Advertisement

ವಿಂಡೀಸಿಗೆ ಕೊನೆಯಲ್ಲೊಂದು ಜಯ

12:55 AM Jul 05, 2019 | Sriram |

ಲೀಡ್ಸ್‌: ಕೂಟದ ಮೊದಲ ಹಾಗೂ ಕೊನೆಯ ಪಂದ್ಯವನ್ನಷ್ಟೇ ಗೆಲ್ಲುವ ಮೂಲಕ ವೆಸ್ಟ್‌ ಇಂಡೀಸ್‌ ತನ್ನ ವಿಶ್ವಕಪ್‌ ಆಟವನ್ನು ಮುಗಿಸಿತು. ಗುರುವಾರ ಲೀಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಅದು ಅಫ್ಘಾನಿಸ್ಥಾನವನ್ನು 23 ರನ್ನುಗಳಿಂದ ಮಣಿಸಿತು. ಇದರೊಂದಿಗೆ ಅಫ್ಘಾನ್‌ ಎಲ್ಲ 9 ಪಂದ್ಯಗಳಲ್ಲೂ ಸೋಲಿನ ಕಹಿ ಅನುಭವಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡೀಸ್‌ 6 ವಿಕೆಟಿಗೆ 311 ರನ್‌ ಬಾರಿಸಿದರೆ, ಅಫ್ಘಾನಿಸ್ಥಾನ ದಿಟ್ಟ ಹೋರಾಟ ನಡೆಸಿ 50 ಓವರ್‌ಗಳಲ್ಲಿ 288ಕ್ಕೆ ಆಲೌಟ್‌ ಆಯಿತು.

ಅಫ್ಘಾನ್‌ ಪರ ದ್ವಿತೀಯ ವಿಕೆಟಿಗೆ ಜತೆಗೂಡಿದ ರಹಮತ್‌ ಶಾ-ಇಕ್ರಮ್‌ ಅಲಿ ಖೀಲ್‌ 133 ರನ್‌ ಪೇರಿಸಿ ವಿಂಡೀಸಿಗೆ ಬಿಸಿ ಮುಟ್ಟಿಸುತ್ತ ಹೋದರು. ಬಳಿಕ ಮಾಜಿ ನಾಯಕ ಅಸYರ್‌ ಅಫ್ಘಾನ್‌ ಸಿಡಿದು ನಿಂತರು. ಖೀಲ್‌ 86 ರನ್‌ (93 ಎಸೆತ, 8 ಬೌಂಡರಿ), ಶಾ 62 ರನ್‌ (78 ಎಸೆತ, 10 ಬೌಂಡರಿ) ಬಾರಿಸಿದರು.

ಗೇಲ್‌ ಕೊನೆಯ ವಿಶ್ವಕಪ್‌ ಪಂದ್ಯ
ತನ್ನ ಕಟ್ಟಕಡೆಯ ವಿಶ್ವಕಪ್‌ ಪಂದ್ಯವನ್ನು ಆಡಿದ ಕ್ರಿಸ್‌ ಗೇಲ್‌ ಕೇವಲ 7 ರನ್‌ ಮಾಡಿ ನಿರಾಸೆ ಮೂಡಿಸಿದರು. ಬಳಿಕ ಆರಂಭಕಾರ ಎವಿನ್‌ ಲೆವಿಸ್‌ ಮತ್ತು ಶೈ ಹೋಪ್‌ ಸೇರಿಕೊಂಡು 2ನೇ ವಿಕೆಟಿಗೆ 88 ರನ್‌ ಪೇರಿಸಿ ತಂಡವನ್ನು ಮೇಲೆತ್ತಿದರು. ಆ್ಯಂಬ್ರಿಸ್‌ ಬದಲು ಮರಳಿ ಇನ್ನಿಂಗ್ಸ್‌ ಆರಂಭಿಸಲಿಳಿದ ಲೆವಿಸ್‌ 78 ಎಸೆತಗಳಿಂದ 58 ರನ್‌ ಹೊಡೆದರೆ, ಹೋಪ್‌ 92 ಎಸೆತ ಎದುರಿಸಿ ಸರ್ವಾಧಿಕ 77 ರನ್‌ ಹೊಡೆದರು. ಇಬ್ಬರಿಂದಲೂ ತಲಾ 6 ಬೌಂಡರಿ, 2 ಸಿಕ್ಸರ್‌ ಸಿಡಿಯಲ್ಪಟ್ಟಿತು.

