Advertisement
ಶೇ. 31ರಷ್ಟು ಕುಸಿತದೇಶೀಯ ಪ್ರಯಾಣಿಕರ ವಾಹನಗಳ ಮಾರಾಟದಲ್ಲಿ 31.57ರಷ್ಟು ಕುಸಿತ ಕಂಡಿದೆ. ಹೀಗೆಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರು ಬಿಡುಗಡೆ ಮಾಡಿರುವ ವರದಿ ಹೇಳಿದೆ.
2020ರಲ್ಲಿ ಮಾರುಕಟ್ಟೆಗೆ ಲಗ್ಗೆಇಡಲಿರುವ ಬಿಎಸ್-6 ಕಾರಿನ ಮೇಲೆ ಗ್ರಾಹಕರು ಹೆಚ್ಚು ಆಕರ್ಷಿಕರಾಗಿದ್ದಾರೆ. ಇದು ಬಿಎಸ್-4 ಕಾರಿನ ಮಾರಾಟದ ಮೇಲೆ ಪ್ರಭಾವ ಬೀರಿದ್ದು, ಬೇಡಿಕೆ ಕುಸಿಯಲು ಒಂದು ಕಾರಣವಾಗಿದೆ. ಇದರ ಹೊರತಾಗಿ 9 ತಿಂಗಳಿನಿಂದ ಕಾರಿನ ಬೆಲೆಯಲ್ಲಿ ಪ್ರತಿ ತಿಂಗಳಿಗೆ ಶೇ. 15ರಷ್ಟು ಹೆಚ್ಚಾಗಿದೆ. ಏರ್‌ಬ್ಯಾಗ್, ರಿವರ್ಸ್ ಸೆನ್ಸಾರ್ ಹಾಗೂ ಎಬಿಸಿ ಮತ್ತು ಕ್ರ್ಯಾಶ್ ಕನ್ಫìಮಿಟಿ ಅಳವಡಿಕೆ ಕಡ್ಡಾವಾಗಿದೆ. ಇಂತಹ ಕೆಲವೊಂದು ನಿಬಂಧನೆಗಳು ಗ್ರಾಹಕರ ಮೇಲೆ ಪ್ರಭಾವ ಬೀರಿದೆ. ತೈಲ ಬೆಲೆ ಏರಿಕೆ
ಭಾರತೀಯ ತೈಲ ನಿಗಮ ಮಂಡಳಿ ನೀಡಿರುವ ಅಂಕಿ-ಅಂಶಗಳ ಪ್ರಕಾರ ನಾಲ್ಕು ವರ್ಷದಿಂದ ತೈಲ ಬೆಲೆಯಲ್ಲಿ ಶೇ. 15ರಷ್ಟು ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿಸಲಾಗಿದ್ದು ಮತ್ತೂಂದು ಕಾರಣವಾಗಿದೆ.
Related Articles
ಒಟ್ಟು ದೇಶೀಯ ಉತ್ಪನ್ನಗಳ ಮಾರಾಟ ಪ್ರಮಾಣ ಶೇ. 5ಕ್ಕೆ ಇಳಿದಿದ್ದು, ಜೂನ್ ತ್ತೈಮಾಸಿಕದಲ್ಲಿ 6 ವರ್ಷಗಳಲ್ಲಿ ದಾಖಲೆ ಮಟ್ಟದ ಕುಸಿತ ಕಂಡಿದೆ. ಮಾರ್ಚ್ ತ್ತೈಮಾಸಿಕದಲ್ಲಿ ಬೇಡಿಕೆ ಕನಿಷ್ಠ ಎಂದರೆ ಶೇ. 3.1ರಷ್ಟು ಇಳಿಕೆಯಾಗಿದೆ. 2 ವರ್ಷಗಳಲ್ಲಿ ಸೆನ್ಸೆಕ್ಸ್ ಶೇ. 3ರಷ್ಟು ಕುಸಿತ ಕಂಡಿದ್ದು, ಷೇರು ಮಾರುಕಟ್ಟೆಯ ಮೇಲೂ ಇದು ಪರಿಣಾಮ ಬೀರಿದೆ. ಪರೋಕ್ಷವಾಗಿ ತಲಾದಾಯದ ಮೇಲೆ ಪರಿಣಾಮ ಬೀರಿದೆ.
