—
ಜನವರಿ:
ಈ ತಿಂಗಳಲ್ಲಿ ಹುಟ್ಟಿದ ಮಕ್ಕಳು ಕೈ ಮೇಲೆ ಕಾಸು ಓಡಾಡುವ ಕ್ಷೇತ್ರವನ್ನು ಆರಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಸಮೀಕ್ಷೆಯಲ್ಲಿ ಜನವರಿ ತಿಂಗಳಲ್ಲಿ ಹುಟ್ಟಿದ ಹೆಚ್ಚಿನ ಮಕ್ಕಳು ಬ್ಯಾಂಕ್, ರಿಯಲ್ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದುದು ಸಂಶೋಧಕರ ತಂಡ ಈ ಅಭಿಪ್ರಾಯಕ್ಕೆ ಬರಲು ಕಾರಣ. ಈ ಮಕ್ಕಳು ದಂತವೈದ್ಯರಾಗುವ ಸಾಧ್ಯತೆಯೂ ಹೆಚ್ಚು.
ಈ ತಿಂಗಳಲ್ಲಿ ಹುಟ್ಟಿದವರು: ರಜನೀಶ್ ಕುಮಾರ್(ಎಸ್‌ಬಿಐ ಅಧ್ಯಕ್ಷ), ವಿಲಿಯಂ ಕೋಲ್ಗೇಟ್ (ಕೋಲ್ಗೇಟ್ ಸ್ಥಾಪಕ)
Advertisement
ಫೆಬ್ರವರಿ:ನ್ಯಾಯ ಅಂದ್ರೆ ನ್ಯಾಯ ಎನ್ನುವವರೇ ಈ ತಿಂಗಳಲ್ಲಿ ಹುಟ್ಟುತ್ತಾರೆ. ಜೀವನದುದ್ದಕ್ಕೂ ಸ್ಟ್ರಿಕ್ಟ್ ಆಗಿರುತ್ತಾರೆ. ಇವರು ಕಾನೂನು ಉಲ್ಲಂ ಸುವುದು ಅಪರೂಪ. ಅವರಲ್ಲಿ ಹೆಚ್ಚಿನವರು ಟ್ರಾಫಿಕ್ ಪೊಲೀಸ್, ಕಾನೂನು ಪರಿಪಾಲಕರಾಗುತ್ತಾರೆ. ಈ ವೃತ್ತಿಗಳನ್ನು ಬಿಟ್ಟರೆ ಕೆಲವರು ಕಲಾವಿದರೂ ಆಗಿದ್ದಾರೆ.
ಈ ತಿಂಗಳಲ್ಲಿ ಹುಟ್ಟಿದವರು: ಛತ್ರಪತಿ ಶಿವಾಜಿ, ರಘುರಾಂ ರಾಜನ್, ಭೀಮ್‌ಸೇನ್ ಜೋಶಿ, ಜಗಜಿತ್ ಸಿಂಗ್
ಈ ಮಕ್ಕಳು ಸೃಜನಶೀಲ ವ್ಯಕ್ತಿಗಳಾಗುತ್ತಾರೆ. ಕಲೆ, ಸಂಗೀತ, ಸಾಹಿತ್ಯದಲ್ಲಿ ಬದುಕು ಕಂಡುಕೊಳ್ಳುತ್ತಾರೆ. ಹಾnಂ, ಇನ್ನೊಂದು ವಿಷಯ! ಮಾರ್ಚ್‌ನಲ್ಲಿ ಹುಟ್ಟಿದವರು ವಿಮಾನಚಾಲಕರೂ ಆಗಬಹುದು.
