Advertisement
ಪಶ್ಚಿಮ ಬಂಗಾಲದಲ್ಲಿ ಪ್ರಥಮ ಹಂತದ ಮತದಾನ ಮುಗಿದಿದ್ದು, ಎರಡನೇ ಹಂತಕ್ಕೆ ವೇದಿಕೆ ಸಿದ್ಧವಾಗಿದೆ. ಬಂಗಾಲದ ಮಗಳು ಎಂದು ಕರೆಸಿಕೊಳ್ಳುವ ಮಮತಾ ಬ್ಯಾನರ್ಜಿ ಈ ಬಾರಿ ಬ್ಯಾಂಡೇಜ್ ಧರಿಸಿ ವ್ಹೀಲ್ ಚೇರ್ ನಲ್ಲಿಯೇ ಪ್ರಚಾರ ನಡೆಸಿದ್ದಾರೆ. ರಾಜ್ಯ ದಲ್ಲಿ ಭದ್ರ ನೆಲೆ ಸ್ಥಾಪಿಸಲು ಕೆಲವು ವರ್ಷಗಳಿಂದ ಪ್ರಯತ್ನಿಸುತ್ತಿರುವ ಬಿಜೆಪಿಯೂ ಎಲ್ಲ ತಂತ್ರಗಳನ್ನೂ ಅನುಸರಿಸುತ್ತಿದೆ. ಇನ್ನೊಂದೆಡೆ ಎಡರಂಗ ಹಾಗೂ ಕಾಂಗ್ರೆಸ್ ಮೈತ್ರಿ ಏನಕೇನ ಈ ಎರಡೂ ಪಕ್ಷಗಳನ್ನು ಸೋಲಿಸಬೇಕೆಂದು ಪ್ರಯತ್ನಿಸುತ್ತಿದೆ. ಹಾಗಿದ್ದರೆ ಮತದಾರರು ಯಾರಿಗೆ ಗೆಲುವಿನ ಹಾರ ಹಾಕಲಿದ್ದಾರೆ?
ಅನೇಕ ಪರಿಣತರು, ಚುನಾವಣ ಪಂಡಿತರು ಹಾಗೂ ತೃಣಮೂಲ ಕಾಂಗ್ರೆಸ್‌ನ ರಾಜ ಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅಂತೂ ಮಮತಾ ಬ್ಯಾನರ್ಜಿಯವರ ವರ್ಚಸ್ಸು ಬೃಹತ್ತಾಗಿದ್ದು, ಅವರೇ ಗೆಲ್ಲಲಿದ್ದಾರೆ ಎನ್ನುತ್ತಿದ್ದಾರೆ. ಇನ್ನು ಚುನಾವಣ ಪೂರ್ವ ಸಮೀಕ್ಷೆಗಳೂ ಸಹ, ಬಿಜೆಪಿ ತೃಣಮೂಲಕ್ಕೆ ಪ್ರಬಲ ಪೈಪೋಟಿ ಒಡ್ಡಬಹುದು, ಆದರೆ ದೀದಿಯದ್ದೇ ಮೇಲುಗೈಯಾಗಲಿದೆ ಎಂದಿವೆ. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಮತಾಗೆ ಪ್ರಬಲ ಪ್ರತಿಸ್ಪರ್ಧೆ ಒಡ್ಡಿತ್ತು. ಅದೇ ಜನಪ್ರಿಯತೆ ವಿಧಾನಸಭಾ ಚುನಾವಣೆಯಲ್ಲೂ ಅದಕ್ಕೆ ದಕ್ಕಬಹುದೇ ಎನ್ನುವ ಬಗ್ಗೆ ಉತ್ತರಗಳಿಲ್ಲ. ರಾಜವಂಶಿ ಮತ್ತು ಮಥುವಾ ಫ್ಯಾಕ್ಟರ್
ಅತ್ತ ತೃಣಮೂಲ ಕಾಂಗ್ರೆಸ್ ಮತ್ತು ಇತ್ತ ಬಿಜೆಪಿಯು ಮುಖ್ಯವಾಗಿ ಕೋಚ್ ರಾಜವಂಶಿ ಮತವರ್ಗದ ಮೇಲೆಯೇ ಗಮನಹರಿಸಿವೆ. ಪಶ್ಚಿಮ ಬಂಗಾಲದಲ್ಲಿ ಅತೀ ದೊಡ್ಡ ಎಸ್‌ಸಿ ವರ್ಗವಾಗಿರುವ ರಾಜವಂಶಿಗಳ ಸಂಖ್ಯೆ 18.4 ಪ್ರತಿಶತವಿರುವುದು ಇದಕ್ಕೆ ಮುಖ್ಯ ಕಾರಣ. ಈ ಕಾರಣಕ್ಕಾಗಿಯೇ, ಈ ಸಮುದಾಯದ ವೀರ ಸೈನಿಕರ ಹೆಸರನ್ನು ಪ್ಯಾರಾಮಿಲಿಟರಿ ಪಡೆಗೆ ಇಡುವುದಾಗಿ ಬಿಜೆಪಿ ಹೇಳುತ್ತಿದ್ದರೆ, ಮಮತಾ ಬ್ಯಾನರ್ಜಿ ರಾಜವಂಶಿ ಸಮುದಾಯದ 16ನೇ ಶತಮಾನದ ವೀರ ರಾಜಾ ನರನಾರಾಯಣರ ಹೆಸರಲ್ಲಿ ನಾರಾಯಣಿ ಎಂಬ ಪೊಲೀಸ್ ಬೆಟಾಲಿಯನ್ ಅನ್ನು ಸ್ಥಾಪಿಸಿದೆ.
