Advertisement

Kambala: ಊರುಡ್ ಇತ್ತಿಲೆಕನೇ ಆಪುಂಡು.. ಬೆಂಗಳೂರು ಕಂಬಳದ ಬಗ್ಗೆ ಕರಾವಳಿಯವರು ಏನಂತಾರೆ?

03:17 PM Nov 26, 2023 | Team Udayavani |

ಬೆಂಗಳೂರು: ಹ್ವಾಯ್.. ಎಂತ ಖುಷಿ ಆಪುದ್ ಮರ‍್ರೆ, ನಮ್ ಊರಿನ್ ಹಬ್ಬ ಇಲ್ಲಿ ನಡಿತ್ ಇತ್ತ್..; ಎಂಕಲೆ ಬೆಂಗಳೂರು ಪಂದ್ ಎನ್ನೊಂದು ಇಜ್ಜಿ, ನಮ್ಮ ಊರುದ ಕಂಬುಲ️ಡ್ ಇತ್ತಿಲೆಕ ಆವೊಂದು ಉಂಡು.. ಇದು ಹಲ️ವು ವರ್ಷಗಳಿಂದ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಯವರ ಮನದ ಮಾತು.

Advertisement

ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ️ ಬಾರಿಗೆ ಕರಾವಳಿಯ ಜಾನಪದ ಕ್ರೀಡೆ ಕಂಬಳ ನಡೆಯುತ್ತಿದೆ. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ರಾಜ – ಮಹಾರಾಜ ಕಂಬಳವನ್ನು ಲ️ಕ್ಷಾಂತರ ಮಂದಿ ವೀಕ್ಷಿಸುತ್ತಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಗರಿಂತೂ ಸಿಕ್ಕಿದ್ದೇ ಚಾನ್ಸು ಅಂತ ಅರಮನೆ ಮೈದಾನದ ಕಡೆಗೆ ಆಗಮಿಸುತ್ತಿದ್ದಾರೆ.

ಕರಾವಳಿ ಮೈದಾನದಲ್ಲಿ ಎಲ್ಲಿ ನೋಡಿದರೂ ತುಳು ಮತ್ತು ಕುಂದಾಪುರ ಕನ್ನಡ ಮಾತನಾಡುವ ಜನರೇ ಕಾಣ ಸಿಗುತ್ತಿದ್ದಾರೆ. ಸಂತಸದಿಂದ, ನಮ್ಮ ಊರಿನ ಸಾಂಸ್ಕೃತಿಕ ಗರಿಮೆಯನ್ನು ಅತ್ಯಂತ ಹೆಮ್ಮೆಯಿಂದ ತಮ್ಮ ಇತರ ಸ್ನೇಹಿತರಿಗೆ ಹೇಳುವುದು ಅಲ️್ಲಲ್ಲಿ ಕಾಣಸಿಗುತ್ತಿತ್ತು.

ಜನ ಏನಂತಾರೆ?

ಪ್ರತಿ ವರ್ಷ ಈ ಕಂಬಳ ನಡೆದರೆ ಒಳ್ಳೆಯದು. ಕರಾವಳಿಯ ಸಂಸ್ಕೃತಿಯನ್ನು, ಆಚಾರ ವಿಚಾರಗಳನ್ನು ಬೆಂಗಳೂರಿಗರಿಗೆ ತಿಳಿಸುವ ಈ ಯೋಜನೆ ಅತ್ಯುತ್ತಮ ಎಂದೇ ಹೇಳಬಹುದು. ಮುಂದಿನ ಪೀಳಿಗೆಗೆ ಇಂತಹ ವಿಚಾರಗಳ ಬಗ್ಗೆ ಹೇಳುವ ಜವಾಬ್ದಾರಿಯು ನಮ್ಮಲ್ಲಿದೆ. – ಮಧುಶ್ರೀ ಎಸ್ ಶೆಟ್ಟಿ ಕುಂದಾಪುರ (ವಿಜಯನಗರ ಬೆಂಗಳೂರು)

