ಮನಸ್ಸು ಓಲೈಸದಂತೆ ನಮ್ಮನ್ನು ತಡೆಯಲು ಈ ಜನಿವಾರ ಸಹಕಾರಿ.
ಇನ್ನು, ಇವೆಲ್ಲವನ್ನೂ ಅರಿತು ನಡೆಯುವ ತಮಗೆ ಅಂದರೆ ಜ್ಞಾನಕ್ಕೆ ಜನಿವಾರದ ಹಂಗೇಕೆ? ಎಂಬ ಪ್ರಶ್ನೆ ಎದುರಾದಾಗ ಅಲ್ಲಿ ನಮ್ಮ ಏಕಾಗ್ರತೆ ಅಷ್ಟು ಬಲಿಷ್ಟವಾಗಿರಬೇಕು. ಮತ್ತು ಜ್ಞಾನದ ಕೊನೆಯ ಹಂತವನ್ನು ತಲುಪಿ ಅದರಲ್ಲಿಯೇ ಜೀವಿಸುತ್ತಿರಬೇಕು. ಹಾಗಾಗಿ ಋಷಿಗಳು ಅಥವಾ ಸನ್ಯಾಸಿಗಳಿಗೆ ಜನಿವಾರದ ಹಂಗಿರುವುದಿಲ್ಲ; ಅವರಿಗೆ ಜನಿವಾರ ಇರುವುದಿಲ್ಲ. ಮಾನವ, ಸಹಜವಾಗಿಯೇ ಚಂಚಲಚಿತ್ತವುಳ್ಳವನು. ಅವನಿಗೆ ಒಂದು ಗಡಿಯನ್ನು ದಾಟಬಾರದೆಂದು ಅರಿವಾಗಬೇಕಾದರೆ ಆ ಗಡಿಗೆ ಸುತ್ತಲೂ ಕಟ್ಟೆಕಟ್ಟಿರಬೇಕು. ಅಪ್ಪಿತಪ್ಪಿ ಅಂತಹ ಗಡಿದಾಟುವಾಗಲೂ ಆ ಕಟ್ಟೆ ಅವನನ್ನು ಎಚ್ಚರಿಸುತ್ತದೆ. ಹಾಗಾಗಿ ಜನಿವಾರ ಎಂಬುದು ಸಂಸ್ಕಾರದ ಬದುಕಿಗೆ ಎಚ್ಚರಿಕೆಯೂ ಹೌದು; ತಪಾಚರಣೆಗೆ ಮಾರ್ಗವೂ ಹೌದು.