Advertisement

ವೆಸ್ಟ್‌ ಇಂಡೀಸ್‌ ಪ್ರವಾಸ: 23 ಸದಸ್ಯರ ಆಸೀಸ್‌ ತಂಡ ಪ್ರಕಟ

11:35 PM May 17, 2021 | Team Udayavani |

ಮೆಲ್ಬರ್ನ್ : ಸೀಮಿತ ಓವರ್‌ಗಳ ಸರಣಿಗಾಗಿ ವೆಸ್ಟ್‌ ಇಂಡೀಸ್‌ ಪ್ರವಾಸ ಕೈಗೊಳ್ಳಲಿರುವ 23 ಸದಸ್ಯರ ಆಸ್ಟ್ರೇಲಿಯ ಕ್ರಿಕೆಟ್‌ ತಂಡವನ್ನು ಪ್ರಕಟಿ ಸಲಾಗಿದೆ. ಆರಂಭಕಾರ ಆರನ್‌ ಫಿಂಚ್‌ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ಈ ಸರಣಿ ವೇಳೆ ಒಟ್ಟು 8 ಪಂದ್ಯ ಗಳನ್ನು ಆಡಲಾಗುವುದು. 5 ಪಂದ್ಯಗಳ ಟಿ20 ಸರಣಿ ಸೇಂಟ್‌ ಲೂಸಿಯಾದಲ್ಲಿ ಹಾಗೂ 3 ಪಂದ್ಯಗಳ ಏಕದಿನ ಸರಣಿ ಬಾರ್ಬಡಾಸ್‌ನಲ್ಲಿ ನಡೆಯಲಿದೆ.

ನ್ಯೂಜಿಲ್ಯಾಂಡ್‌ ವಿರುದ್ಧದ ಟಿ20 ಸರಣಿಗೆ ಗೈರಾಗಿದ್ದ 8 ಮಂದಿ ಆಟ ಗಾರರು ಮತ್ತೆ ಆಸೀಸ್‌ ತಂಡಕ್ಕೆ ಸೇರ್ಪ ಡೆಗೊಂಡಿದ್ದಾರೆ. ಇವರೆಂದರೆ ಸ್ಟೀವನ್‌ ಸ್ಮಿತ್‌, ಡೇವಿಡ್‌ ವಾರ್ನರ್‌, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹ್ಯಾಝಲ್‌ವುಡ್‌, ಮೊಸೆಸ್‌ ಹೆನ್ರಿಕ್ಸ್‌, ಅಲೆಕ್ಸ್‌ ಕ್ಯಾರಿ ಹಾಗೂ ಲೆಗ್‌ ಸ್ಪಿನ್ನರ್‌ ಮಿಚೆಲ್‌ ಸ್ವೆಪ್ಸನ್‌.

ಇದನ್ನೂ ಓದಿ :ಇಟಾಲಿಯನ್‌ ಓಪನ್‌ ಫೈನಲ್‌ : ರೋಮ್‌ ಟೆನಿಸ್‌ ಸಾಮ್ರಾಜ್ಯಕ್ಕೆ ನಡಾಲ್‌ ದೊರೆ

ಲಬುಶೇನ್‌ಗೆ “ನಿರ್ಬಂಧ’
ಆದರೆ ಕೋವಿಡ್‌-19 ಪ್ರಯಾಣ ನಿರ್ಬಂಧದಿಂದಾಗಿ ಆಸ್ಟ್ರೇಲಿಯದ ಸ್ಟಾರ್‌ ಬ್ಯಾಟ್ಸ್‌ಮನ್‌ ಮಾರ್ನಸ್‌ ಲಬುಶೇನ್‌ ಅವರಿಗೆ ತಂಡದಲ್ಲಿ ಸ್ಥಾನ ಲಭಿಸಿಲ್ಲ. ಸದ್ಯ ಅವರು ಇಂಗ್ಲಿಷ್‌ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next