Advertisement

ಈ ದೇಶಗಳು ಆರಂಭದಲ್ಲೇ ಏನು ಮಾಡಿದ್ದವು?

09:12 AM Apr 06, 2020 | mahesh |

ಮಣಿಪಾಲ: ಪ್ರಪಂಚಾದ್ಯಂತ ಕೋವಿಡ್-19 ಸೋಂಕು ಹರಡಿದೆ. ಕೋವಿಡ್-19 ಮೊದಲ ಪ್ರಕರಣ ಪತ್ತೆಯಾಗಿ ಇಂದಿಗೆ 139 ದಿನಗಳಾಗಿವೆ. ಈ ಅವಧಿಯಲ್ಲಿ ಕೆಲವು ದೇಶ ಗಳು ಸೋಂಕಿನ ಪರೀಕ್ಷೆಯಲ್ಲಿ ಮುಂದೆ ಇವೆ. ಮತ್ತೆ ಕೆಲವು ರಾಷ್ಟ್ರಗಳು ಆರಂಭದಲ್ಲಿ ಎಚ್ಚೆತ್ತರೂ ಆ ಬಳಿಕ ಎಡವಿ ಇಂದು ಸಂಕಷ್ಟ ಎದುರಿಸುತ್ತಿವೆ. ಇನ್ನೂ ಕೆಲವು ರಾಷ್ಟ್ರಗಳು ಎಚ್ಚೆತ್ತಕೊಂಡರೂ ಕೆಲವು ದೋಷಗಳಿಂದ ರೋಗ ಹಬ್ಬಿದೆ. ಇನ್ನೂ ಕೆಲವು ರಾಷ್ಟ್ರಗಳು ಸಾಮರ್ಥಯ ಇದ್ದರೂ ತಡವಾಗಿ ಎಚ್ಚೆತ್ತುಕೊಂಡ ಪರಿಣಾಮ ಸೂತಕದ ಛಾಯೆಯಲ್ಲಿವೆ.

Advertisement

ಚೀನ
ಸಾರ್ಸ್‌ನಂತಹ ಸೋಂಕು ಆ ದೇಶಕ್ಕೆ ಬಡಿದಿತ್ತು. ಅದರ ಅನುಭವದೊಂದಿಗೆ ಕೋವಿಡ್-19 ಸೋಂಕಿನ ಪರೀಕ್ಷೆಯನ್ನು ಚೀನ ಇತರರಿಗಿಂತ ಮುಂಚೂಣಿಯಲ್ಲಿ ನಿಂತು ಮಾಡುತ್ತಿದೆ. ಮಾರ್ಚ್‌ ಅಂತ್ಯದ ವೇಳೆಗೆ ಅದು 3,20,000 ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಿದೆ. ಸೋಂಕಿನ ವಿವರಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ವೆಬ್‌ ಸೈಟ್‌ನಲ್ಲಿ ಜನವರಿ 24 ರಂದು ವುಹಾನ್‌ ಲಾಕ್‌ಡೌನ್‌ ಘೋಷಿಸಿದ ಬೆನ್ನಲ್ಲೇ ಪ್ರಕಟಿಸಿತು. ಸಾರ್ಷ್‌ ಅನ್ನು ಗುರುತಿಸಲು ಸಹಾಯ ಮಾಡಿದ ಹಾಂಗ್‌ ಕಾಂಗ್‌ ತಂಡ ಇದಕ್ಕೂ ದುಡಿಯುತ್ತಿದೆ. ನಾವು ಈ ಹಿಂದೆ ಇಂಥ ಸಂದರ್ಭಗಳನ್ನು ಎದುರಿಸಿದ್ದರಿಂದ, ಸೋಂಕಿನ ಪರೀಕ್ಷೆ ನಡೆಸುವ ಕ್ರಮದಲ್ಲಿ ಸುಧಾರಣೆ ತರಲು ಸಾಧ್ಯವಾಯಿತು ಎಂದು ತಂಡವನ್ನು ಮುನ್ನಡೆಸಿದ ಲಿಯೋ ಪೂನ್‌ ಹೇಳಿದರು. ಈ ಕಾರಣಕ್ಕಾಗಿ ಚೀನ ವೇಗದಲ್ಲಿ ಸೋಂಕಿನ ಪರೀಕ್ಷೆ ಮಾಡುತ್ತಿದೆ. ವಿಶ್ವದ ಪ್ರಮುಖ ರಾಸಾಯನಿಕ ಉತ್ಪಾದನೆಯಲ್ಲಿ ಒಂದಾದ ಚೀನಕ್ಕೆ ಕಿಟ್‌ಗಳನ್ನು ತ್ವರಿತವಾಗಿ ಉತ್ಪಾದನೆಗೊಳಿಸಲು ಸಾಧ್ಯವಾಗಿದೆ.