ಈ ತಿಂಗಳಲ್ಲಿ ಹುಟ್ಟಿದವರು: ಆಮೀರ್ ಖಾನ್, ಆಲಿಯಾ ಭಟ್, ಅಲ್ಕಾ ಯಾಗ್ನಿಕ್, ಪ್ರಕಾಶ್ ರೈ ಏಪ್ರಿಲ್:
ಇದನ್ನು ಹೇಗೆ ಹೇಳಬೇಕೋ ತಿಳಿಯುತ್ತಿಲ್ಲ. ಏಪ್ರಿಲ್ ಮಕ್ಕಳು ಸರ್ವಾಧಿಕಾರಿಗಳಾಗುತ್ತಾರಂತೆ. ಸರ್ವಾಧಿಕಾರಿ ಎಂದ ಕೂಡಲೇ ಬಹುತೇಕ ಓದುಗರ ಮನದಲ್ಲಿ ಯಾವ ಚಿತ್ರ ಮೂಡಿರುತ್ತದೆ ಎನ್ನುವುದನ್ನು ಊಹಿಸಿಕೊಳ್ಳುವುದು ಕಷ್ಟವೇನಲ್ಲ. ನಿಸ್ಸಂಶಯವಾಗಿ ಹಿಟ್ಲರ್‌ನದೇ. ಆದರಿಲ್ಲಿ ಮಕ್ಕಳು ಹಿಟ್ಲರೇ ಆಗಿಬಿಡುತ್ತಾರೆಂದು ಅಂದುಕೊಳ್ಳಬೇಡಿ. ಅವರು ಹೇಳಿದ್ದೇ ಸರಿ ಎಂಬ ಮನೋಭಾವವನ್ನು ಹೊಂದಿರಬಹುದೆಂದೂ ಅರ್ಥೈಸಬಹುದು. ಅಂದಹಾಗೆ, ಈ ಮಕ್ಕಳು ರಾಜಕಾರಣಿಯೂ ಆಗುವರು.
ಈ ತಿಂಗಳಲ್ಲಿ ಹುಟ್ಟಿದವರು: ಸದ್ದಾಂ, ಹುಸೇನ್, ಹಿಟ್ಲರ್, ಚಂದ್ರಬಾಬು ನಾಯ್ಡು, ಜೈರಾಂ ರಮೇಶ್
Related Articles
ಮೇ ತಿಂಗಳಲ್ಲಿ ಹುಟ್ಟಿದ ಮಕ್ಕಳು ರಾಜಕಾರಣಿಗಳಾಗುವ ಗುಣಗಳನ್ನು ಹೊಂದಿರುತ್ತಾರೆ. ತಮ್ಮ ಬದುಕಿನ ಸಂದಿಗ್ಧ ಸನ್ನಿವೇಶಗಳನ್ನು ಡಿಪ್ಲೋಮ್ಯಾಟಿಕ್ ಆಗಿ ನಿರ್ವಹಿಸಬಲ್ಲ ಚಾಣಾಕ್ಷತೆ ಇವರಿಗಿರುತ್ತದೆ.
ಈ ತಿಂಗಳಲ್ಲಿ ಹುಟ್ಟಿದವರು: ಎಚ್.ಡಿ.ದೇವೇಗೌಡ, ಎಸ್.ಎಂ, ಕೃಷ್ಣ, ನಿತಿನ್ ಗಡ್ಕರಿ
Advertisement
ಜೂನ್:ಈ ತಿಂಗಳಲ್ಲಿ ಹುಟ್ಟಿದ ಮಕ್ಕಳ ತಂದೆ ತಾಯಿಯರಿಗೆ ಸಿಹಿಸುದ್ದಿ. ಈ ಮಕ್ಕಳು ಕಂಪನಿಯ ಸಿ.ಇ.ಓ.ಗಳಾಗುತ್ತಾರೆ. ಇನ್ನೊಂದು ಸಂಗತಿ ನೊಬೆಲ್ ಪಾರಿತೋಷಕ ಪಡೆದವರಲ್ಲಿ ಶೇ.5ರಷ್ಟು ಮಂದಿ ಈ ತಿಂಗಳಲ್ಲೇ ಹುಟ್ಟಿರೋದು. ಹೀಗಾಗಿ ವಿಜ್ಞಾನಿಗಳಾಗುವ ಸಾಧ್ಯತೆಯೂ ಇದೆ.
