Advertisement

ನೀನಿಲ್ಲದೆ ನನಗೇನಿದೆ? ಛಾಲೆಂಜ್‌ ಹಾಕಿದವನ ಚಿಲಿಪಿಲಿ ರಾಗ

07:05 AM Aug 15, 2017 | Harsha Rao |

ನನ್ನ ಹೊಟ್ಟೆಕಿಚ್ಚೇ ನನ್ನ ಪ್ರೀತಿ ಆಳಾನಾ ನಿಂಗೆ ತಿಳ್ಸುತ್ತೆ. ನಾನ್‌ ನಿಂಗೆ ತುಂಬ ನೋವ್‌ ಕೊಟ್ಟಿದ್ದೀನಿ, ಅದ್ಕೆ ನನ್ನ ಕ್ಷಮಿಸು ಚಿನ್ನಾ ಪ್ಲೀಸ್‌. ನಂದೊಂದು ಸಣ್ಣ ರಿಕ್ವೆಸ್ಟ್‌. ನನ್‌ ಮುಂದೆ ಬೇರೆ ಹುಡುಗ್ರ ಹೆಸ್ರು ಹೇಳ್ಬೇಡ ಪ್ಲೀಸ್‌. ಆವಾಗೆಲ್ಲಾ ನಾನು ತುಂಬ ಉರ್ಕೊಳ್ತೀನಿ ಹಾಹಾಹಾ…

Advertisement

ಶೋನಾ, ಅವತ್ತು ನೀನು ನಿನ್‌ ಪಾಕೆಟ್‌ ಮನಿಯನ್ನೆಲ್ಲ ನನ್ನ ಬರ್ತ್‌ಡೇಗೆ ಅಂತ ಖರ್ಚು ಮಾಡಿ ಗಿಫ್ಟ್‌ ಕೊಟ್ಟದ್ದು, ಊಟ ಮಾಡದೇ ಅಂಗಡಿಗೆಲ್ಲ ಅಲೆದದ್ದು ಗೊತ್ತಾಗಿ ಎಷ್ಟ್ ಕೋಪ ಬಂತು ಗೊತ್ತಾ? ನೀನ್‌ ನಂಗೆ ಕೊಡಬಹುದಾದ ಒಳ್ಳೇ ಗಿಫ್ಟ್‌ ಯಾವªಂದ್ರೆ “ಅಚ್ಚು’ ಅಂತ ಕರೆಯೋದು. ನೀನಿಟ್ಟ ಹೆಸ್ರನ್ನ ನಿನ್‌ ಸ್ವರದಲ್ಲೇ ಕೇಳ್ಳೋದ್ರಲ್ಲಿ ಎಷ್ಟು ಖುಷಿ ಇರುತ್ತೆ ಗೊತ್ತಾ? ನೀನು ಕೊಟ್ಟ ಆ ಸೂಪರ್‌ ಗಿಫ್ಟ್‌ ಬೈಕಲ್ಲಿ ಹೋಗೋವಾಗ ನನ್ನ ಅಪೊRಂಡು ಕೂತಿರುತ್ತೆ: ನಿನ್‌ ಥರಾನೇ!

ಥ್ಯಾಂಕ್ಯೂ ಪುಟ್ಟಾ…
ಅವತ್ತು ನೀನ್‌ ಹುಷಾರಿಲೆªà ತಲೆ ತಿರುಗಿ ಒಬ್ಳೆà ಬಿದ್ದಿದ್ದು, ಆಮೇಲ್ಯಾರೋ ನಿನ್ನನ್ನು ಸೋಫಾ ಮೇಲೆ ಕೂರಿಸಿದ್ದು, ನೀನು ಸ್ವಲ್ಪ ಹೊತ್ತು ಅವತ್ತು ನಾವ್‌ ಮಾತಾಡಿದ್ದನ್ನೆಲ್ಲ ಮರಿ¤ದ್ದು ಕೇಳಿದ್ರೆ ಬೇಜಾರೂ, ಭಯಾನೂ ಆಯ್ತು. ನೀನ್‌ ಪಟ್ಟ ನೋವಿಗೆ ಬೇಜಾರಾದ್ರೆ, ನನ್‌ ಶೋನಾ ನನ್ನನ್ನೂ ಹೀಗೆ ಮರ್ತೇ ಬಿಟ್ರೆ ಏನ್ಮಾಡ್ಲಿ? ಅಂತ ಭಯ! “ಇಷ್ಟೆಲ್ಲ ಹೇಳ್ಳೋನು, ಯಾಕ್‌ ಅಷ್ಟೊಂದ್‌ ಕಿತ್ತಾಡ್ತೀಯಾ ಮತ್ತೆ?’ ಅಂತ ಕೇಳ್ತೀರಾ? ಬೇರೆಯವ್ರ ನೆರಳು, ದೃಷ್ಟಿ ನಿಮ್‌ ಮೇಲೆ ತಾಕೋ ಭಯ ನಿನ್‌ ಜೊತೆ ಕಿತ್ತಾಡೋ ಹಾಗೇ ಮಾಡುತ್ತೆ. ಇದೊಂದೇ ವಿಷ್ಯಕ್ಕೆ ನಾನ್‌ ನಿನ್ನನ್ನ ಎಲ್ಲಿ ದೂರ ಮಾಡ್ಕೊಳ್ತೀನೋ ಅನ್ಸುತ್ತೆ. ನನ್ನ ಹೊಟ್ಟೆಕಿಚ್ಚೇ ನನ್ನ ಪ್ರೀತಿ ಆಳಾನಾ ನಿಂಗೆ ತಿಳುÕತ್ತೆ. ನಾನ್‌ ನಿಂಗೆ ತುಂಬ ನೋವ್‌ ಕೊಟ್ಟಿದ್ದೀನಿ, ಅದ್ಕೆà ನನ್ನ ಕ್ಷಮುÕ ಚಿನ್ನಾ ಪ್ಲೀಸ್‌. ನಂದೊಂದು ಸಣ್ಣ ರಿಕ್ವೆಸ್ಟ್‌. ನನ್‌ ಮುಂದೆ ಬೇರೆ ಹುಡುಗ್ರ ಹೆಸ್ರು ಹೇಳ್ಬೇಡ ಪ್ಲೀಸ್‌. ಆವಾಗೆಲ್ಲಾ ನಾನು ತುಂಬ ಉರ್ಕೊಳ್ತೀನಿ ಹಾಹಾಹಾ…

