Advertisement
ಮದುವೆಯಾಗಲಿರುವ ಹುಡುಗಿಯ ವಿಚಿತ್ರ ನಿಲುವುಈ ಹುಡುಗಿ ಕಂಪ್ಯೂಟರ್ ಎಂಜಿನಿಯರ್. ಅವಳದು ವೃಶ್ಚಿಕ ಲಗ್ನದ ಹುಡುಗಿ. ಇಲ್ಲಿ ಮಂಗಳನ ಉಪಸ್ಥಿತಿ ಇರುವುದು ಮರಣದ ಸ್ಥಾನವಾದ ಮಿಥುನದಲ್ಲಿ. ಮೇಲ್ನೋಟಕ್ಕೆ ಕುಜ ದೋಷ ಇದೆಯಾದರೂ ಇವಳ ಜನ್ಮ ನಕ್ಷತ್ರದ ಬಲದಿಂದಾಗಿ ಈ ಜಾತಕದ ಹುಡುಗಿಗೆ ಕುಜ ದೋಷ ಎಂಬ, ಲಗ್ನದ (ಮದುವೆ) ಸಂದರ್ಭದ ವೈವಾಹಿಕ ಅಂಶಗಳ ಕುರಿತಾದ ಕುಜ ದೋಷ ಇಲ್ಲ. ಆದರೆ ಮರಣ ಸ್ಥಾನದಲ್ಲಿರುವ ಕುಜ ವ್ಯಕ್ತಿತ್ವದಲ್ಲಿ ಕೆಲವು ನಿಗೂಢ ಸಂಗತಿಗಳನ್ನ, ಭಯವನ್ನ, ಭ್ರಮೆಯನ್ನ, ಸರ್ರನೆ ಒಂದು ನಿರ್ಣಯಕ್ಕೆ ಬಂದು, ಸರ್ರನೆ ಅಷ್ಟೇ ತೀವ್ರವಾಗಿ ನಿರ್ಣಯದಿಂದ ಜಾರಿಕೊಳ್ಳುವ ಅಸಂಗತ ವ್ಯಕ್ತಿತ್ವವನ್ನ ಗಂಟು ಹಾಕುತ್ತಾನೆ. ಮರಣಾಧಿಪತಿ ಬುಧನು ವಿಪರೀತ ರಾಜಯೋಗ ಒದಗಿಸಿದರೂ, ರಾಹುವಿನ ಉಪಸ್ಥಿತಿಯಿಂದಾಗಿ ರಾಜಯೋಗ ಮಣ್ಣಾಗುತ್ತಲೇ ಇರುತ್ತದೆ. ಸುಖಕ್ಕಾಗಿ ಬಯಸಿ ಪ್ರಾಮಾಣಿಕವಾಗಿ ಮುಂದುವರಿದರೂ, ಒಂದು ಲೆಕ್ಕದಿಂದ ಬಿಕ್ಕಟ್ಟುಗಳನ್ನು ಎದುರಿಸಿ ಅನುಕಂಪ ಗಿಟ್ಟಿಸಲಿಕ್ಕೇ ಪ್ರಯತ್ನ ನಡೆಸುವ ವ್ಯಕ್ತಿತ್ವ ಪ್ರಧಾನವಾಗುತ್ತದೆ. ಒಳ್ಳೆಯ ಹುಡುಗಿ ಎಂಬುದಕ್ಕೆ ಬೇರೆ ಮಾತಿಲ್ಲ. ಆದರೂ ನಿರ್ಣಯದ ಬಗೆಗಾಗಿ ನಿರಂತರ ಹೊಯ್ದಾಟ. ಸುಖದ ಅಧಿಪತಿ ಗಟ್ಟಿಯಾಗಿದ್ದರೂ, ಬಾಳ ಸಂಗಾತಿಯ ವಿಚಾರದಲ್ಲಿ ಕೇತುವಿನ ಬಾಧೆ ಅನುಭವಿಸುತ್ತಿರುವ ಚಂದ್ರ ( ಈತ ಭಾಗ್ಯಾಧಿಪತಿ) ಉತ್ತಮವಾದ ಭಾಗ್ಯ ಒದಗಿಸಲು ನಿರಾಕರಿಸುತ್ತಾನೆ. ಶನೈಶ್ಚರನ ಕಾಟದ ಸಮಯ ಬಂದಾಗ ಸುಖಕ್ಕೂ ಸಮತೋಲನ ತಪ್ಪಿ “ಮದುವೆಯಾಗ್ತೀನೆ’ ಎಂದು ತಾನು ಮಾತುಕೊಟ್ಟಿದ್ದ ಹುಡುಗನಿಗೆ ತಾನು ಕೊಟ್ಟಿದ್ದು