Advertisement

West Bengal;ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ ಸಚಿವ ಪದತ್ಯಾಗ

01:19 AM Aug 05, 2024 | Team Udayavani |

ಕೋಲ್ಕತಾ: ಮಹಿಳಾ ಅಧಿಕಾರಿಯೊಬ್ಬರಿಗೆ ಬೆದರಿಕೆ ಹಾಕಿದ ವೀಡಿಯೋ ವೈರಲ್‌ ಆದ ಬೆನ್ನಲ್ಲೇ ಪಶ್ಚಿಮ ಬಂಗಾಲದ ಸಚಿವ ಸ್ಥಾನಕ್ಕೆ ತೃಣಮೂಲ ಕಾಂಗ್ರೆಸ್‌ ನಾಯಕ ಅಖೀಲ್‌ ಗಿರಿ ರಾಜೀನಾಮೆ ನೀಡಿದ್ದಾರೆ. ಪಕ್ಷ ನೀಡಿದ ಸೂಚನೆಯ ಮೇಲೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ನಾನು ಬಳಸಿದ ಪದಗಳಿಗೆ ಕ್ಷಮೆ ಯಾಚಿಸುತ್ತೇನೆ. ಆದರೆ ತಪ್ಪು ಅಧಿಕಾರಿಯದ್ದೇ ಆಗಿ ರುವುದರಿಂದ ಆಕೆಯ ಬಳಿ ಕ್ಷಮೆಯಾಚಿಸಲ್ಲ ಎಂದು ಮೊಂಡುತನ ಪ್ರದರ್ಶಿಸಿದ್ದಾರೆ. ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದ ಜಿಲ್ಲಾ ಅರಣ್ಯಾ ಧಿಕಾರಿ ಮನೀಷಾ ಶಾಹುರಿಗೆ, “ನಿನಗೆ ಕೋಲಿನಲ್ಲಿ ಬಡಿಯುತ್ತೇನೆ’ ಎಂದು ಗಿರಿ ಬೆದರಿಕೆಯೊಡ್ಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next