ಖುಷೀಲಿರೋವಾಗ ನಮ್‌ ಜೊತೆ ಎಷ್ಟೋ ಜನ ಇರ್ತಾರೆ. ಆದ್ರೆ ನಾವ್‌ ದುಃಖದಲ್ಲಿರೋವಾಗ ಎಷ್ಟ್ ಜನ ನಮ್‌ ಹೆಗಲಿಗೆ ಕೈ ಹಾಕಿ “ಹೇ ನಾನಿದ್ದೀನಿ ಏನೂ ಆಗಲ್ಲ’ ಅಂತಾರೆ ಅನ್ನೋದೇ ಮುಖ್ಯ ಅಲ್ವಾ? ಅಷ್ಟಕ್ಕೂ ಅದ್ರಲ್ಲೇ ಜೀವನದ ಕಹಿಸತ್ಯ, ಸಿಹಿ ಸಂಭ್ರಮ ಇರೋದಲ್ವಾ? ನಮ್‌ ಸುತ್ತ ಎಷ್ಟ್ ಜನ ಇದ್ರೂ ನಮ್ಗೆ ಬೇಕು ಅನ್ಸಿದವ್ರೇ ಇಲ್ಲ ಅಂದ್ರೆ ಅದೆಷ್ಟು ನಮ್ಮನ್ನು ಕಾಡುತ್ತೆ ಅಲ್ವಾ? ಅವತ್ತು ನಾನ್‌ ಕೋಪದಲ್ಲಿದ್ದಾಗ “ಅಚ್ಚು ಏನೂ ಆಗಲ್ಲ’ ಅಂತ ಧೈರ್ಯ ಹೇಳಿದ ನಿಂಗೆ ಎಷ್ಟ್ ಥ್ಯಾಂಕ್ಸ್‌ ಹೇಳ್ಬೇಕೋ ಗೊತ್ತಾಗ್ಲಿಲ್ಲ. ನೀನ್‌ ಹೀಗೆ ನನ್ನ ನೆರಳಾಗಿ, ಜೊತೇಲಿ ಯಾವತ್ತೂ ಇರ್ಬೇಕು ಅನ್ನೋ ಆಸೆ ನಂಗೆ..

