Advertisement

ವೆಸ್ಟ್‌ಇಂಡೀಸ್‌ ಕ್ರಿಕೆಟಿಗ ಸ್ಯಾಮುವೆಲ್ಸ್‌ಗೆ ಪಾಕ್‌ ಸೇನೆ ಸೇರುವಾಸೆ

03:42 PM Mar 13, 2017 | Team Udayavani |

ಕರಾಚಿ : ‘ನಾನು ಹೃದಯದಿಂದ ಪಾಕಿಸ್ಥಾನೀ; ಪಾಕ್‌ ಸೇನೆಯನ್ನು ಸೇರಬೇಕೆಂಬ ಉತ್ಕಟ ಆಸೆ ನನಗಿದೆ’ ಎಂದಿದ್ದಾರೆ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಂಡ ಬ್ಯಾಟಿಂಗ್‌ ತಾರೆ ಮಾರ್ಲಾನ್‌ ಸ್ಯಾಮುವೆಲ್ಸ್‌ !

Advertisement

ಸ್ಯಾಮುವೆಲ್ಸ್‌ ಅವರು ಈಚೆಗೆ ಲಾಹೋರ್‌ನಲ್ಲಿ ನಡೆದಿದ್ದ ಪಾಕಿಸ್ಥಾನ್‌ ಸೂಪರ್‌ ಲೀಗ್‌ನ ಫೈನಲ್‌ ಪಂದ್ಯದಲ್ಲಿ ಆಡಿ ತಾನು ಪ್ರತಿನಿಧಿಸಿದ ತಂಡಕ್ಕೆ ಜಯ ದೊರಕಿಸುವಲ್ಲಿ ಪ್ರಧಾನ ಪಾತ್ರವಹಿಸಿದ್ದರು.

ಇಷ್ಟಕ್ಕೂ ಸ್ಯಾಮುವೆಲ್ಸ್‌ಗೆ ಪಾಕ್‌ ಸೇನೆಯನ್ನು ಸೇರಿಕೊಳ್ಳುವ ಆಸೆ ಚಿಗುರಿಕೊಂಡದ್ದು ಹೇಗೆ ಗೊತ್ತಾ ? ಎಲ್ಲರಿಗೂ ತಿಳಿದಿರುವ ಹಾಗೆ ಪಾಕಿಸ್ಥಾನದಲ್ಲಿ ವಿಶ್ವದ ಯಾವುದೇ ಕ್ರಿಕೆಟ್‌ ತಂಡ “ಭದ್ರತೆಯ ಭಯ’ಕ್ಕಾಗಿ ಕಳೆದ ಹಲವು ವರ್ಷಗಳಿಂದ ಆಡುತ್ತಿಲ್ಲ. ಹಾಗಾಗಿ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್‌ ತಂಡ ಪಾಕಿಸ್ಥಾನಕ್ಕೆ ಪ್ರವಾಸ ಹೋಗುವುದಿಲ್ಲ !

ಪಿಎಸ್‌ಎಲ್‌ ಚಾಂಪ್ಯನ್‌ಶಿಪ್‌ ಗೆದ್ದಿರುವ ಝಾಲ್‌ಮಿ ತಂಡವನ್ನು ಪ್ರತಿನಿಧಿಸಿದ ಸ್ಯಾಮುವೆಲ್ಸ್‌ಗೆ ಪಾಕ್‌ ಸೂಪರ್‌ ಲೀಗ್‌  ಫೈನಲ್‌ ಪಂದ್ಯಕ್ಕೆ ಪಾಕ್‌ ಸೇನೆ ಕೊಟ್ಟಿರುವ “ಟಾಪ್‌ ಕ್ಲಾಸ್‌’ ಭದ್ರತೆಯ ಬಗ್ಗೆ ಭಾರೀ ಮೆಚ್ಚುಗೆ ಉಂಟಾಗಿದೆ. ಇಷ್ಟು ಒಳ್ಳೆಯ ಭದ್ರತೆ ಕೊಟ್ಟಿರುವ ಪಾಕ್‌ ಸೇನೆಯನ್ನು ತಾನು ಖುದ್ದಾಗಿ ಸೇರಬೇಕೆಂಬ ಆಸೆ ತನಗಾಗಿದೆ ಎಂದು ಸ್ಯಾಮೆವೆಲ್ಸ್‌ ಭಾರೀ ಪ್ರಶಂಸೆಯ ಮಾತುಗಳನ್ನು ಆಡಿದರು.