ಈ ತಿಂಗಳಲ್ಲಿ ಹುಟ್ಟಿದವರು: ಲಕ್ಷಿ$¾ ಮಿತ್ತಲ್, ಸಿ.ಎನ್.ಆರ್. ರಾವ್(ವಿಜ್ಞಾನಿ), ಅನಿಲ್ ಅಂಬಾನಿ ಜುಲೈ:
ಈ ಮಕ್ಕಳು ಶ್ರಮಿಕರು. ಕಷ್ಟಪಟ್ಟು ದುಡಿಯುವ ವರ್ಗಕ್ಕೆ ಸೇರುತ್ತಾರೆ. ಕಟ್ಟಡ ನಿರ್ಮಾಣದಲ್ಲಿ ತೊಡಗಬಹುದು, ರೈಲು ಚಾಲಕರೂ ಆಗುತ್ತಾರೆ. ಸಿನಿಮಾರಂಗದಲ್ಲಿಯೂ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ.
ಈ ತಿಂಗಳಲ್ಲಿ ಹುಟ್ಟಿದವರು: ಜೆ.ಆರ್.ಡಿ. ಟಾಟಾ, ಕೆ. ಬಾಲಚಂದರ್, ಗುರುದತ್, ಅಡೂರ್ ಗೋಪಾಲಕೃಷ್ಣನ್ ಆಗಸ್ಟ್:
ಶಾಲೆಗಳಲ್ಲಿ ಕೆಲ ವಿದ್ಯಾರ್ಥಿಗಳು ಟೀಚರುಗಳನ್ನು ಗೋಳು ಹುಯ್ದುಕೊಳ್ಳುತ್ತಿರುತ್ತಾರೆ. ಅಂದರೆ, ಪ್ರತಿ ತರಗತಿಯಲ್ಲಿ ಅವರದೇನಾದರೂ ಕಿತಾಪತಿ ಇದ್ದೇ ಇರುತ್ತೆ. ಅಂಥ ಕೆಟಗರಿಗೆ ಸೇರಿದ ಕೀಟಲೆ ಮಕ್ಕಳು ಹುಟ್ಟೋದು ಆಗಸ್ಟ್ ತಿಂಗಳಲ್ಲಂತೆ. ಅಂದಮಾತ್ರಕ್ಕೆ ಆ ಮಕ್ಕಳು ಮುಂದೆಯೂ ಅದೇ ದಾರಿ ತುಳಿಯುತ್ತಾರೆ ಎಂದು ತಿಳಿಯಬೇಡಿ. ಅವರು ಮುಂದೆ ನಾಯಕರೂ ಆಗುತ್ತಾರೆ. ಅಂದಹಾಗೆ, ಅಮೆರಿಕದ ಇಬ್ಬರು ಅಧ್ಯಕ್ಷರು ಹುಟ್ಟಿದ್ದೂ ಇದೇ ತಿಂಗಳಲ್ಲಿ.
ಈ ತಿಂಗಳಲ್ಲಿ ಹುಟ್ಟಿದವರು: ರಾಜೀವ್ ಗಾಂಧಿ, ಖಲೀ- ಕುಸ್ತಿಪಟು ಸೆಪ್ಟೆಂಬರ್:
ಇದಕ್ಕೆ ಹಿಂದಿನ ಆಗಸ್ಟ್ ತಿಂಗಳಲ್ಲಿ ಹುಟ್ಟುವ ಕಿತಾಪತಿ ಮಕ್ಕಳಿಗೆ ವ್ಯತಿರಿಕ್ತವಾದ ಸ್ವಭಾವದ ಮಕ್ಕಳು ಈ ತಿಂಗಳಲ್ಲಿ ಹುಟ್ಟುತ್ತಾರೆ. ಅಂದರೆ, ಈ ಮಕ್ಕಳು ಪರೀಕ್ಷೆಗಳಲ್ಲಿ ಉತ್ತಮ ರ್‍ಯಾಂಕ್ ಪಡೆಯುತ್ತಾರೆ. ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಾರೆ. ಕ್ರೀಡಾ ಕ್ಷೇತ್ರದಲ್ಲೂ ಮುಂದಿರುತ್ತಾರೆ.
