Advertisement

ಕಾರಿನ ಎಂಜಿನ್‌ನ ವಿಚಿತ್ರ ಶಬ್ಧಕ್ಕೆ ಕಾರಣಗಳೇನು?

07:48 AM Mar 08, 2019 | |

ಕಾರುಕಾರು ಎಂಜಿನ್‌ನಲ್ಲಿ ಏಕಾಏಕಿ ವಿಚಿತ್ರ ಶಬ್ದ ಬರುತ್ತಿದೆ ಎಂದಾದರೆ ನಾವು ಗಾಬರಿಗೊಳ್ಳುತ್ತೇವೆ. ಎಂಜಿನ್‌ ಮೇಲ್ಭಾಗ ಅಥವಾ ಒಳಭಾಗದಿಂದಲೂ ವಿಚಿತ್ರ ಶಬ್ದ ಕೇಳಬಹುದು. ಇದರಿಂದ ನಿಮಗೆ ಕಾರಿನ ಎಂಜಿನ್‌ ಎಂದಿನಂತಿಲ್ಲ ಎಂದು ಗೊತ್ತಾಗುತ್ತದೆ. ಕೆಲವೊಮ್ಮೆ ಪಿಕಪ್‌ ಮತ್ತು ಮೈಲೇಜ್‌ ನಲ್ಲೂ ವ್ಯತ್ಯಾಸವಾಗಬಹುದು. ಈ ಹಿನ್ನೆಲೆಯಲ್ಲಿ ಎಂಜಿನ್‌ ಶಬ್ದ ಯಾವುದೆಲ್ಲ ಕಾರಣಕ್ಕೆ ಬರುತ್ತದೆ ಎಂಬುದನ್ನು ತಿಳಿಯೋಣ.

Advertisement

ವಾಲ್ವ್ ಟ್ರೈನ್‌ ಶಬ್ದ
ಎಂಜಿನ್‌ ಒಳಗಡೆ ವಾಲ್ವ್ 
ಗಳಿರುತ್ತವೆ. ಈ ವಾಲ್ವ್ ಗಳನ್ನು ಎತ್ತಲು ಒಂದು ಹೈಡ್ರಾಲಿಕ್‌ ಲಿಫ್ಟ್ವ್ಯ ವಸ್ಥೆ ಇರುತ್ತದೆ. ಕೆಲವೊಮ್ಮೆ ಈ ಲಿಫ್ಟರ್‌ಗಳ ಮಧ್ಯೆ ಜಾಗ ಒಂದು ಪೇಪರ್‌ನಷ್ಟು ಹೆಚ್ಚಾದರೂ ಕ್ಲಿಕ್ಕಿಂಗ್‌ ಶಬ್ದ ಬರಬಹುದು. ವಾಲ್ವ್  ಮುಚ್ಚುವಾಗ, ತೆರೆಯುವಾಗ ಇವುಗಳ ಶಬ್ದ ಇರುತ್ತದೆ. ಕೆಲವೊಮ್ಮೆ ಎಂಜಿನ್‌ ಆರ್‌ಪಿಎಂ ಹೆಚ್ಚು ಮಾಡಿದರೆ ಇದರ ಶಬ್ದ ಇರದು. ಆದ್ದರಿಂದ ಒಂದು ವೇಳೆ ಹೊಸ ಆಯಿಲ್‌ ಹಾಕಿಯೂ ಶಬ್ದ ಮುಂದುವರಿದರೆ ಹೊಸ ವಾಲ್ವ್  ಟ್ರೈನ್‌ ಅಳವಡಿಸಿಕೊಳ್ಳಬೇಕಾಗುತ್ತದೆ. ಎಂಜಿನ್‌ ಹೆಡ್‌ ತೆಗೆದು ಈ ಕೆಲಸ ಮಾಡಬೇಕಾಗುತ್ತದೆ.

