Advertisement

ಕಂಕಣ ಸೂರ್ಯಗ್ರಹಣ ಫ‌ಲಾಫ‌ಲಗಳೇನು?

10:29 AM Dec 22, 2019 | Lakshmi GovindaRaj |

ಭೂ ಜೀವಿಗಳಿಗೆ ಗ್ರಹಣ ಎನ್ನುವುದು ಒಂದು ಅಪೂರ್ವ ಸಂದರ್ಭ. ಸೂರ್ಯ, ಚಂದ್ರ ಹಾಗೂ ಭೂಮಿ, ಒಂದೇ ಸಮಾನಾಂತರ ರೇಖೆಗೆ ಬಂದಾಗ, ಸೂರ್ಯನ ಕಿರಣಗಳು ಭೂಮಿಗೆ ತಲುಪದಂಥ ಈ ಸ್ಥಿತಿ ವಿಜ್ಞಾನಕ್ಕೆ ಎಷ್ಟು ವಿಶೇಷವೋ, ಜ್ಯೋತಿಷ್ಯ ಶಾಸ್ತ್ರಕ್ಕೂ ಅಷ್ಟೇ ವಿಶೇಷ. ಜಗತ್ತಿನ ನಿತ್ಯ ಪ್ರಕ್ರಿಯೆಗಳು ಗ್ರಹಗಳ ಆಧೀನವಾಗಿ ನಡೆಯುವುದರಿಂದ, ನವಗ್ರಹಗಳಲ್ಲೇ ಪ್ರಧಾನ ಆಗಿರುವ ಸೂರ್ಯನಿಗೆ ಡಿ.26ರ ಗುರುವಾರದಂದು, “ಕೇತುಗ್ರಸ್ತ ಸೂರ್ಯಗ್ರಹಣ’ ಸಂಭವಿಸುತ್ತಿದೆ. ಕಂಕಣಾಕೃತಿ ಸೂರ್ಯ ಗ್ರಹಣ ಅಂತಲೂ ಇದನ್ನು ಕರೆಯುತ್ತಾರೆ. ಈ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳು, ಫ‌ಲಾಫ‌ಲತೆಯ ಒಂದು ನೋಟ ಇಲ್ಲಿದೆ…

Advertisement

ಖಂಡಗ್ರಾಸ ಕೇತುಗ್ರಸ್ತ ಸೂರ್ಯ ಗ್ರಹಣ
ಡಿ.26, ಗುರುವಾರ
ಗ್ರಹಣ ಸ್ಪರ್ಶ ಕಾಲ: ಬೆಳಗ್ಗೆ 8 ಗಂಟೆ 4 ನಿಮಿಷ
ಮಧ್ಯಕಾಲ: ಬೆಳಗ್ಗೆ 9.25
ಮೋಕ್ಷ ಕಾಲ: ಬೆಳಗ್ಗೆ 11.04
ಗ್ರಹಣ ನಕ್ಷತ್ರ: ಮೂಲ
ಕರ್ನಾಟಕದಲ್ಲಿ ಗ್ರಾಸ ಪ್ರಮಾಣ: ಶೇ.91.5

ಎಲ್ಲೆಲ್ಲಿ?
– ಭಾರತ ಸಹಿತವಾಗಿ ಸೌದಿ ಅರೇಬಿಯ, ಕತಾರ್‌, ಸುಮಾತ್ರ, ಒಮನ್‌, ಮಲೇಷ್ಯಾ, ಸಿಂಗಾಪುರ, ಉತ್ತರ ಮರೀನಾ, ಶ್ರೀಲಂಕಾಗಳಲ್ಲಿ ಗೋಚರ.

– ದಕ್ಷಿಣ ಭಾರತದ ಮಧುರೈ, ಚೆರವತ್ತೂರು, ಕೊಯಮತ್ತೂರು, ಕೋಯಿನಾಡ್‌ನ‌ಲ್ಲಿ ಪೂರ್ಣ ಪ್ರಮಾಣದಲ್ಲಿ, ಉಳಿದ ಭಾಗದಲ್ಲಿ ಖಂಡಗ್ರಾಸವಾಗಿ ಗೋಚರ.