ಅಖೈರಿನ ಒಪ್ಪಿಗೆ ಅಲ್ಲ ಎಂದು ವಾದಿಸಿ ಅವನಿಗೆ ಸಿಟ್ಟು ಏಳುವಂತೆ ಮಾಡುತ್ತಾಳೆ. ನಿರಂತರವಾದ ದ್ವಂದ್ವವನ್ನು ಸಮಯ ಸಂದರ್ಭಗಳೂ ಈ ಹುಡುಗಿಯ ವಿಚಾರದಲ್ಲಿ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿರುತ್ತವೆ. ಸುಮಾರು ನೂರಕ್ಕೂ ಹೆಚ್ಚು ಹುಡುಗಿಯರನ್ನು ನೋಡಿದರೂ ಮದುವೆಗೆ ಸೂಕ್ತವಲ್ಲ ಎಂಬು ನಿರ್ಣಯಕ್ಕೆ ಬಂದ ಆ ಹುಡುಗನಿಗೆ ಈಕೆ ಮನಸ್ಸಿಗೆ ಹಿಡಿಸಿದ್ದಾಳೆ. ಮನಸ್ಸಿಗೆ ಆಗಬಹುದು ಎಂಬು ವಿಚಾರ ಬರುತ್ತಿರುವಂತೆ ( ಈತನೂ ದುಷ್ಟನಲ್ಲ ಎಂಬುದು ಸ್ಪಷ್ಟ) ಒಂದು ಚಿಕ್ಕ ಒತ್ತಡವನ್ನು ಈ ಹುಡುಗನೂ, ಹುಡುಗನ ತಂದೆ ತಾಯಿಗಳೂ (ಪೀಡಿಸುವ ಕಾರಣಕ್ಕೆ ಎಂದಲ್ಲ, ನೂರಾರು ಹುಡುಗಿಯರನ್ನು ವಧು ಪರೀಕ್ಷೆಯಲ್ಲಿ ಒಪ್ಪುವುದು ಕಷ್ಟವಾಗುತ್ತದೆ. ಮದುವೆಯ ವಿಚಾರ ಸಾಕಷ್ಟು ಕಾವು ಹುಟ್ಟಿಸಿ ಬೇಸತ್ತಿದ್ದರಿಂದ) ಹುಡುಗಿಗೆ ಹುಡುಗ ಇಷ್ಟವಾದನೇ ಎಂದು ವಿಚಾರಿಸುತ್ತ, ಅವಳಿಗೂ ಕಿರಿಕಿರಿ ಎಬ್ಬಿಸಿದ್ದಾರೆ. ಇವಳೂ “ಹೌದು, ಆಗಬಹುದು’ ( ಆದರೆ ಒತ್ತಡ ಬರುತ್ತಿರುವಾಗ ಯಾಕೆ ಇಷ್ಟು ತರುತ್ತಿದ್ದಾರೆ ಎಂಬು ಯೋಚನೆಯೂ ಭಯದ ಅಲೆ ನಿರ್ಮಿಸುತ್ತಲೂ ಇದ್ದಾಗ) ಎಂದು, ” ಆದರೆ ತಂದೆ ತಾಯಿಯನ್ನು ಕೇಳಿ. ಅವರ ಒಪ್ಪಿಗೆಯ ವಿಚಾರ ತಿಳಿದುಕೊಳ್ಳಿ ಎಂದೂ – ಹೀಗೆ ಎರಡು ವಿಧವಾದ ಅಭಿಪ್ರಾಯ ಹೊರಹಾಕಿದ್ದಾಳೆ. ಕೂಡಲೇ ತಂದೆ ತಾಯಿಗಳಿಗೆ ಹುಡುಗಿ ಒಪ್ಪಿದ್ದಾಳೆ ಎಂದು ತಿಳಿಸಿ ನಿಮ್ಮ ಅಭಿಪ್ರಾಯ ಏನು ಎಂದು ವಿರಾಮವಿರದೆ ಕೇಳಿ ಅವಳೇ ಒಪ್ಪಿದ್ದರೆ ನಮ್ಮ ಅಭ್ಯಂತರವಿಲ್ಲ ಎಂಬು ಉತ್ತರ ಹೊರಡಿಸಿದ್ದಾರೆ. ಇಷ್ಟೆಲ್ಲ ರೀತಿಯ ಅವಸರ ಹುಡುಗಿಗೆ ಕಿರಿಕಿರಿ ತಂದಿದೆ.