ಜರ್ಮನಿ
ಕೋವಿಡ್-19 ಜಾಗತಿಕ ಸಮಸ್ಯೆಯಾಗಿ ರೂಪು ತಳೆಯುವ ಸೂಚನೆ ದೊರೆಯುತ್ತಿದ್ದಂತೆ ಜರ್ಮನಿ ಚುರುಕಾಯಿತು. ಈ ಸಾಂಕ್ರಾಮಿಕ ರೋಗವನ್ನು ನಿಧಾನಗೊಳಿಸಲು ಮುಂಜಾಗ್ರತೆಯನ್ನು ಕೂಡಲೇ ಆರಂಭಿಸಿತು. ಜನವರಿ ಆರಂಭದಲ್ಲಿ ಬರ್ಲಿನ್‌ನ ಓಲ್ಪರ್ಟ್‌ ಲ್ಯಾಂಡ್ಚ್ ಎಂಬ ವಿಜ್ಞಾನಿ ಸಾರ್ಷ್‌ಗೆ ಕೊರೊನಾ ವೈರಸ್‌ ನ್ನು ಹೋಲಿಸಿ, ಪರೀಕ್ಷಾ ಕಿಟ್‌ ಅಗತ್ಯವನ್ನು ಪ್ರತಿಪಾದಿಸಿದರು. ಆ ಕೂಡಲೇ ಜರ್ಮನಿ ಆ ದಿಸೆಯಲ್ಲಿ ಕಾರ್ಯೋನ್ಮುಖವಾಯಿತು. ಸಾರ್ಷ್‌ ಮತ್ತು ಕೋವಿಡ್-19 ವೈರಸ್‌ ಗಳನ್ನು ಆಧರಿಸಿ ತಮ್ಮ ಮೊದಲ ಪರೀಕ್ಷಾ ಕಿಟ್‌ ಅನ್ನು ವಿನ್ಯಾಸಗೊಳಿಸಿತು. ಚೀನದ ಪರೀಕ್ಷೆಯ ಮೊದಲು ಜನವರಿ 17 ರಂದು WHO ಈ ಪ್ರೋಟೋಕಾಲ್‌ ಅನ್ನು ಪ್ರಕಟಿಸಿತು. ಫೆಬ್ರವರಿ ಅಂತ್ಯದ ವೇಳೆಗೆ 4 ಮೀ. ಕಿಟ್‌ಗಳನ್ನು ಉತ್ಪಾದಿಸಿತು. ಈಗ ವಾರಕ್ಕೆ 1.5 ಮೀ. ಕಿಟ್‌ಗಳನ್ನು ಉತ್ಪಾದಿಸುತ್ತಿದೆ. ಬಳಿಕ ಸಾಮೂಹಿಕ ಪರೀಕ್ಷೆಗೆ ಸಹಿ ಹಾಕಿತು. ಇದರ ಪರಿಣಾಮವಾಗಿ ಪ್ರತಿದಿನ 12,000 ಪರೀಕ್ಷೆಗಳನ್ನು ಮಾಡಲು ಸಾಧ್ಯವಾಗಿದೆ.

