Advertisement

ಉಕ್ರೇನ್‌ಗೆ ಸೂಸೈಡ್‌ ಡ್ರೋನ್‌; ಏನಿದು ಸೂಸೈಡ್‌ ಡ್ರೋನ್‌?

11:25 AM Mar 17, 2022 | Team Udayavani |

ಏನಿದು ಸುಸೈಡ್‌ ಡ್ರೋನ್‌?
ಇದು ಅಮೆರಿಕವೇ ನಿರ್ಮಿಸಿರುವ ಡ್ರೋನ್‌. ಉಕ್ರೇನ್‌ಗೆ ರಕ್ಷಣ ನೆರವು ನೀಡುವ ಉದ್ದೇಶದಿಂದ ಈ ಡ್ರೋನ್‌ ನೀಡಲು ಅಮೆರಿಕ ಮುಂದಾಗಿದೆ. ಇವು 40 ನಿಮಿಷಗಳ ವರೆಗೆ ಆಗಸದಲ್ಲಿ ಸುತ್ತುವ ಶಕ್ತಿ ಹೊಂದಿದ್ದು, ಟಾರ್ಗೆಟ್‌ ಗುರುತಿಸಿ ಬಾಂಬ್‌ ಹಾಕುವ ಶಕ್ತಿ ಹೊಂದಿವೆ.

Advertisement

ರಷ್ಯಾ ಮತ್ತು ಉಕ್ರೇನ್‌ ಸಮರವೇನೂ ನಿಲ್ಲುವಂತೆ ಕಾಣಿಸುತ್ತಿಲ್ಲ. ರಷ್ಯಾದ ಆಕ್ರಮಣದಿಂದಾಗಿ ಉಕ್ರೇನ್‌ ಅಕ್ಷರಶಃ ನಲುಗಿಹೋಗಿದೆ. ಇಂಥ ವೇಳೆಯಲ್ಲೇ ಅಮೆರಿಕ, ಉಕ್ರೇನ್‌ಗೆ ಕಾಮಿಕಾಝ್ ಡ್ರೋನ್‌ ನೀಡಲು ಮುಂದಾಗಿದೆ. ಈ ಡ್ರೋನ್‌ಗಳಿಗೆ ಸುಸೈಡ್‌ ಡ್ರೋನ್‌ ಎಂದು ಕರೆಯುವುದು ವಾಡಿಕೆ.

ಎರಡು ರೀತಿಯ ಡ್ರೋನ್‌
ಕಾಮಿಕಾಝ್ ಅಥವಾ ಸುಸೈಡ್‌ ಡ್ರೋನ್‌ ಎಂದೇ ಹೆಸರು ಇರಿಸಿಕೊಂಡಿರುವ ಇವು ಎರಡು ರೀತಿಯಲ್ಲಿ ಸಿಗುತ್ತವೆ. ಮಾನವ ರಹಿತ ಡ್ರೋನ್‌ಗಳಾಗಿರುವ ಇವು ಮಿಸೈಲ್‌ಗ‌ಳನ್ನು ಸಿಡಿಸುವುದಿಲ್ಲ. ಆದರೆ ಮಿಸೈಲ್‌ಗಳಂತೆಯೇ ವರ್ತಿಸುತ್ತವೆ. ಇವುಗಳನ್ನು ಅಮೆರಿಕ, ಇರಾಕ್‌, ಅಫ್ಘಾನಿಸ್ಥಾನ, ಸಿರಿಯಾದಲ್ಲಿ ಬಳಕೆ ಮಾಡಿದೆ. ವಾಷಿಂಗ್ಟನ್‌ ಡಿಸಿಯ ಏರೋವಿರೋಮೆಂಟ್‌ ಎಂಬ ಕಂಪೆನಿ ಉತ್ಪಾದಿಸುತ್ತಿದೆ.

1.ಸ್ವಿಚ್‌ಬ್ಲೇಡ್‌ 600
ಭೂಮಿಗೆ ಬೀಳುವ ಮುನ್ನ 40 ನಿಮಿಷಗಳ ವರೆಗೆ ಆಗಸದಲ್ಲಿ ಹಾರಾಡುತ್ತವೆ. ಟ್ಯಾಂಕರ್‌ಗಳು ಮತ್ತು ಶಸ್ತ್ರಾಸ್ತ್ರ ನೆಲೆಗಳನ್ನು ಗುರುತಿಸಿ ಗಂಟೆಗೆ 115 ಮೈಲು ವೇಗದಲ್ಲಿ ಬಂದು ಅಪ್ಪಳಿಸುತ್ತವೆ.

2.ಸ್ವಿಚ್‌ಬ್ಲೇಡ್‌ 300
ಇವೂ ಕೂಡ 15 ನಿಮಿಷಗಳ ವರೆಗೆ ಆಗಸದಲ್ಲಿ ಹಾರಾಡಬಲ್ಲವು. ಜನರನ್ನು ಟಾರ್ಗೆಟ್‌ ಮಾಡಿ ದಾಳಿ ಮಾಡಬಲ್ಲವು. ಗಂಟೆಗೆ 100 ಮೈಲು ವೇಗದಲ್ಲಿ ಅಪ್ಪಳಿಸಬಲ್ಲವು.

Advertisement
Advertisement

Udayavani is now on Telegram. Click here to join our channel and stay updated with the latest news.

Next