ಆದರೆ ಹುಡುಗಿಯೂ ತನ್ನನ್ನು ಒಂದೇ ನಿಶ್ಚಿತ ದಿಕ್ಕಿನಲ್ಲಿ ಸಾಗಲಾಗದ ದಾರಿಯಲ್ಲಿ ಸಿಲುಕಿ ಹಾಕಿಕೊಂಡ ಕುತೂಹಲಕಾರಿ ಅಂಶವನ್ನೂ ನಾವಿಲ್ಲಿ ಗಮನಿಸಬೇಕು. ತಾನು ಕೆಲಸ ಮಾಡುವ ಆಫೀಸಿಗೇ ಫೋನ್ ಮಾಡಿ “ಒಪ್ಪಿಗೆಯೇ’ ಎಂದು ಹುಡುಗನ ಮಾವ ಕೇಳಿದಾಗ “ಸರಿ, ಆದರೆ, ನೀವು ನನ್ನ ತಂದೆ ತಾಯಂದಿರನ್ನು ಕೇಳಿ’ ಎಂದು ಹೇಳಿದ ಹುಡುಗಿ, ನಂತರ ಹುಡುಗನ ಬಳಿ ” ನಾನು ಅಖೈರಿನ ಒಪ್ಪಿಗೆ ಕೊಟ್ಟಿರಲಿಲ್ಲ. ನಾನೂ ಪೂರ್ತಿ ನಿಶ್ಚಯ ಮಾಡಿಲ್ಲ’ ಎಂದು ಹೇಳಿದಾಗ ಹುಡುಗ ಕೆರಳುತ್ತಾನೆ. “ಏನು? ನಮಗೆ ಬೇರೆ ಕೆಲಸಗಳಿಲ್ಲದೆ ನಿಮ್ಮ ಮನೆಗೆ ಬಂದು ವಧು ಪರೀಕ್ಷೆಗೆ ಬಂದು ತಿಂಡಿ ಕಾಫಿ ಕುಡಿದು, ಹೊಟ್ಟೆ ತಂಬಿಸಿಕೊಂಡು ಹೋಗಲು ಬಂದಿದ್ವಾ ಅಂದೊಂಡ್ಯಾ’ ಎಂದು ಕೇಳಿ ಬಿಟ್ಟಿದ್ದಾನೆ. ಈ ಒರಟು ಮಾತು ಕೇಳಿದ ಮೇಲೆ ಹುಡುಗಿಗೆ “ಛೇ ಇವನು ಇಷ್ಟೆಯೇ..? ‘ ಎಂದು ಅನಿಸಿದೆ. ಹೋಗಲಿ. ಮಾರನೆಯ ದಿನವಾದರೂ ” ಏನೋ ಒರಟು ಮಾತನಾಡಿದೆ ನಾನು, ತಪ್ಪು ತಿಳಿಯಬೇಡ’ ಎಂದು ಹುಡುಗ ತಪ್ಪು ಒಪ್ಪಿಕೊಳ್ಳಬಹುದು ಎಂದರೆ, ಆತ ಹಾಗೇ ಮಾಡಲಿಲ್ಲ. ನಯವಾಗಿಯೇ ಆತ ” ಮದುವೆಗೆ ಒಪ್ಪು’ ಎಂದು ಬಿನ್ನವಿಸುತ್ತಲೇ ಇದ್ದಾನೆ. ಹುಡುಗಿಯ ತಂದೆ ತಾಯಿಗೂ ಕಿರಿಕಿರಿಯಾಗುತ್ತಿದೆ. ಮಗಳು ಒಪ್ಪಿಗೆ ನೀಡಿ ಹಿಂದೆ ಸರಿಯುತ್ತಿದ್ದಾಳೆ ಎಂದು ಮಗಳ ಬಗೆಗೇ ಆಕ್ಷೇಪವಿದೆ.
Related Articles
Advertisement
ಅನಂತ್‌ಶಾಸ್ತ್ರಿ