Advertisement

ಮಾರ್ಕ್‌ ವುಡ್‌ ದಾಳಿಗೆ ಕುಸಿದ ವಿಂಡೀಸ್‌

12:30 AM Feb 12, 2019 | Team Udayavani |

ನಾರ್ತ್‌ ಸೌಂಡ್‌: ಮಾರ್ಕ್‌ ವುಡ್‌-ಮೊಯಿನ್‌ ಅಲಿ ಜೋಡಿಯ ಬೌಲಿಂಗ್‌ ದಾಳಿಗೆ ಕುಸಿದ ವೆಸ್ಟ್‌ ಇಂಡೀಸ್‌, ಅಂತಿಮ ಟೆಸ್ಟ್‌ ಪಂದ್ಯದ 2ನೇ ದಿನ 154 ರನ್ನಿಗೆ ಮೊದಲ ಇನ್ನಿಂಗ್ಸ್‌ ಮುಗಿಸಿದೆ. ಇದರಿಂದ ಇಂಗ್ಲೆಂಡಿಗೆ 123 ರನ್‌ ಮುನ್ನಡೆ ಲಭಿಸಿದೆ.

Advertisement

ಇಂಗ್ಲೆಂಡ್‌ ಮೊದಲ ಸರದಿಯಲ್ಲಿ 277 ರನ್‌ ಮಾಡಿತ್ತು. 2ನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ 19 ರನ್‌ ಗಳಿಸಿದೆ.

ಮಾರ್ಕ್‌ ವುಡ್‌ 41ಕ್ಕೆ 5, ಮೊಯಿನ್‌ ಅಲಿ 36ಕ್ಕೆ 4 ವಿಕೆಟ್‌ ಉರುಳಿಸಿದರು. ವಿಂಡೀಸ್‌ ಪರ 41 ರನ್‌ ಮಾಡಿದ ಆರಂಭಾಕರ ಜಾನ್‌ ಕ್ಯಾಂಬೆಲ್‌ ಅವರದೇ ಹೆಚ್ಚಿನ ಗಳಿಕೆ. ಕೀಪರ್‌ ಶೇನ್‌ ಡೌರಿಚ್‌ 28 ರನ್‌ ಹೊಡೆದರು. ನಾಯಕ ಜಾಸನ್‌ ಹೋಲ್ಡರ್‌ ಒಂದು ಪಂದ್ಯದ ನಿಷೇಧಕ್ಕೆ ಸಿಲುಕಿರುವುದು ಕೆರಿಬಿಯನ್‌ ಪಡೆಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-277 ಮತ್ತು ವಿಕೆಟ್‌ ನಷ್ಟವಿಲ್ಲದೆ 19. ವೆಸ್ಟ್‌ ಇಂಡೀಸ್‌-154.

Advertisement

Udayavani is now on Telegram. Click here to join our channel and stay updated with the latest news.

Next