ಪಿಎಸ್‌ಎಲ್‌ ಚಾಂಪ್ಯನ್ಸ್‌ಗಳನ್ನು ಪಾಕ್‌ ಸೇನಾ ಮುಖ್ಯಸ್ಥ ಜನರಲ್‌ ಕಮರ್‌ ಜಾವೇದ್‌ ಬಾಜ್ವಾ ಅವರು ಭೇಟಿಯಾಗಲು ಬಂದಿದ್ದರು. ಆ ಸಂದರ್ಭದಲ್ಲಿ ಸ್ಯಾಮುವೆಲ್ಸ್‌ ಟ್ವಿಟರ್‌ನಲ್ಲಿ ವಿಡಿಯೋ ಸಂದೇಶವನ್ನು ಅಪ್‌ ಲೋಡ್‌ ಮಾಡಿದರು : 

Advertisement

‘ಕ್ರಿಕೆಟ್‌ ಪಂದ್ಯವೊಂದನ್ನು ಆಡಲು ಪಾಕಿಸ್ಥಾನಕ್ಕೆ ಬರುವುದೆಂದರೆ ನನಗದು ಅದಕ್ಕಿಂತ ಎಷ್ಟೋ ಹೆಚ್ಚಿನದ್ದಾಗಿದೆ. ನನಗೆ ನನ್ನ ದೇಶದಲ್ಲಿ ಅದೆಷ್ಟೋ ಪಾಕಿಸ್ಥಾನೀ ಸ್ನೇಹಿತರಿದ್ದಾರೆ. ನಿಜಕ್ಕಾದರೆ ನಾನು ಹೃದಯಾಂತರಾಳದಿಂದ ಒಬ್ಬ ಪಾಕಿಸ್ಥಾನಿಯೇ ಆಗಿದ್ದೇನೆ. ಹಾಗಾಗಿ ಪಿಎಸ್‌ಎಲ್‌ ಫೈನಲ್‌ ಆಡಲು ಪಾಕಿಸ್ಥಾನಕ್ಕೆ ಹೋಗುವ ನಿರ್ಧಾರವನ್ನು ಕೂಡಲೇ ತೆಗೆದುಕೊಂಡೆ’.

ಪಾಕ್‌ ಸೇನಾ ಮುಖ್ಯಸ್ಥರನ್ನು ನೇರವಾಗಿ ಉದ್ದೇಶಿಸಿ ಸ್ಯಾಮುವೆಲ್ಸ್‌ ಹೇಳಿದ್ದು ಇಷ್ಟು : ಜನರಲ್‌, ನನ್ನ ಹೆಗಲ ಮೇಲೆ ಮೆಟಾಲಿಕ್‌ ಬ್ಯಾಜ್‌ ಧರಿಸಿಕೊಳ್ಳಲು ಸಾಧ್ಯವಾದರೆ ನಾನು ಪಾಕಿಸ್ಥಾನಕ್ಕೆ ಭೇಟಿಕೊಡಲು ಯಾವತ್ತೂ ಇಷ್ಟ ಪಡುತ್ತೇನೆ. ನಾನು ಅಂತಹ ಬ್ಯಾಜ್‌ ಧರಿಸುವುದನ್ನೇ ಕಾಯುತ್ತಿದ್ದೇನೆ; ನಾನು ಪಾಕ್‌ ಸೇನೆಯ ಭಾಗವಾಗಿರಲು ಬಯಸುತ್ತೇನೆ’ .

ಸ್ಯಾಮುವೆಲ್ಸ್‌ ಅವರ ವಿಡಿಯೋ ಸಂದೇಶಕ್ಕೆ ಉತ್ತರವಾಗಿ ಝಾಲ್‌ಮಿ ಸಿಇಓ ಅವರು ಉತ್ತರಿಸಿದ್ದು ಹೀಗೆ : ನಿಮ್ಮ ಈ ಚಿನ್ನದಂತಹ ಮಾತುಗಳು ನಾವು ಶಾಂತಿಯನ್ನು ಹಾಗೂ ಕ್ರಿಕೆಟನ್ನು ಪ್ರೀತಿಸುವ ದೇಶ ಎಂಬ ಸಂದೇಶವನ್ನು ಜಗತ್ತಿಗೇ ಸಾರುವಂತಿದೆ. ನಿಜಕ್ಕಾದರೆ ನೀವು ಹೃದಯದ ಚಾಂಪ್ಯನ್ಸ್‌ಗಳು’.

Advertisement

Udayavani is now on Telegram. Click here to join our channel and stay updated with the latest news.

Next