Advertisement
ವೆಟ್‌ವೆಲ್‌ಗಳ ಹಿಂದಿನ ಸ್ಥಿತಿ!ಉಡುಪಿ ನಗರಸಭೆ 4 ವೆಟ್‌ವೆಲ್‌ಗಳನ್ನು ಹೊಂದಿವೆ. ಕಿನ್ನಿಮೂಲ್ಕಿ, ನಾಯರ್‌ಕೆರೆ, ಶಾರದ ಇಂಟರ್ ನ್ಯಾಶನಲ್ ಮುಂಭಾಗ ಹಾಗೂ ಮಠದಬೆಟ್ಟುವಿನಲ್ಲಿ ಅನುಕ್ರಮವಾಗಿ 25 ಎಚ್‌ಪಿ, 35 ಎಚ್‌ಪಿ, 170 ಎಚ್‌ಪಿ ಹಾಗೂ 180 ಎಚ್‌ಪಿ ಸಾಮರ್ಥ್ಯದ ಮೋಟಾರ್ ಆಳವಡಿಸಲಾಗಿದೆ. ಈ ನಾಲ್ಕು ವೆಟ್‌ವೇಲ್‌ಗಳಲ್ಲಿ ಕೇವಲ ಕಿನ್ನಿಮೂಲ್ಕಿ ಹಾಗೂ ನಾಯರ್‌ಕೆರೆ ಸ್ಟೇಷನಗಳಲ್ಲಿ ಮಾತ್ರ ಜನರೇಟ್‌ಗಳು ಇದ್ದವು.
ಪ್ರಸ್ತುತ ನಗರಸಭೆ ವ್ಯಾಪ್ತಿಯ ವೆಟ್‌ವೆಲ್‌ಗಳಿಗೆ ಹೊಸ ರೂಪ ನೀಡಲು ಮುಂದಾಗಿದೆ. ಅನೇಕ ವರ್ಷಗಳಿಂದ ವಿದ್ಯುತ್ ವ್ಯತ್ಯಯವಾದ ಸಂದರ್ಭದಲ್ಲಿ ಜನರೇಟರ್ ಇಲ್ಲದ ಕಾರಣ ನೇರವಾಗಿ ಇಂದ್ರಾಣಿಗೆ ಬಿಡಲಾಗುತ್ತಿದೆ. ಇದಕ್ಕೆ ನಗರಸಭೆ ಅಧಿಕಾರಿಗಳು ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ಸುಮಾರು 10 ವರ್ಷಗಳ ಬಳಿಕ ಮಠದಬೆಟ್ಟು ಹಾಗೂ ಶಾರದಾ ಇಂಟರ್ ನ್ಯಾಶನಲ್ ಮುಂಭಾಗದ ವೆಟ್‌ವೆಲ್‌ಗಳಿಗೆ ಜನರೇಟರ್ ಖರೀದಿಸಲು ಮುಂದಾಗಿದ್ದಾರೆ. 45 ಲ.ರೂ. ವರ್ಕ್ ಆರ್ಡರ್
180 ಎಚ್‌ಪಿ ಸಾಮರ್ಥ್ಯದ ಮೋಟಾರ್‌ನ ಮಠದಬೆಟ್ಟು ವೆಟ್‌ವೆಲ್‌ಗೆ 320 ಕೆವಿಎ (ಡಿಜಿ)ನ 26 ಲ.ರೂ. ಹಾಗೂ 170 ಎಚ್‌ಪಿ ಸಾಮರ್ಥ್ಯದ ಶಾರದಾ ಇಂಟರ್‌ನ್ಯಾಷನಲ್‌ನ ಎದುರಿನ ವೆಟ್‌ವೆಲ್‌ಗೆ 250 ಕೆವಿಎ 19 ಲ.ರೂ. ಸೇರಿದಂತೆ 45 ಲ.ರೂ. ಮೊತ್ತದ ಜನರೇಟರ್ ಆಳವಡಿಸುವ ಕುರಿತು ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ನೀಡಲಾಗಿದೆ. ಮುಂದಿನ
15ದಿನಗಳೊಳಗಾಗಿ ಕೆಲಸ ಮುಗಿಯುವ ಸಾಧ್ಯತೆಗಳಿವೆ.