ಕ್ರ್ಯಾಂಕ್‌ಶಾಫ್ಟ್ ಬೇರಿಂಗ್‌
ಕ್ರ್ಯಾಂಕ್‌ಶಾಫ್ಟ್ ಬೇರಿಂಗ್‌ ಶಬ್ದ ಕಡಿಮೆ ಆಯಿಲ್‌ ಪ್ರಶರ್‌ನಿಂದ ಬರಬಹುದು. ಇದರಿಂದ ಬೇರಿಂಗ್‌ ಗೆ ಹಾನಿಯಾಗುವುದರೊಂದಿಗೆ ಕ್ರ್ಯಾಂಕ್‌ಶಾಫ್ಟ್ ಗೆ ಹಾನಿಯಾಗಬಹುದು. ಎಕ್ಸಲರೇಟರ್‌ ಕೊಟ್ಟಾಗ ಥಂಪಿಂಗ್‌ ಶಬ್ದ ಬರುತ್ತದೆ ಎಂದಾದರೆ ಇದೇ ಸಮಸ್ಯೆ. ಬೇರಿಂಗ್‌ ಬದಲಾಯಿಸುವುದರ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ಪಿಸ್ಟನ್‌ ಸ್ಲ್ಯಾಪ್‌
ಪಿಸ್ಟನ್‌ ಸ್ಕರ್ಟ್‌ ಮತ್ತು ಸಿಲಿಂಡರ್‌ ವಾಲ್‌ ಮಧ್ಯೆ ಹೆಚ್ಚಿನ ಜಾಗ ಸೃಷ್ಟಿಯಾದಾಗ ಶಬ್ದ ಬರುತ್ತದೆ. ಹೆಚ್ಚು ಮೈಲೇಜ್‌ ನೀಡುವ ಕಾರುಗಳಲ್ಲಿ ಈ ಸಮಸ್ಯೆ ಕಂಡುಬರುವುದು ಹೆಚ್ಚು. ಕೆಳ ಪಿಸ್ಟನ್‌ ಸ್ಕರ್ಟ್‌ಗಳಲ್ಲಿ ಕ್ರ್ಯಾಕ್‌ಗಳು ಬಂದಿದ್ದರೆ ಈ ಸಮಸ್ಯೆ ಗೋಚರಿಸಬಹುದು. ಗಂಟೆಯ ಲೋಲಕ ತಿರುಗಿಸಿದಂತೆ ಆಳವಾದ ಶಬ್ದ ಬಂದರೆ ಅದು ಪಿಸ್ಟನ್‌ ಸ್ಲಾéಪ್‌ ಸಮಸ್ಯೆ ಇರಬಹುದು ಎಂದು ಊಹಿಸಬಹುದು.

ವಿನ್ನಿಂಗ್‌ ಶಬ್ದ
ಕಾರು ಚಾಲನೆಯಲ್ಲಿರುವ ವೇಳೆ ಬೆಲ್ಟ್ ಇರುವ ದೊಡ್ಡ ಎಂಜಿನ್‌ ತಿರುಗಿದಂತೆ ಶಬ್ದ ಬರಬಹುದು. ಇದಕ್ಕೆ ಹಲವು ಬೇರಿಂಗ್‌ಗಳು ಸವೆದಿರುವುದು, ಬೆಲ್ಟ್  ಸಮಸ್ಯೆ, ಪವರ್‌ಸ್ಟೀರಿಂಗ್‌, ಎಸಿ ಇತ್ಯಾದಿಗಳಲ್ಲಿನ ಸಮಸ್ಯೆಗಳೂ ಕಾರಣವಾಗಿರಬಹುದು. ಇಂತಹ ಶಬ್ದಗಳು ಸಾಮಾನ್ಯವಾಗಿ ಎಂಜಿನ್‌ ಆರ್‌ಪಿಎಂ ಹೆಚ್ಚಾದಂತೆ ಹೆಚ್ಚಾಗುತ್ತದೆ. 

Advertisement

ಟೈಮಿಂಗ್‌ ಚೈನ್‌
ಕ್ರ್ಯಾಂಕ್‌ಶಾಫ್ಟ್ ಮತ್ತು ಕ್ಯಾಮ್‌ಶಾಫ್ಟ್  ಗೆ ಸಂಪರ್ಕ ಕಲ್ಪಿಸುವುದು ಟೈಮಿಂಗ್‌ ಚೈನ್‌ ಗಳು. ಇವು ಕ್ಯಾಮ್‌ಶಾಫ್ಟ್ಗಳು ಸರಿಯಾದ ಸಮಯಕ್ಕೆ ತೆರೆಯುವಂತೆ ಮಾಡುತ್ತದೆ. ಹೈಡ್ರಾಲಿಕ್‌ ಟೆನÒನರ್‌ಗಳ ಮೂಲಕ ಈ ಚೈನ್‌ ಟೈಟ್‌ ಆಗಿರುತ್ತದೆ. ಆದರೂ ಕೆಲವೊಮ್ಮೆ ಇದು ದುರ್ಬಲವಾದರೆ ಶಬ್ದ ಬರಬಹುದು. ಎಂಜಿನ್‌ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಟೈಮಿಂಗ್‌ ಚೈನ್‌ ಬದಲಾಯಿಸಬೇಕು. ಇದರೊಂದಿಗೆ ಹೈಡ್ರಾಲಿಕ್‌ ಟೆನ್ಷನರ್‌ ಅನ್ನೂ ಬದಲಾಯಿಸಬೇಕು.

ಈಶ

Advertisement

Udayavani is now on Telegram. Click here to join our channel and stay updated with the latest news.

Next