ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Advertisement
ಮತದಾನದ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ಮತ ಚಲಾವಣೆಯಿಂದ ನಮಗೆ ನಮ್ಮ ಹಕ್ಕುಗಳು ಸಿಗುತ್ತದೆ ಎಂಬ ನಂಬಿಕೆ ನಮಗಿಲ್ಲ. ಉದ್ಯೋಗ, ವಸತಿ ಸೌಲಭ್ಯಗಳಿಲ್ಲದೆ ಕಳೆದ 20 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಈ ಸಮಸ್ಯೆಗೆ ನಮಗೆ ಈವರೆಗೆ ಪರಿಹಾರ ಸಿಕ್ಕಿಲ್ಲ. ಮತ ಚಲಾಯಿಸುವುದರಿಂದ ನಮ್ಮ ಸಮಸ್ಯೆಗೆ ಪರಿಹಾರ ಸಿಗುವುದಾದರೆ ನಾವು ಮುಂದೆ ಬರುತ್ತೇವೆ. ಲಿಂಗತ್ವ ಅಲ್ಪಸಂಖ್ಯಾಕರರಾದ ನಮಗೆ ಮತದಾನದ ಹಕ್ಕು ಮಾತ್ರವಲ್ಲ, ಸಾಮಾನ್ಯ ಜನರಿಗೆ ದೊರೆಯುವ ಎಲ್ಲ ಹಕ್ಕುಗಳು ದೊರೆಯಬೇಕು ಎಂದು ಅವರು ಮನವಿ ಮಾಡಿಕೊಂಡರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನ ಗೌಡ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾಕರನ್ನು ತುಚ್ಚವಾಗಿ ಕಾಣುವ ಸ್ಥಿತಿ ಈಗಿಲ್ಲ. 2012ರಲ್ಲಿ ಉಚ್ಚ ನ್ಯಾಯಾಲಯ ಲಿಂಗತ್ವ ಅಲ್ಪಸಂಖ್ಯಾಕರನ್ನು 4ನೇ ದರ್ಜೆಯ ನೌಕಕರಾಗಿ ನೇಮಕ ಮಾಡಿತ್ತು. ಇವರ ಪರವಾಗಿ ನ್ಯಾಯಲಯ ನೀಡಿದ ಆದೇಶಗಳು ಸರಿಯಾಗಿ ಪಾಲನೆಯಾದರೆ ಲಿಂಗತ್ವ ಅಲ್ಪಸಂಖ್ಯಾಕರರ ಜೀವನ ಇನ್ನಷ್ಟು ಸುಖಕರವಾಗಲಿದೆ. ಮತದಾನ ಪ್ರಕ್ರಿಯೆಯಲ್ಲಿ ಎಲ್ಲ ಅಲ್ಪಸಂಖ್ಯಾಕರು ಪ್ರಮಾಣಿಕವಾಗಿ ಭಾಗವಹಿಸಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುಂದರ ಪೂಜಾರಿ, ಲಿಂಗತ್ವ ಅಲ್ಪಸಂಖ್ಯಾಕಕರ ರಾಜ್ಯ ಮಟ್ಟದ ಸಂಘಟನೆ ಸಾರಥ್ಯದ ಪ್ರತಿನಿಧಿ ಸವಿತಾ, ನವಸಹಜ ಸಂಘಟನೆಯ ಪ್ರವೀಣ್, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ| ರಾಜೇಶ್ವರಿ ದೇವಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್, ರುಡ್‌ಸೆಟ್‌ನ ಅಜಿತ್ ಕೆ.ಆರ್., ಗಿರಿಧರ್ ಸಾಲ್ಯಾನ್ ಉಪಸ್ಥಿತರಿದ್ದರು.
Related Articles
ಸಂವಿಧಾನದತ್ತವಾಗಿರುವ ಎಲ್ಲ ಹಕ್ಕುಗಳು ಪ್ರತಿಯೊಬ್ಬ ನಾಗರಿಕನಿಗೂ ಲಭಿಸಬೇಕು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಲಿಂಗತ್ವ ಅಲ್ಪಸಂಖ್ಯಾಕಕರಿಗೆ ಮತದಾನದ ಹಕ್ಕು ನೀಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 250 ಮಂದಿ ಲಿಂಗತ್ವ ಅಲ್ಪಸಂಖ್ಯಾಕರಿದ್ದು, ಅದರಲ್ಲಿ ಬಹುತೇಕ ಮಂದಿ ವಲಸೆ ಬಂದಿರುವುದರಿಂದ ಅವರಿಗೆ ಸರಿಯಾದ ವಿಳಾಸವಿಲ್ಲದೆ ಸಮಸ್ಯೆಯಾಗಿದೆ. ಶೀಘ್ರವೇ ಲಿಂಗತ್ವ ಅಲ್ಪಸಂಖ್ಯಾಕರಿಗೆ ವಾಸಸ್ಥಳ ದೃಢೀಕರಣ ನೀಡುವ ಬಗ್ಗೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳಲಿದ್ದೇವೆ.
– ಎಂ.ಆರ್. ರವಿ,
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಜಿಲ್ಲಾ ಪಂಚಾಯತ್
Advertisement