ಶಿಮ್ರನ್‌ ಹೆಟ್‌ಮೈರ್‌ ಆಟವೂ ಬಿರುಸಿನಿಂದ ಕೂಡಿತ್ತು. 3 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 39 ರನ್‌ ಹೊಡೆದರು. ಕೊನೆಯ ಹಂತದಲ್ಲಿ ನಿಕೋಲಸ್‌ ಪೂರನ್‌-ನಾಯಕ ಜಾಸನ್‌ ಹೋಲ್ಡರ್‌ ಸೇರಿಕೊಂಡು ಬಿರುಸಿನ ಆಟಕ್ಕಿಳಿದರು. ಇದರಿಂದ ತಂಡದ ಮೊತ್ತ ಮುನ್ನೂರರ ಗಡಿ ದಾಟಿತು. ಪೂರನ್‌ ಶ್ರೀಲಂಕಾ ವಿರುದ್ಧ ಸತಕ ಬಾರಿಸಿ ಮೆರೆದಿದ್ದರು.

Advertisement

ಪೂರನ್‌ ಗಳಿಕೆ 43 ಎಸೆತಗಳಿಂದ 58 ರನ್‌ (6 ಬೌಂಡರಿ, 1 ಸಿಕ್ಸರ್‌). ಹೋಲ್ಡರ್‌ 34 ಎಸೆತ ಎದುರಿಸಿ 45 ರನ್‌ ಬಾರಿಸಿದರು. ಇದು 4 ಸಿಕ್ಸರ್‌ ಹಾಗೂ ಒಂದು ಬೌಂಡರಿಯನ್ನು ಒಳಗೊಂಡಿತ್ತು. ಅಫ್ಘಾನ್‌ ಪರ ಸೀಮರ್‌ ದೌಲತ್‌ ಜದ್ರಾನ್‌ 2 ವಿಕೆಟ್‌ ಕಿತ್ತರು.