– ಕೇರಳದ ಚೇರುವತ್ತೂರಿನಲ್ಲಿ ಪೂರ್ಣವಾಗಿ ಗೋಚರಿಸುವುದರಿಂದ ಗ್ರಹಣ ವೀಕ್ಷಕರಿಗೆ ಇದು ಸೂಕ್ತ ಸ್ಥಳ. ಅಲ್ಲಿ ಹಗಲು ಶೇ.91ರಷ್ಟು ಕತ್ತಲು ಆವರಿಸಲಿದೆ.

Advertisement

ಏನು ಮಾಡಬಹುದು? ಏನು ಮಾಡಬಾರದು?
ಬಾಲಕರು, ವೃದ್ಧರು, ರೋಗಿಗಳನ್ನು ಹೊರತುಪಡಿಸಿ ಉಳಿದವರಿಗಷ್ಟೇ ಇದು ಅನ್ವಯ. ಡಿ.25ರ ಸಂಜೆ 6.01ರಿಂದ ಗ್ರಹಣ ಮೋಕ್ಷದ ವರೆಗೂ ಅಂದರೆ 26ರ ಬೆಳಗ್ಗೆ 11.04ರ ವರೆಗೂ ಭೋಜನ ಅಥವಾ ಯಾವುದೇ ಆಹಾರ ಸೇವನೆ ನಿಷಿದ್ಧ. ಗ್ರಹಣ ಮೋಕ್ಷದ ನಂತರ ಸ್ನಾನ, ಶುದ್ಧಿಯ ನಂತರ ಊಟ ಮಾಡಬಹುದು. ಮಲಮೂತ್ರ ವಿಸರ್ಜನೆ, ನಿದ್ರೆ, ಜಲಪಾನ, ಆಹಾರ ವಿಕ್ರಯ, ಕೃಷಿ ಕೆಲಸ, ನೀರಿನಲ್ಲಿ ಮಾಡುವ ಯಾವುದೇ ಕೆಲಸ ಮಾಡುವಂತಿಲ್ಲ.

ನಿತ್ಯಕರ್ಮ, ಪೂಜೆಯನ್ನು ಬೆಳಗ್ಗೆ 8ರವರೆಗೆ ಮಾಡುವುದು ಸೂಕ್ತ. ಗ್ರಹಣ ಸ್ಪರ್ಶವಾದ ಮೇಲೆ ಸ್ನಾನಮಾಡಿ, ಜಪ, ದಾನ, ಮಂತ್ರ ಉಪದೇಶ. ದೇವ- ಪಿತೃತರ್ಪಣ ಮಾಡುವುದು ಉತ್ತಮ. ಸ್ತ್ರೀಯರು ಸಹಸ್ರನಾಮ- ಇತ್ಯಾದಿ ಶ್ಲೋಕ ಪಠಣ ಮಾಡಬಹುದು. ಗ್ರಹಣ ಕಾಲದಲ್ಲಿ ಬಿಸಿನೀರಿಗಿಂತ ತಣ್ಣೀರು, ಬಾವಿಗಿಂತ ಭೂಮಿಯ ಮೇಲಿರುವ ಕೆರೆ, ನದಿ, ಸಮುದ್ರ ಸ್ನಾನ ಮಾಡಿದರೆ, ಹೆಚ್ಚಿನ ಪುಣ್ಯ ಬರುತ್ತದೆ. ಗ್ರಹಣ ಕಳೆದ ನಂತರ ಅವಶ್ಯವಾಗಿ ಸ್ನಾನ ಮಾಡತಕ್ಕದ್ದು.

ಗ್ರಹಣ ಕಾಲದಲ್ಲಿ ಮಾಡುವ ಸ್ನಾನ, ಜಪ, ತರ್ಪಣ ಇತ್ಯಾದಿಗಳು ಬೇರೆ ದಿನ ಮಾಡುವ ಆಚರಣೆಗಿಂತ 4 ಪಟ್ಟು ಹೆಚ್ಚು ಫ‌ಲ ನೀಡುತ್ತವೆ. ಆಸ್ತಿಕರು ಈ ಕಾಲವನ್ನು ವ್ಯರ್ಥಮಾಡದೆ, ಸೂರ್ಯನ ಅಥವಾ ದೇವರ ಸಂಪೂರ್ಣ ಅನುಗ್ರಹ ಪಡೆಯಲು ಅನುಷ್ಠಾನ ಮಾಡುವುದು ಉತ್ತಮ. ಗ್ರಹಣ ಕಾಲದಲ್ಲಿ ಆದಿತ್ಯ ಹೃದಯ ಪಠಣ, ಸೂರ್ಯ ಸ್ತೋತ್ರ ಪಠಣ, ಸಮುದ್ರ ಸ್ನಾನ ಒಳ್ಳೆಯದು.