ಈ ತಿಂಗಳಲ್ಲಿ ಹುಟ್ಟಿದವರು: ಸರ್ವಪಲ್ಲಿ ರಾಧಾಕೃಷ್ಣನ್, ಸರ್ ಎಂ. ವಿಶ್ವೇಶ್ವರಯ್ಯ ಅಕ್ಟೋಬರ್:
ಇತರೆ ತಿಂಗಳಲ್ಲಿ ಹುಟ್ಟುವ ಮಕ್ಕಳಿಗಿಂತ ಸುಮಾರು 215 ದಿನ ಹೆಚ್ಚು ಬದುಕುತ್ತಾರಂತೆ ಅಕ್ಟೋಬರ್ ಮಕ್ಕಳು. ಅದು ಹೇಗೆ ನಿರ್ದಿಷ್ಟವಾಗಿ 215 ದಿನಗಳೆಂದು ಪತ್ತೆ ಮಾಡಿದರೋ ಬ್ರಿಟಿಷ್ ಸಂಶೋಧಕರೇ ಹೇಳಬೇಕು. ಅಂದಹಾಗೆ, ಈ ಮಕ್ಕಳು ರಾಜಕಾರಣಿಗಳಾಗುವ ಸಾಧ್ಯತೆಯೂ ಇದೆ.
ಈ ತಿಂಗಳಲ್ಲಿ ಹುಟ್ಟಿದವರು: ಆನ್ ಪ್ರಿಮೌಟ್ (ಜಗತ್ತಿನಲ್ಲೇ ಅತಿ ಹೆಚ್ಚು ಕಾಲ ಬದುಕಿದವರು) ನವೆಂಬರ್:
ನಿಮ್ಮ ಪರಿಚಿತರಲ್ಲಿ ಯಾರಾದರೂ ಹೆಚ್ಚು ಚಿಂತೆ ಮಾಡುವವರಿದ್ದರೆ, ಸದಾ ಅಂತರ್ಮುಖೀಗಳಾಗಿದ್ದರೆ ಮೊದಲು ಅವರು ಹುಟ್ಟಿದ ತಿಂಗಳು ಕೇಳಿ. ಯಾಕೆಂದರೆ, ನವೆಂಬರ್‌ನಲ್ಲಿ ಹುಟ್ಟುವವರೆಲ್ಲ ಅಂತರ್ಮುಖೀಗಳೇ. ಅಂದ ಹಾಗೆ ಈ ಮಕ್ಕಳು, ಹೆಚ್ಚು ಬುದ್ಧಿಮತ್ತೆಯನ್ನು ಬೇಡುವ, ತಲೆ ಓಡಿಸಬೇಕಿರುವ ವೃತ್ತಿಗಳನ್ನೇ ಆಯ್ದುಕೊಳ್ಳುತ್ತಾರಂತೆ.
ಈ ತಿಂಗಳಲ್ಲಿ ಹುಟ್ಟಿದವರು: ಶಕುಂತಲಾದೇವಿ (ಮಾನವ ಕಂಪ್ಯೂಟರ್), ವರ್ಗೀಸ್ ಕುರಿಯನ್ (ಅಮುಲ್ ಸ್ಥಾಪಕ), ಸಿ.ವಿ. ರಾಮನ್ ಡಿಸೆಂಬರ್:
ದೈವಾಂಶಸಂಭೂತರು ಈ ತಿಂಗಳಲ್ಲಿ ಹುಟ್ಟುತ್ತಾರಂತೆ. ಈ ಮಕ್ಕಳಿಗೆ ಆಧ್ಯಾತ್ಮದಲ್ಲಿ, ದೇವರಲ್ಲಿ ನಂಬಿಕೆ ಹೆಚ್ಚು. ಸಾಮಾನ್ಯವಾಗಿ ಈ ಮಕ್ಕಳು ವೈದ್ಯಕೀಯ ಕ್ಷೇತ್ರವನ್ನು ಆರಿಸಿಕೊಂಡರೂ, ಅರ್ಚಕರು, ಪ್ರವಾದಿಗಳೂ ಆಗಬಹುದಂತೆ. ತಾರೆಗಳೂ ಆಗುತ್ತಾರೆ.
ಈ ತಿಂಗಳಲ್ಲಿ ಹುಟ್ಟಿದವರು: ರಜನೀಕಾಂತ್, ಓಶೋ, ಬಾಬಾ ರಾಮ್ ದೇವ್. – ಹವನ