Advertisement

ತುಂಬಾ ಖುಷಿಯಾಗುತ್ತಿದೆ. ಪ್ರತಿ ದಿನ ಅದೇ ಕೆಲ️ಸ ಮಾಡಿ ಬೇಸರಗೊಂಡಿದ್ದ ಜನರಿಗೆ ಇದೊಂದು ರೀತಿಯ ಆಹ್ಲಾದ ನೀಡುತ್ತಿದೆ. ಬೆಂಗಳೂರಿನ ಜನರು ಇದನ್ನು ನೋಡಿರುವುದಿಲ್ಲ. ಹೀಗಾಗಿ ಅವರಿಗೆ ಕಂಬಳ ತೋರಿಸುವುದು ನಮಗೆ ಖುಷಿ. ಪ್ರತಿ ವರ್ಷ ನಡೆದರೆ ಸಂತೋಷ. – ನಿತಿನ್ ಪುತ್ತೂರು (ಸಿ.ವಿ ರಾಮನ್ ನಗರ ಬೆಂಗಳೂರು)

ಕೇವಲ️ ಸಂತೆ, ಜಾತ್ರೆ ನೋಡುವುದು ಮಾತ್ರವಲ್ಲ, ಈ ಹಿಂದೆ ಹಳ್ಳಿಯಲ್ಲಿ ದನ, ಕೋಣಗಳನ್ನು ಸಾಕುತ್ತಿದ್ದವರಿಗೆ ಮತ್ತೆ ಕೋಣಗಳನ್ನು ನೋಡುವ ಅವಕಾಶ ಸಿಗುತ್ತಿದೆ. ಅಷ್ಟೇ ಅಲ್ಲದೆ ಊರ್ ಬದಿ ತಿಂಡಿಗಳನ್ನು ನೋಡಿ, ತಿಂದು ಸಂತಸವಾಯಿತು. – ಯೋಗರಾಜ ಭಟ್ ಸಾಸ್ತಾನ (ರಾಜ್ಯಪಾಲ️ರ ಬಾಣಸಿಗರು)

ತುಂಬಾ ಖುಷಿಯಾಗ್ತಿದೆ. ಊರಿನಲ್ಲಿದ್ದ ಅನುಭವವಾಗುತ್ತಿದೆ. ಕಂಬಳವನ್ನು ಇದೇ ಮೊದಲ️ ಬಾರಿಗೆ ನೋಡ್ತಾ ಇದ್ದೇವೆ. ಬೆಂಗಳೂರಿನಲ್ಲಿಯೂ ಕಂಬಳ ನೋಡಬಹುದು ಎಂದು ಯಾವತ್ತೂ ಯೋಚನೆ ಮಾಡಿರಲಿಲ್ಲ. ಈಗ ಕಣ್ಣೆದುರು ಕೋಣಗಳು ಓಡುತ್ತಿರುವುದನ್ನು ಕಂಡು ಬಹಳ ಸಂತಸವಾಗುತ್ತಿದೆ. – ಜ್ಯೋತ್ಸಾನಾ ಎನ್.ಬಿ️

ಮತ್ತಿಕೆರೆ

ಕಂಬಳ ನೋಡುವುದು ಇದೇ ಮೊದಲೇನಲ️್ಲ. ಆದರೆ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಕಾರಣ ಊರಿಗೆ ಹೋಗಿ ಕಂಬಳ ನೋಡುವುದು ಕಷ್ಟ. ಆದರೆ ಈಗ ಇಲ್ಲೇ ಕಂಬಳ ಆಗುತ್ತಿರುವ ಕಾರಣ ಮಕ್ಕಳನ್ನು ಕರೆದುಕೊಂಡು ಬಂದಿದ್ದೇವೆ. ತುಂಬಾ ಸಂತೋಷವಾಗುತ್ತಿದೆ. – ಮಮತಾ ರಾಮ್ ಕುಮಾರ್

ಸೋಮಶೆಟ್ಟಿ ಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next