ಯಾರು ನೊಡಬಾರದು?
ಗರ್ಭಿಣಿಯರು, ರೋಗಿಗಳು, ಮಕ್ಕಳು, ಗ್ರಹಣ ದೋಷವಿರುವ ನಕ್ಷತ್ರದವರು ನೋಡಬಾರದು. ಉಳಿದವರು ಬಟ್ಟೆ, ಪರದೆ, ಗ್ಲಾಸ್‌ ಅಥವಾ ನೀರಿನಲ್ಲಿ ಕಾಣುವ ಬಿಂಬವನ್ನು ನೋಡಬಹುದು.

ಮನೆಯಲ್ಲಿ
– ಯಂತ್ರ, ವಿಗ್ರಹಗಳಿದ್ದಲ್ಲಿ ಗ್ರಹಣ ಸ್ಪರ್ಶಕ್ಕೆ ಮೊದಲು ನೀರಿಗೆ ತುಳಸಿ ಹಾಕಿ, ಮುಳುಗಿಸಿಟ್ಟು, ಗ್ರಹಣ ಮೋಕ್ಷವಾದ ನಂತರ ಸ್ನಾನ ಮಾಡಿ ಪೂಜಿಸಬೇಕು.

– ಹಿಂದಿನ ದಿನ ತಯಾರಿಸಿದ ಆಹಾರ ಸೇವನೆ ಸೂಕ್ತವಲ್ಲ. ಮಜ್ಜಿಗೆ, ತುಪ್ಪ, ಎಣ್ಣೆಯಿಂದ ಬೇಯಿಸಿದ ತಿಂಡಿ, ಹಾಲು, ಉಪ್ಪಿನಕಾಯಿಗಳಿಗೆ ದೋಷವಿರುವುದಿಲ್ಲ. ಆದರೆ, ಇವುಗಳಿಗೆ ಗ್ರಹಣ ಸ್ಪರ್ಶಕ್ಕಿಂತ ಮೊದಲು ದರ್ಬೆ ಅಥವಾ ತುಳಸಿ ದಳಗಳನ್ನು ಹಾಕಿರಬೇಕು.

ಅನಿಷ್ಠ ಫ‌ಲದವರಿಗೆ ಪರಿಹಾರ: ಗ್ರಹಣಕ್ಕೂ ಮೊದಲು, ಇಡೀ ಗೋದಿಯನ್ನು ಕೆಂಪು ಬಟ್ಟೆಯಲ್ಲಿ ತೆಗೆದಿಟ್ಟು, ಮೋಕ್ಷ ನಂತರ ದಕ್ಷಿಣೆ ಮತ್ತು ಹುರುಳಿಯನ್ನು ಜತೆಗೆ ಸೇರಿಸಿ, ಶಿವಾಲಯದ ಅರ್ಚಕರಿಗೆ ದಾನ ನೀಡಬೇಕು. ದೋಷ ಇರುವವರೂ, ಇಲ್ಲದವರೂ ಕೆಳಗಿನ ಶ್ಲೋಕವನ್ನು ಗ್ರಹಣ ಸಮಯದಲ್ಲಿ ಪಠಿಸಬೇಕು.