ಸ್ಕೋರ್‌ ಪಟ್ಟಿ
ವೆಸ್ಟ್‌ ಇಂಡೀಸ್‌
ಕ್ರಿಸ್‌ ಗೇಲ್‌ ಸಿ ಖೀಲ್‌ ಬಿ ಜದ್ರಾನ್‌ 7
ಎವಿನ್‌ ಲೆವಿಸ್‌ ಸಿ ನಬಿ ಬಿ ರಶೀದ್‌ 58
ಶೈ ಹೋಪ್‌ ಸಿ ರಶೀದ್‌ ಬಿ ನಬಿ 77
ಶಿಮ್ರನ್‌ ಹೆಟ್‌ಮೈರ್‌ ಸಿ ಎನ್‌. ಜದ್ರಾನ್‌ ಬಿ ಜದ್ರಾನ್‌ 39
ನಿಕೋಲಸ್‌ ಪೂರನ್‌ ರನೌಟ್‌ 58
ಜಾಸನ್‌ ಹೋಲ್ಡರ್‌ ಸಿ ಜದ್ರಾನ್‌ ಬಿ ಶಿರ್ಜಾದ್‌ 45
ಬ್ರಾತ್‌ವೇಟ್‌ ಔಟಾಗದೆ 14
ಫ್ಯಾಬಿಯನ್‌ ಅಲೆನ್‌ ಔಟಾಗದೆ 0
ಇತರ 13
ಒಟ್ಟು (50 ಓವರ್‌ಗಳಲ್ಲಿ 6 ವಿಕೆಟಿಗೆ) 311
ವಿಕೆಟ್‌ ಪತನ: 1-21, 2-109, 3-174, 4-192, 5-297, 6-297.
ಬೌಲಿಂಗ್‌:ಮುಜೀಬ್‌ ಉರ್‌ ರಹಮಾನ್‌ 10-0-52-0
ದೌಲತ್‌ ಜದ್ರಾನ್‌ 9-1-73-2
ಸಯ್ಯದ್‌ ಶಿರ್ಜಾದ್‌ 8-0-56-1
ಗುಲ್ಬದಿನ್‌ ನೈಬ್‌ 3-0-18-0
ಮೊಹಮ್ಮದ್‌ ನಬಿ 10-0-56-1
ರಶೀದ್‌ ಖಾನ್‌ 10-0-52-1
ಅಫ್ಘಾನಿಸ್ಥಾನ
ಗುಲ್ಬದಿನ್‌ ನೈಬ್‌ ಸಿ ಲೆವಿಸ್‌ ಬಿ ರೋಚ್‌ 5
ರಹಮತ್‌ ಶಾ ಸಿ ಗೇಲ್‌ ಬಿ ಬ್ರಾತ್‌ವೇಟ್‌ 62
ಇಕ್ರಮ್‌ ಅಲಿ ಖೀಲ್‌ ಎಲ್‌ಬಿಡಬ್ಲ್ಯು ಗೇಲ್‌ 86
ನಜೀಬುಲ್ಲ ಜದ್ರಾನ್‌ ರನೌಟ್‌ 31
ಅಸYರ್‌ ಅಫ್ಘಾನ್‌ ಸಿ ಹೋಲ್ಡರ್‌ ಬಿ ಬ್ರಾತ್‌ವೇಟ್‌ 40
ಮೊಹಮ್ಮದ್‌ ನಬಿ ಸಿ ಅಲೆನ್‌ ಬಿ ರೋಚ್‌ 2
ಸಮಿಯುಲ್ಲ ಶಿನ್ವರಿ ಸಿ ಹೆಟ್‌ಮೈರ್‌ ಬಿ ರೋಚ್‌ 6
ರಶೀದ್‌ ಖಾನ್‌ ಸಿ ಹೋಲ್ಡರ್‌ ಬಿ ಬ್ರಾತ್‌ವೇಟ್‌ 9
ದೌಲತ್‌ ಜದ್ರಾನ್‌ ಸಿ ಕಾಟ್ರೆಲ್‌ ಬಿ ಬ್ರಾತ್‌ವೇಟ್‌ 1
ಸಯ್ಯದ್‌ ಶಿರ್ಜಾದ್‌ಸಿ ಅಲೆನ್‌ ಬಿ ಥಾಮಸ್‌ 25
ಎಂ. ರಹಮಾನ್‌ ಔಟಾಗದೆ 7
ಇತರ 14
ಒಟ್ಟು (50 ಓವರ್‌ಗಳಲ್ಲಿ ಆಲೌಟ್‌) 288
ವಿಕೆಟ್‌ ಪತನ: 1-5, 2-138, 3-189, 4-194, 5-201, 6-227, 7-244, 8-255, 9-260.
ಬೌಲಿಂಗ್‌: ಶೆಲ್ಡನ್‌ ಕಾಟ್ರೆಲ್‌ 7-0-43-0
ಕೆಮರ್‌ ರೋಚ್‌ 10-2-32-3
ಒಶೇನ್‌ ಥಾಮಸ್‌ 7-0-43-1
ಜಾಸನ್‌ ಹೋಲ್ಡರ್‌ 8-0-46-0
ಫ್ಯಾಬಿಯನ್‌ ಅಲೆನ್‌ 3-0-26-0
ಕಾರ್ಲೋಸ್‌ ಬ್ರಾತ್‌ವೇಟ್‌ 9-0-63-4
ಕ್ರಿಸ್‌ ಗೇಲ್‌ 6-0-28-1
ಪಂದ್ಯಶ್ರೇಷ್ಠ: ಶೈ ಹೋಪ್‌

Advertisement

Udayavani is now on Telegram. Click here to join our channel and stay updated with the latest news.

Next