ದಕ್ಷಿಣ ಕೊರಿಯಾ
ಪರೀಕ್ಷೆಗೆ ಬಂದಾಗ ದಕ್ಷಿಣ ಕೊರಿಯಾ ಆಕ್ರಮಣಕಾರಿಯಾಗಿ ಕೋವಿಡ್-19 ವಿರುದ್ಧ ಸಮರ ಸಾರಿದೆ. ಯುಕೆಯಲ್ಲಿ ಕೋವಿಡ್-19 ಬೇಗ ಹರಡಬಹುದು ಎಂದು ಅದರ ಅಧ್ಯಕ್ಷ ಬೋರಿಸ್‌ ಜಾನ್ಸನ್‌ ಪ್ರಜೆಗಳಿಗೆ ಎಚ್ಚರಿಸಿದ ಕೂಡಲೇ ದಕ್ಷಿಣ ಕೊರಿಯಾದ ಆರೋಗ್ಯ ಅಧಿಕಾರಿಗಳು ಚುರುಕಾದರು. ವುಹಾನ್‌ ಜನರಿಂದ ಪಾಠ ಕಲಿತರು. ರೋಗ ಹರಡದಂತೆ ತತ್‌ ಕ್ಷಣ ಮಾಡಬಹುದಾದ ಅವಕಾಶಗಳನ್ನು ಪಟ್ಟಿ ಮಾಡಿದರು. ದಿನಕ್ಕೆ ಸುಮಾರು 15,000 ಪರೀಕ್ಷೆಗಳನ್ನು ಆರಂಭದಲ್ಲೇ ನಡೆಸಲಾಯಿತು. ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚು ಪರೀಕ್ಷೆ ಗಳನ್ನು ಉಚಿತವಾಗಿ ನಡೆಸಿದೆ. ಡ್ರೆ„ವ್‌-ಥ್ರೂ ಟೆಸ್ಟಿಂಗ್‌ ಬೂತ್‌ಗಳನ್ನು ತೆರೆದಿದ್ದಾರೆ. ಒಂದು ವಾಹನದಲ್ಲಿ ಕುಳಿತು ಕರೆ ಮಾಡಿದರೆ ಅಲ್ಲಿಂದಲೇ ಪರೀಕ್ಷೆ ನಡೆಸಿ ಮನೆಗೆ ತಲುಪಿ ಸಲಾಗುತ್ತದೆ. ಆಸ್ಪತ್ರೆಯ ಮೆಟ್ಟಿಲು ಹತ್ತಬೇಕಿಲ್ಲ.

ಐಲ್ಯಾಂಡ್‌
ಸಣ್ಣ ರಾಷ್ಟ್ರ. ಆದರೆ ತಾಂತ್ರಿಕ ಮತ್ತು ಪ್ರಾಯೋಗಿಕವಾಗಿ ಅಷ್ಟೇ ಶ್ರೀಮಂತ ಹಿನ್ನೆಲೆಯನ್ನು ಹೊಂದಿದೆ. ಇದು ಪ್ರಪಂಚದ ಇತರ ರಾಷ್ಟ್ರಗಳಿಗಿಂತ ಹೆಚ್ಚಿನ ಸಂಖ್ಯೆ ಯಲ್ಲಿ ಕೋವಿಡ್‌ 19 ಶಂಕಿತರನ್ನು ಪರೀಕ್ಷಿಸಿದೆ. ಬಹ ತೇಕ ಜನರಲ್ಲಿ ರೋಗದ ಯಾವುದೇ ಲಕ್ಷಣಗಳನ್ನು ಕಂಡು ಬಂದಿಲ್ಲ. ಈ ರಾಷ್ಟ್ರ ಹೆಚ್ಚಿನ ಪರೀಕ್ಷಾ ಸಾಮರ್ಥಯಗಳನ್ನು ಹೊಂದಿದೆ. ಆರಂಭದಲ್ಲಿ ಸೋಂಕಿತರು ಪರೀಕ್ಷಿಸಿದ ಕಾರಣ ಇಂದು ಇಡೀ ದೇಶ ನಷ್ಟದ ದವಡೆಯಿಂದ ಪಾರಾಗಿದೆ.

Advertisement

ಇಟಲಿ
ಜರ್ಮನಿಯ ಬಳಿಕದ ಸ್ಥಾನದಲ್ಲಿ ಇಟಲಿ ಸುಮಾರು 2 ಲಕ್ಷ ಪರೀಕ್ಷೆಗಳನ್ನು ಮಾಡಿದೆ. ವೆನಿಸ್‌ ಬಳಿಯ ವೋ ಪಟ್ಟಣದ ಎಲ್ಲಾ 3,000 ನಿವಾಸಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಬಳಿಕ ಸೋಂಕು ಗಾಳಿಯಂತೆ ಹರಡಿ ಅಪಾರ ಪ್ರಮಾಣದ ಸಾವಿಗೆ ಕಾರಣವಾಗಿದೆ. ತನ್ನ ಹತೋಟಿಯನ್ನೇ ಕಳೆದುಕೊಂಡಿತು ಇಟಲಿ. ಎರಡು ದಿನಗಳಿಂದಷ್ಟೇ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಮಾಧಾನದ ನಿಟ್ಟುಸಿರು ಬಿಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next