ಯೋಸೌ ವಜ್ರಧರೂ ದೇವಹ ಆದಿತ್ಯಾನಾಂ ಪ್ರಭುಮತಹ |
ಸೂರ್ಯಗ್ರಹೋ ಪರಾಗೊತ್ಥ ಗ್ರಹಪೀಡಾಂ ವ್ಯಪೊಹತು ||
ಯೋಸೌ ದಂಡದರೊ ದೇವಹ ಯಮೋ ಮಹಿಷ ವಾಹನಹ |
ಸೂರ್ಯಗ್ರಹೊ ಪರಾಗೊತ್ಥ ಗ್ರಹಪೀಡಾಂ ವ್ಯಪೋಹತು ||

ರಾಜ್ಯ- ದೇಶ- ಪ್ರಕೃತಿ
– ರಾಜ್ಯದಲ್ಲಿ ಅಕಾಲಿಕ ಮಳೆ, ಸೈಕ್ಲೋನ್‌ ಭೀತಿ, ಕೆಂಪು ಧಾನ್ಯಗಳ ಬೆಲೆಯಲ್ಲಿ ಏರಿಕೆ, ಕೃಷಿಕ್ಷೇತ್ರಕ್ಕೆ ಹಾನಿ, ಜಲಜನಿತ ವಸ್ತುಗಳ ಕೊರತೆ ಆಗಲಿದೆ.

– ರಾಜ್ಯ ರಾಜಕೀಯದಲ್ಲಿ ಭಿನ್ನಮತ ಸ್ಫೋಟ, ಹಿರಿಯ ರಾಜಕಾರಣಿಗಳ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತದೆ.

– ದೇಶದ ವಿಚಾರದಲ್ಲಿ ಸೈನಿಕರಿಗೆ ತೊಂದರೆ, ನೆರೆರಾಷ್ಟ್ರದಿಂದ ಆಕಸ್ಮಿಕ ಯುದ್ಧ ಭೀತಿ, ಭಯೋತ್ಪಾದನೆ ಕಡಿಮೆ ಆಗಲಿದೆ.

– ಭಾರತದ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಸುನಾಮಿ, ಬೆಂಕಿ ಅನಾಹುತ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ.

– ಧರ್ಮವನ್ನು ಅನುಸರಿಸುವ ಎಲ್ಲ ವ್ಯಕ್ತಿಗಳಿಗೂ ಅತಿ ವಿರೋಧ, ತೊಂದರೆಗಳು ಆಗಲಿವೆ.

– ಗ್ರಹಣ ರಾಶಿಯಲ್ಲಿ ಗುರು, ಬುಧ, ಶನಿ, ಕೇತು ಇರುವುದರಿಂದ ಕಾಯಿಲೆಗಳು ಹೆಚ್ಚುತ್ತವೆ, ಮಾನಸಿಕ ನೆಮ್ಮದಿ ಕಡಿಮೆ ಆಗುತ್ತದೆ.

ಶುಭ ಫ‌ಲ: ತುಲಾ, ಕುಂಭ, ಮೀನ

ಮಿಶ್ರ ಫ‌ಲ: ಕರ್ಕಾಟಕ, ಸಿಂಹ, ಮಿಥುನ, ಮೇಷ

ಅನಿಷ್ಠ ಫ‌ಲ: ಮೂಲ ನಕ್ಷತ್ರ, ಧನು ರಾಶಿಯವರಿಗೆ ಹೆಚ್ಚಿನ ತೊಂದರೆ ಇದೆ. ಜ್ಯೇಷ್ಠ, ಪೂರ್ವಾಷಾಢ, ಅಶ್ವಿ‌ನಿ, ಮಘಾ ನಕ್ಷತ್ರದವರಿಗೂ, ಧನು, ಮಕರ, ವೃಶ್ಚಿಕ, ವೃಷಭ, ಕನ್ಯಾ ರಾಶಿಯವರಿಗೂ ಅನಿಷ್ಠ ಫ‌ಲವಿದೆ.

ರಾಶಿ ಭವಿಷ್ಯ
ಮೇಷ: ತಂದೆಗೆ ಆಪತ್ತು. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ.

ವೃಷಭ: ಪತ್ನಿಗೆ ಅನಾರೋಗ್ಯ. ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ. ವಾಹನದಿಂದ ಹಾನಿ. ಭೋಗವಸ್ತುಗಳ ಪ್ರಾಪ್ತಿ.

ಮಿಥುನ: ಚರ್ಮವ್ಯಾಧಿಗಳು ಉಂಟಾಗಬಹುದು. ದಾಂಪತ್ಯದಲ್ಲಿ ತೊಂದರೆ. ದುರ್ಜನರ ಸಹವಾಸ. ಶತ್ರು ನಾಶ. ಪಿತ್ರಾರ್ಜಿತ ಆಸ್ತಿಪ್ರಾಪ್ತಿ.

