Advertisement

ಹೊಸ ನಿಯಮಗಳು: ನಾಳೆಯಿಂದ ಏನೇನು ಬದಲಾವಣೆ?

12:18 PM Jan 31, 2022 | Team Udayavani |

ಹೊಸದಿಲ್ಲಿ: ಫೆಬ್ರವರಿ 1ರಿಂದ ದೇಶದಲ್ಲಿ ಕೆಲವು ವಿಚಾರಗಳಲ್ಲಿ ಬದಲಾವಣೆಯಾಗುತ್ತಿದೆ. ಅವುಗಳ ವಿವರ ಇಲ್ಲಿದೆ.

Advertisement

ಮಿತಿ ಹೆಚ್ಚಳ

ಫೆ.1ರಿಂದ ಎಸ್‌ಬಿಐ ಗ್ರಾಹಕರು 5 ಲಕ್ಷ ರೂ.ಗಳವರೆಗಿನ ಐಎಂಪಿಎಸ್‌ ವಹಿವಾಟಿಗೆ ಸೇವಾ ಶುಲ್ಕ ಪಾವತಿಸಬೇಕಾಗಿಲ್ಲ. ಈವರೆಗೆ 2 ಲಕ್ಷದವರೆಗಿನ ವಹಿವಾಟಿಗೆ ಸೇವಾ ಶುಲ್ಕದಿಂದ ವಿನಾಯ್ತಿಯಿತ್ತು. ಆದರೆ, ಸೋಮವಾರದಿಂದ ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಮತ್ತು ಯೋನೋದಲ್ಲಿ 5 ಲಕ್ಷ ರೂ.ವರೆಗೆ ಉಚಿತವಾಗಿ ಐಎಂಪಿಎಸ್‌ ಮೂಲಕ ವಹಿವಾಟು ನಡೆಸಬಹುದು.

ದಂಡದ ಬಿಸಿ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ)ನ ಇಎಂಐ ಅಥವಾ ಇತರೆ ವಹಿವಾಟಿನ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್‌ ಇಲ್ಲದಿದ್ದರೆ, 250 ರೂ. ದಂಡ ತೆರಬೇಕಾಗುತ್ತದೆ. ಈವರೆಗೆ ಈ ದಂಡದ ಮೊತ್ತ 100 ರೂ. ಆಗಿತ್ತು.

Advertisement

ಶುಲ್ಕ ಜಾರಿ

2 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗಿನ ಐಎಂಪಿಎಸ್‌ ಆನ್‌ಲೈನ್‌ ಹಣ ವರ್ಗಾವಣೆಯ ಪ್ರತಿ ವಹಿವಾಟಿನ ಮೇಲೆ 20 ರೂ. + ಜಿಎಸ್‌ಟಿ ಶುಲ್ಕ ವಿಧಿಸಲು ಎಸ್‌ಬಿಐ ನಿರ್ಧರಿಸಿದೆ.

ಮಾಹಿತಿ ಕಡ್ಡಾಯ

ಬ್ಯಾಂಕ್‌ ಆಫ್ ಬರೋಡಾದಲ್ಲಿ ಚೆಕ್‌ ಕ್ಲಿಯರೆನ್ಸ್‌ಗೆ ಸಂಬಂಧಿಸಿದ ಹೊಸ ನಿಯಮ ಜಾರಿಗೆ ಬರಲಿದೆ. 10 ಲಕ್ಷ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಹಣದ ವಹಿವಾಟಿನ ಚೆಕ್‌ ಗಳಿಗೆ ಈ ನಿಯಮ ಅನ್ವಯವಾಗಲಿದೆ. ಅದರಂತೆ, ಚೆಕ್‌ನ ಸಂಪೂರ್ಣ ಮಾಹಿತಿಯನ್ನು ಬ್ಯಾಂಕಿಗೆ ನೀಡಿದರೆ ಮಾತ್ರ ಚೆಕ್‌ ಕ್ಲಿಯರ್‌ ಆಗಲಿದೆ.

ದರ ಪರಿಷ್ಕರಣೆ

ಪ್ರತಿ ತಿಂಗಳ ಮೊದಲ ದಿನದಂದು ಎಲ್‌ಪಿಜಿ ದರ ಪರಿಷ್ಕರಣೆಯಾಗುತ್ತದೆ. ಅದರಂತೆ, ಫೆ.1ರಂದು ಅಡುಗೆ ಅನಿಲ ಸಿಲಿಂಡರ್‌ ದರ ಏರಿಕೆಯಾಗಲೂಬಹುದು, ಇಳಿಕೆ ಆಗಲೂಬಹುದು.

ಶಾಲೆ ಪುನಾರಂಭ

ಕೊರೊನಾ 3ನೇ ಅಲೆಯ ಹೊಡೆತದಿಂದ ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು. ಈಗ ಸೋಂಕು ಇಳಿಮುಖವಾದ ಹಿನ್ನೆಲೆಯಲ್ಲಿ ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸೋಮವಾರದಿಂದ ಶಾಲೆ-ಕಾಲೇಜುಗಳು ಪುನಾರಂಭಗೊಳ್ಳಲಿವೆ

Advertisement

Udayavani is now on Telegram. Click here to join our channel and stay updated with the latest news.

Next