ನನ್‌ ಲೈಫಿನ ಗುರಿ ನಮ್ಮ ವಿಷ್ಯದಲ್ಲಿ ಇಷ್ಟೇ. ನಿಮ್ಮಣ್ಣ ನಿನ್ನನ್ನ ಅರ್ಥ ಮಾಡ್ಕೊಂಡಷ್ಟು, ಮುದ್ದು ಮಾಡಿದಷ್ಟು ಬೇರ್ಯಾರೂ ಮಾಡಿಲ್ಲ ಅಲ್ವಾ? ಅದಕ್ಕೇ ನಂಗೊಂಥರಾ ಸಾತ್ವಿಕ ಹೊಟ್ಟೆಕಿಚ್ಚು. ನೀನ್‌ ಕಳಕೊಂಡ ನಿಮ್ಮಣ್ಣನ ಜಾಗಾನ ನಾನ್‌ ಕಿತ್ಕೊಳ್ಬೇಕು ಅನ್ನೋ ಆಸೆ. ಅಷ್ಟೇ ಅಲ್ಲ, ಜವಾಬ್ದಾರಿ ಅನ್ನೋ ವಿಷ್ಯದಲ್ಲಿ ನಿನ್ನ ಪಾಲಿಗೆ ನಾನು ಅಪ್ಪ ಆಗ್ಬೇಕು, ಪ್ರೀತಿ- ಕಾಳಜಿ ಅನ್ನೋ ವಿಷ್ಯದಲ್ಲಿ ಅಮ್ಮ ಆಗ್ಬೇಕು, ಗುಟ್ಟು ಕೇಳ್ಳೋಕೆ ಹೇಳ್ಳೋಕೆ ಅಕ್ಕ- ತಂಗಿ ಆಗ್ಬೇಕು, ನೋವು ಕೇಳ್ಳೋಕೆ, ನೊಂದಾಗ ಕಣ್ಣೀರು ಒರೊÕàಕೆ ಒಬ್ಬ ಬೆಸ್ಟ್‌ಫ್ರೆಂಡ್‌ ನಾನಾಗ್ಬೇಕು. ಇದೆಲ್ಲಾ ಆದ್ಮೇಲೆ ಬಾಯ್‌ಫ್ರೆಂಡೂ ಆಗ್ಬೇಕು! ನಿಂಗೆ ಯಾವ್‌ ಥರದ್‌ ಪ್ರೀತಿಗೂ ಕಮ್ಮಿ ಮಾಡಾºರ್ದು. ಅಷ್ಟು ಚೆನ್ನಾಗಿ ನೋಡ್ಕೊಳ್ಬೇಕು ಅನ್ನೋ ಆಸೆ.

Advertisement

ನನ್ನ ಮತ್ತು ನಿನ್‌ ಮಧ್ಯೆ ದೊಡ್ಡ ಜಗಳ ಆಯ್ತಲ್ಲ… ಅವತ್ತು ಗೊತ್ತಾಯ್ತು ನೀನು ನನ್ನ ಪಾಲಿಗೆ ಎಷ್ಟು ಅಗತ್ಯ, ಅನಿವಾರ್ಯ ಅಂತ. ನೀನಿಲೆªà ಒಂದರೆಕ್ಷಣವೂ ನನ್ನಿಂದ ಕಳೆಯೋಕೆ ಸಾಧ್ಯವಿಲ್ಲ. ಅವತ್ತಾದ ಜಗಳಕ್ಕೆ ನನ್ನ ಕ್ಷಮುÕ ಚಿನ್ನಾ, ಮುಂದೆ ಯಾವತ್ತೂ ದೂರಾಗಲ್ಲ, ನಿಮ್ಮ ಅಣ್ಣನ ಜಾಗಾನ ಕಸೀತೀನಿ ಒಂದಲ್ಲ ಒಂದಿನ, ನಿಮ್ಮ ಬಾಯಿಂದಾನೇ ಹೇಳ್ಳೋ ಹಾಗೆ ಮಾಡ್ತೀನಿ, ಅಷ್ಟು ಚೆನ್ನಾಗಿ ನೋಡ್ಕೊತೀನಿ. ಇದು ನನ್ನ ಹಠವಾದಿ ಚಾಲೆಂಜ್‌! ಅಯ್ಯೋ, ಇವ್ನಿಗೇನಾಯ್ತು? ಪತ್ರದಲ್ಲಿ ಏಕವಚನ- ಬಹುವಚನ ಎರಡನ್ನೂ ಮಿಕ್ಸ್‌ ಮಾಡಿ ಬರಿªದ್ದಾನಲ್ಲ ಅಂತ ತಲೆ ಕೆರ್ಕೋಬೇಡಿ. ನೀವೇ ಹೇಳಿದ್ದಲ್ವಾ? ನೀನು ಹೇಗೆ ಬರೆದ್ರೂ ಓಕೆ ಅಂತ… ಅದ್ಕೆà ಪೂರ್ತಿ ಪತ್ರಾನ ಮನಸ್ಸು ಹೇಗೆØàಗೆ ಪಿಸುಗುಟ್ಟಿತೋ ಹಾಗೇ ಬರಿªದ್ದೀನಿ.

ಅನುಕ್ಷಣವೂ ನಿನ್ನ ನೆನಪು ಕಾಡುತ್ತಲಿದೆ. ಬಾಳದಾರಿಯಲಿ ನಿನ್ನೊಡನೆಯ ಪಯಣದ ನಿರೀಕ್ಷೆ ಬದುಕಿನ ತೇರನ್ನಿನ್ನೂ ಎಳೆಯುತ್ತಲೇ ಇದೆ…

– ಅರ್ಜುನ್‌ ಶೆಣೈ

Advertisement

Udayavani is now on Telegram. Click here to join our channel and stay updated with the latest news.

Next