Advertisement
ಈ ವೆಟ್‌ಮಾರ್ಕೆಟ್‌ಗಳಲ್ಲಿ ಪ್ರಾಣಿಗಳನ್ನೂ ತರಕಾರಿಗಳು, ಧಾನ್ಯ ಹಾಗೂ ಇತರೆ ಗೃಹೋಪಯೋಗಿ ಉತ್ಪನ್ನಗಳೊಂದಿಗೆ ಮಾರಲಾಗುತ್ತದೆ. ಜೀವಂತ ಪ್ರಾಣಿಗಳನ್ನು ಮಾರುವುದೇ ಇಲ್ಲಿಯ ವಿಶೇಷ. ಹರಡುವ ಸಾಧ್ಯತೆ ಜೀವಂತ ಪ್ರಾಣಿಗಳನ್ನು ಮಾರುವ ಈ ಮಾರುಕಟ್ಟೆಗಳ ಮೂಲಕ ವೈರಸ್‌ಗಳು ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ. ಆಘಾತಕಾರಿ ವಿಷಯ ಎಂದರೆ ಪ್ರಾಣಿಗಳನ್ನು ಕಾಡುಗಳಿಂದ ಸೆರೆಹಿಡಿಯಲ್ಪಟ್ಟಿದ್ದರೆ ಅಪಾಯ ಹೆಚ್ಚು ಎನ್ನಲಾಗುತ್ತಿದೆ. ಪೋಷಿಸಿದ ಪ್ರಾಣಿಗಳು ಮತ್ತು ಕಾಡಿನಿಂದ ಹಿಡಿದು ತಂದ ಪ್ರಾಣಿಗಳಲ್ಲಿ ತುಂಬಾ ವ್ಯತ್ಯಾಸ ಇರುತ್ತದೆ.
2013 ರಲ್ಲಿ ಸಾರ್ಸ್ ವೈರಸ್ ಕಾರಣದಿಂದ ಅಧಿಕಾರಿಗಳು ಸಿವೆಟ್ ಬೆಕ್ಕುಗಳು ಮತ್ತು ಹಾವುಗಳಂತಹ ಕೆಲವು ಪ್ರಾಣಿಗಳ ಮಾರಾಟ ನಿಷೇಧಿಸಿದ್ದರು. ಆದರೆ ಕೆಲವೇ ತಿಂಗಳುಗಳ ಬಳಿಕ ನಿಷೇಧ ರದ್ದಾಯಿತು. ಅದೇ ರೀತಿ ಕೋವಿಡ್-19 ಕಾರಣದಿಂದ ಚೀನ ಸರಕಾರವು ಫೆಬ್ರವರಿ ಅಂತ್ಯದಲ್ಲಿ ಆಹಾರಕ್ಕಾಗಿ ಬಳಸುವ ಕಾಡು ಪ್ರಾಣಿಗಳ ವ್ಯಾಪಾರ ನಿಷೇಧಿಸಿತ್ತು. ಚೀನದ ಸರಕಾರಿ ಮಾಧ್ಯಮ ಕ್ಸಿಸ್ಸುವಾ ಪ್ರಕಾರ, ಮಾರ್ಚ್ 22ರ ಹೊತ್ತಿಗೆ ಈ ಮಾರುಕಟ್ಟೆಗಳ ಪೈಕಿ ಶೇ. 94ರಷ್ಟು ಪುನಃ ತೆರೆಯಲ್ಪಟ್ಟಿದೆ. ಅವುಗಳಲ್ಲಿ ಎಷ್ಟು ಕಾಡು ಪ್ರಾಣಿಗಳ ವ್ಯಾಪಾರವನ್ನು ಸಂಪೂರ್ಣವಾಗಿ ನಿಲ್ಲಿಸಿವೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.