Related Articles
ನಗರಸಭೆ ವ್ಯಾಪ್ತಿಯ ಗುಂಡಿಬೈಲು ವಾರ್ಡ್‌ನ ದೊಡ್ಡಣಗುಡ್ಡೆ ಮುಖ್ಯ ರಸ್ತೆಯಲ್ಲಿನ ಮ್ಯಾನ್ ಹೋಲ್ ಹಾಗೂ ಹೊಸ ಪೈಪ್ ಲೈನ್ ಆಳವಡಿಸಲು ಸುಮಾರು 17.84 ಲ.ರೂ. ಹಾಗೂ ಬೈಲೂರು ಮಿಷನ್ ಕಂಪೌಂಡ್ ಸರ್ಕಲ್‌ನಿಂದ ಚಂದು ಮೈದಾನ ಕ್ರಾಸ್‌ವರೆಗಿನ ಒಳಚರಂಡಿ ಜಾಲ ನಿರ್ಮಾಣಕ್ಕೆ 36.37 ಲ.ರೂ. ಸೇರಿದಂತೆ ಒಳಚರಂಡಿ ವ್ಯವಸ್ಥೆಗೆ 53 ಲ.ರೂ. ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ.
Advertisement
ಆರ್‌ಸಿಸಿ ಮ್ಯಾನ್ಹೋಲ್ಗುಂಡಿಬೈಲು ವಾರ್ಡ್‌ನಲ್ಲಿ ಮ್ಯಾನ್ ಹೋಲ್‌ಗಳು ವರ್ಷವಿಡಿ ಉಕ್ಕಿ ಹರಿಯುತ್ತಿರುವುದರಿಂದ ನಗರಸಭೆ ಅಧಿಕಾರಿಗಳು ಬ್ರಿಸ್ಕ್ನಲ್ಲಿ ನಿರ್ಮಾಣವಾದ ಮ್ಯಾನ್‌ಹೋಲ್‌ಗಳನ್ನು ತೆಗೆದು ಆರ್‌ಸಿಸಿಯಿಂದ ಮ್ಯಾನ್‌ಹೋಲ್ ನಿರ್ಮಿಸಲು ಮುಂದಾಗಿದ್ದು, ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ಜತೆಗೆ ಬೈಲೂರು ಮಿಷನ್ ಕಂಪೌಂಡ್ ಸರ್ಕಲ್‌ನಿಂದ ಚಂದು ಮೈದಾನ ಕ್ರಾಸ್‌ವರೆಗಿನ 6 ಇಂಚಿನ ಒಳಚರಂಡಿ ಪೈಪ್ ತೆರವು ಗೊಳಿಸಿ 1 ಫೀಟ್ ಪೈಪ್ ಗಳನ್ನು ಅಳವಡಿಸಲಾಗುತ್ತಿದೆ. 30 ದಿನಗಳ ಸರಣಿ ವರದಿ
“ಮರೆತೇ ಹೋದ ಇಂದ್ರಾಣಿ ಕಥೆ ಜಲಮೂಲ ರಕ್ಷಿಸಿ ಉಡುಪಿ ಉಳಿಸಿ’ ಎನ್ನುವ ಶೀರ್ಷಿಕೆಯಡಿಯಲ್ಲಿ ವೆಟ್‌ವೆಲ್‌ಗಳಲ್ಲಿ ಕೆಟ್ಟುನಿಂತ ಮೋಟರ್, ಜನರೇಟರ್ ಹಾಗೂ ನಿರ್ವಹಣೆ ಕೊರತೆಯಿಂದಾಗುತ್ತಿರುವ ಸಮಸ್ಯೆಗಳ ಕುರಿತು ವಿಸ್ಕೃತ ವರದಿಯನ್ನು ಒಂದು ತಿಂಗಳ ಕಾಲ ಸರಣಿ ವರದಿಯನ್ನು ಉಡುಪಿ ಸುದಿನದಲ್ಲಿ ಪ್ರಕಟಿಸಲಾಗಿತ್ತು. ಇದೀಗ ವೆಟ್‌ವೆಲ್‌ಗಳ ನಿರ್ವಹಣೆಯಿಂದ ನೇರವಾಗಿ ಕೊಳಚೆ ನೀರು ಬಿಡುವ ಪ್ರಮಾಣ ಕಡಿಮೆಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಅಂದಾಜು ಪಟ್ಟಿ ತಯಾರಿಕೆ
ಶಾರದಾ ಹೊಟೇಲ್ ಮುಂಭಾಗದ ವೆಟ್‌ವೆಲ್‌ನಲ್ಲಿ ಕಸಗಳು ನಿಲ್ಲುವ ಕಡೆ ಸ್ಕ್ರೀನಿಂಗ್ ಹಾಗೂ ಆವರಣ ಗೋಡೆ, ವಿದ್ಯುತ್ ದೀಪ ಸೇರಿದಂತೆ ಇತರ ಮೂಲಭೂತ ಸೌಕರ್ಯವನ್ನು ಕಲ್ಪಿಸಲು ಅಗತ್ಯವಿರುವ ಮೊತ್ತ ಅಂದಾಜು ಪಟ್ಟಿ ತಯಾರಿಸಲಾಗುತ್ತಿದೆ. ಹಂತ ಹಂತವಾಗಿ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ.
-ಮೋಹನ್ ರಾಜ್, ಎಇಇ, ನಗರಸಭೆ