Advertisement
ಮೆಟ್ರೋ , ಓಲಾ, ಊಬರ್ ಕಾರಣ? ಅತಿಯಾದ ವಾಹನ ದಟ್ಟನೆ, ವಾಹನ ನಿಲುಗಡೆ ಸಮಸ್ಯೆ ಹಾಗೂ ಕಳೆಪೆ ರಸ್ತೆಗಳು ಗ್ರಾಹಕರನ್ನು ಕಟ್ಟಿ ಹಾಕಿವೆ. ಸ್ವಂತ ವಾಹನಗಳನ್ನು ಖರೀದಿ ಮಾಡಿ ದಂಡ ಪಾವತಿ ದುಬಾರಿ ದಂಡ ಪಾವತಿ ಮಾಡುವ ಬದಲು ಲಭ್ಯವಿರುವ ಟ್ಯಾಕ್ಸಿಗಳು, ಓಲಾ, ಊಬರ್‌ಗಳ ಸೇವೆ ಪಡೆಯುತ್ತಿದ್ದಾರೆ. ದೊಡ್ಡ ನಗರಗಳಲ್ಲಿ ಮೆಟ್ರೋ ಸೇವೆಗಳು ಲಭ್ಯವಿದ್ದು, ಕಾರು ಮಾರಾಟಕ್ಕೆ ಹೊಡೆತ ನೀಡಿರುವ ಸಾಧ್ಯತೆ ಇದೆ. ಐಷಾರಾಮಿ ಕಾರುಗಳ ಬೇಡಿಕೆ
ಕಾರು ಖರೀದಿಸುವ ಗ್ರಾಹಕರು ತುಸು ಐಷಾರಾಮಿ ಕಾರುಗಳಿಗೆ ಬೇಡಿಕೆ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಸಾಮಾನ್ಯ ಕಾರುಗಳು, ಆರಂಭಿಕ ಶ್ರೇಣಿಯ ಕಾಂಪ್ಯಾಕ್ಟ್ ಮತ್ತು ಹ್ಯಾಚ್‌ಬ್ಯಾಕ್‌ಗಳ ಮಾರಾಟದಲ್ಲಿ ಇಳಿಕೆಯಾಗಿದೆ ಎಂದು ಊಹಿಸಲಾಗಿದೆ. ಹೆಚ್ಚಿದ ಬಡ್ಡಿದರ
ಕಳೆದ ಹಲವಾರು ತಿಂಗಳುಗಳಲ್ಲಿ ಆರ್‌ಬಿಐ ರೆಪೋ ದರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಬ್ಯಾಂಕುಗಳು ಗ್ರಾಹಕ ಉಪಯೋಗಿ ಯೋಜನೆಗಳನ್ನು ಕಲ್ಪಿಸಿಕೊಡುವುದನ್ನು ನಿಲ್ಲಿಸಿವೆ. ಇದು ಕಂತುಗಳಲ್ಲಿ ವಾಹನ ಕೊಂಡುಕೊಳ್ಳುವವರ ಮೇಲೆ ಪರಿಣಾಮ ಬೀರಿದೆ. ನೋಂದಣಿ, ವಿಮೆ ಮೊತ್ತ ಏರಿಕೆ
ಇತ್ತೀಚಿನ ದಿನಗಳಲ್ಲಿ ವಾಹನ ನೋಂದಣಿ ಶುಲ್ಕ, ವಿಮೆ ಮೊತ್ತದಲ್ಲಿ ಏರಿಕೆಯಾಗಿದೆ. ಮೂರು ವರ್ಷದವರೆಗೆ ವಿಮೆ ಕಾಲಾವಧಿಯನ್ನು ವಿಸ್ತರಿಸಲಾಗಿದೆ. ಮಾತ್ರವಲ್ಲದೇ ನೂತನ ಮೋಟಾರ್ ವಾಹನ ಕಾಯ್ದೆಯೂ ಪರಿಣಾಮ ಬೀರಿರುವ ಸಾಧ್ಯತೆ ಇದೆ. ಕಳಪೆ ರಸ್ತೆಗಳು
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಗಳನ್ನು ವಿಸ್ತರಿಸಿದ್ದರೂ, ನಗರಗಳಲ್ಲಿನ ರಸ್ತೆಗಳ ಗುಣಮಟ್ಟ ಕಳಪೆಯಾಗಿದೆ. ಹೆದ್ದಾರಿಗಳೇ ಕಳಪೆಯಾಗಿದೆ. ಹೆಚ್ಚಿದ ಜಿಎಸ್‌ಟಿಯೂ ಗ್ರಾಹಕರನ್ನು ತಡೆಹಿಡಿದಿರುವ ಸಾಧ್ಯತೆ ಇದೆ. ಗೊಂದಲ ಸೃಷ್ಟಿಸಿದ ಇವಿ ಪಾಲಿಸಿ
ಬ್ಯಾಟರಿ ಚಾಲಿತ ವಾಹನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಪೆಟ್ರೋಲ್-ಡೀಸೆಲ್ ಬೆಲೆಗಿಂತ ಅಗ್ಗವಾಗಲಿದೆ. ಇಂಧನ ಕಾರುಗಳಿಗಿಂತ ಇಲೆಕ್ಟ್ರಾನಿಕ್ ಕಾರ್‌ಗಳನ್ನು ಖರೀದಿ ಉತ್ತಮ ಎಂಬ ಭಾವನೆಯಿಂದ ಸದ್ಯ ಕಾರು ಖರೀದಿ ಬೇಡ ಎಂಬ ಭಾವನೆಯೂ ಗ್ರಾಹಕರದ್ದು ಎನ್ನಲಾಗಿದೆ. ಕಾರುಗಳ ಮಾರಾಟ (ಶೇ. 41ಕುಸಿತ)
-2019
1,15,957 -2018
1,96,847 ಟಾಪ್ 5 ಕಾರು ತಯಾರಿಕ ಸಂಸ್ಥೆಗಳ ಮಾರಾಟ
– ಮಾರುತಿ ಸುಜುಕಿ 65,993
– ಹುಂಡೈ 22,716
– ಹೋಂಡಾ 6830
– ಟೊಯೋಟಾ 5,017
– ರೆನೋ 4,681