ಕರ್ಕಾಟಕ: ಶತ್ರುಬಾಧೆ. ಉದರಕ್ಕೆ ಸಂಬಂಧಿಸಿದ ತೊಂದರೆ. ಧನಹಾನಿ. ಉದ್ಯೊಗದಲ್ಲಿ ಉನ್ನತಿ ಕಾಣಲಿದೆ. ಸ್ತ್ರೀಯರಿಂದ ತೊಂದರೆ.

ಸಿಂಹ: ವಾಹನದಿಂದ ನಷ್ಟ. ಕರುಳು ಅಥವಾ ಕಿಡ್ನಿ ಸಮಸ್ಯೆ. ಮಕ್ಕಳಿಗೆ ತೊಂದರೆ. ಭಿನ್ನಾಭಿಪ್ರಾಯ. ಧನಲಾಭ. ಅನಾರೋಗ್ಯ.

ಕನ್ಯಾ: ತಾಯಿಗೆ ತೊಂದರೆ. ಆಪ್ತರೊಂದಿಗೆ ಜಗಳ. ಧನಹಾನಿ. ಅಪಘಾತ. ಅನಾರೋಗ್ಯ. ಸಹೋದರರಿಂದ ಸಹಕಾರ.

ತುಲಾ: ಸಾಹಸ ಕೆಲಸಗಳಿಂದ ಪ್ರಖ್ಯಾತಿ. ಧನಲಾಭ. ಸಹೋದರರಿಗೆ ತೊಂದರೆ. ಆಸ್ತಿ ಖರೀದಿ ಇತ್ಯಾದಿ ಶುಭ ಫ‌ಲಗಳು.

ವೃಶ್ಚಿಕ: ಧನಾದಾಯಕ್ಕೆ ತೊಂದರೆ. ಮುಖ ಅಥವಾ ತಲೆಭಾಗಕ್ಕೆ ತೊಂದರೆ. ವಾಹನ- ಆಸ್ತಿಲಾಭ. ಅಪವಾದ.

ಧನು: ಅನಾರೋಗ್ಯ. ಅಗ್ನಿ ತೊಂದರೆ. ಜ್ವರ ಇತ್ಯಾದಿ ಉಷ್ಣ ಕಾಯಿಲೆಗಳು. ಧನಹಾನಿ. ದಾಂಪತ್ಯ ಕಲಹ. ಆಸ್ತಿ ಕಳಕೊಳ್ಳುವ ಭೀತಿ.

ಮಕರ: ಹಿರಿಯರಿಗೆ ತೊಂದರೆ. ಭೂಲಾಭ. ಉದ್ಯೋಗದಲ್ಲಿ ಉನ್ನತಿ. ಮೋಸದಿಂದ ಧನಹಾನಿ. ಪಶ್ಚಾತ್ತಾಪ.

ಕುಂಭ: ಆಸ್ತಿ ಮತ್ತು ಧನಲಾಭ. ಪ್ರವಾಸ. ಎಲ್ಲ ಕಡೆಯಿಂದ ಶುಭವಾರ್ತೆ. ಪುಣ್ಯಸ್ಥಳ ದರ್ಶನ.

ಮೀನ: ಉದ್ಯೋಗ ಪ್ರಾಪ್ತಿ. ಶತ್ರುನಾಶ. ಧನ ಪ್ರಾಪ್ತಿ. ಪ್ರಖ್ಯಾತಿ. ವಿದೇಶ ಪ್ರಯಾಣ ಇತ್ಯಾದಿ ಶುಭ ಫ‌ಲಗಳು.

* ಕೆ.ಆರ್‌. ಸತೀಶ್‌ ಭಟ್‌, ಜ್ಯೋತಿಷ್ಯ ತಜ್ಞ, ಶ್ರೀ ಫಾಲಚಂದ್ರ ಯಜ್ಞ ಕ್ಷೇತ್ರ ಕೊಪ್ಪ, ಚಿಕ್ಕಮಗಳೂರು

Advertisement

Udayavani is now on Telegram. Click here to join our channel and stay updated with the latest news.

Next