Advertisement
ಇದೇ ಸಂದರ್ಭದಲ್ಲಿ ದ್ವಿತೀಯ ಸರಣಿ ಕಾರ್ಯಕ್ರಮವನ್ನು ಭಾಯಂದರ್ ಪೂರ್ವದ ಗೋಡ್‌ದೇವ್ ನಾಕಾದ ಶುಭಂ ಹಾಲ್‌ನಲ್ಲಿ ಯಕ್ಷಗಾನ ವೈಭವದ ಕಾರ್ಯಕ್ರಮದೊಂದಿಗೆ ಆಚರಿಸ ಲಾಗುವುದು ಎಂದು ಸಭೆಗೆ ಘೋಷಿಸಲಾಯಿತು.
Related Articles
Advertisement
ಅತಿಥಿ ಡಿ. ಬಿ. ಅಮೀನ್ ಮಾತನಾಡಿ, 74 ವರ್ಷಗಳ ಹಿಂದೆ ನಿಸ್ವಾರ್ಥ ಸೇವೆಯಿಂದ ಈ ಸಂಸ್ಥೆಯನ್ನು ಸ್ಥಾಪಿಸಿದ ಸ್ಥಾಪಕರನ್ನು ನೆನಪಿಸುವುದು ಅಗತ್ಯವಾಗಿದೆ. ಅವರ ಒಗ್ಗಟ್ಟಿನ, ಒಮ್ಮನಸ್ಸಿನ ಸೇವೆಯೇ ಸಂಸ್ಥೆಯ ಏಳಿಗೆಗೆ ಕಾರಣವಾಗಿದೆ. ನಾವೆಲ್ಲರೂ ಕೂಡಿ ವಿಜೃಂಭಣೆಯಿಂದ ಅಮೃತ ಮಹೋತ್ಸವವನ್ನು ಆಚರಿಸೋಣ ಎಂದು ನುಡಿದರು.
ಅತಿಥಿಗಳು ಸಂದಭೋìಚಿತವಾಗಿ ಮಾತನಾಡಿ ಸಮಿತಿಯ ಸರ್ವ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷ ಪುರುಷೋತ್ತಮ ಎನ್. ಕೋಟ್ಯಾನ್ ಮಾತನಾಡಿ, ಹೊಟ್ಟೆಪಾಡಿಗಾಗಿ ಮುಂಬಯಿ ಮಹಾನಗರಕ್ಕೆ ಆಗಮಿಸಿದ ನಮ್ಮ ಹಿರಿಯ ತುಳು ಕನ್ನಡಿಗರು ವೆಸ್ಟರ್ನ್ ಇಂಡಿಯಾ ಶನಿ ಮಹಾತ್ಮಾ ಪೂಜಾ ಸಮಿತಿಯಂತೆ ಹಲವಾರು ಸಂಘ ಸಂಸ್ಥೆಗಳನ್ನು ಹುಟ್ಟಿ ಬೆಳೆಸಿದ್ದಾರೆ. ಆಧ್ಯಾತ್ಮಿಕವಾಗಿ ಬಹಳ ಸಮಾಜಸೇವೆಯನ್ನು ಮಾಡಿದ್ದಾರೆ. ಇಂತಹ ಸಂಸ್ಥೆಯ ಅಮೃತ ಮಹೋತ್ಸವಕ್ಕೆ ನಾವೆಲ್ಲ ಒಟ್ಟಾಗಿ ಅಣಿಯಾಗುವ ಎಂದು ಹೇಳಿ ಅಲ್ಲಲ್ಲಿ ನಡೆಯಲಿರುವ ಎಲ್ಲ ಸರಣಿ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸಬೇಕೆಂದರು.
ಈ ಸಂದರ್ಭದಲ್ಲಿ ಪತ್ರಕರ್ತ ಮತ್ತು ಛಾಯಾಚಿತ್ರಗಾರ ಉಮೇಶ್ ಕೆ. ಅಂಚನ್ ಅವರ ವೀಡಿಯೋ ಸಂಯೋಜನೆ ಮತ್ತು ತಾಂತ್ರಿಕ ನಿರ್ದೇಶನದಲ್ಲಿ ಚಿತ್ರೀಕರಿಸಲ್ಪಟ್ಟ ಧನಂಜಯ್ ಶಾಂತಿ ಅವರ ಹರಿಹರ ಸುತ ಸ್ವಾಮಿ ಅಯ್ಯಪ್ಪ ಹರಿಕಥೆಯನ್ನು 3ನೇ ಬಾರಿ ಪುನರ್ಬಿಡುಗಡೆ ಮಾಡಲಾಯಿತು.
ಅತಿಥಿಗಳನ್ನು ಸಮಿತಿಯ ಕೋಶಾಧಿಕಾರಿ ಶರತ್ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ವಿಶ್ವನಾಥ ಭಂಡಾರಿ ವಂದಿಸಿದರು. ಕಾರ್ಯಕ್ರಮವನ್ನು ಹರೀಶ್ ಶಾಂತಿ ನಿರೂಪಿಸಿದರು.ಸಮಿತಿಯ ಸದಸ್ಯರು, ಹರಿಕಥಾ ಪ್ರೇಮಿಗಳು, ಪರಿಸರದ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.