Related Articles
Advertisement
ಆರೋಗ್ಯದ ಲೆಕ್ಕಾಚಾರ ಕೋವಿಡ್ ವಿಚಾರವೂ ಪ.ಬಂಗಾಲ ಚುನಾವಣೆಯಲ್ಲಿ ಈ ಬಾರಿ ಮುನ್ನೆಲೆಯಲ್ಲಿದ್ದು, ಬಿಜೆಪಿ ಹಾಗೂ ತೃಣಮೂಲದಿಂದ ಆರೋಪ ಪ್ರತ್ಯಾರೋಪಗಳು ನಡೆದೇ ಇವೆ. ತಾನು ಅಧಿಕಾರಕ್ಕೆ ಬಂದರೆ, ಬುಡಕಟ್ಟು ಸಮುದಾಯಗಳು ಹೆಚ್ಚು ವಾಸಿಸುವ ಪ್ರದೇಶಗಳಲ್ಲಿ ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಬಿಜೆಪಿ ಹೇಳಿದರೆ, ಇತ್ತ ಮಮತಾ ದೀದಿ, ನವ ಸ್ವಾಸ್ಥ್ಯ ಯೋಜನೆಯನ್ನು ಪರಿಚಯಿಸಿದ್ದು, ಈ ಕಾರ್ಡ್ ಕುಟುಂಬದ ಹಿರಿಯ ಮಹಿಳಾ ಸದಸ್ಯೆಯ ಹೆಸರಿನಲ್ಲಿರುವುದು ವಿಶೇಷ. ಮಹಿಳಾ ಮತದಾರರನ್ನು ಸೆಳೆಯಲು ಬಿಜೆಪಿಯೂ ಪ್ರಯತ್ನಿಸುತ್ತಿದ್ದು, ತಾನು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವುದಾಗಿ ಅದು ಹೇಳುತ್ತಿದೆ. ಆಂಫಾನ್ ವಿಚಾರ ಯಾರ ಪರ?
ಮೇ 2020ರಲ್ಲಿ ಆಂಫಾನ್ ಚಂಡಮಾರುತ ಭಾರತಕ್ಕೆ ಬಂದಪ್ಪಳಿಸಿದಾಗ ಪಶ್ಚಿಮ ಬಂಗಾಲದ ಕರಾವಳಿ ಭಾಗಗಳು ಅತೀ ಹೆಚ್ಚು ಹಾನಿಗೀಡಾದವು. ಬೃಹತ್ ಪ್ರಮಾಣದಲ್ಲಿ ಸ್ವತ್ತು-ಆಸ್ತಿಗಳು ನಾಶವಾದವು. ರಾಜ್ಯ ರಾಜಧಾನಿಯಲ್ಲೂ ವಿದ್ಯುತ್ ಸಂಪರ್ಕ ಮರುಸ್ಥಾಪಿಸಲು ನಾಲ್ಕು ದಿನಗಳು ಹಿಡಿದವು. ಈ ವೇಳೆಯಲ್ಲಿ ಮಮತಾ ತ್ವರಿತವಾಗಿ ಸ್ಪಂದಿಸಲಿಲ್ಲ ಎಂದು ಬಿಜೆಪಿ ದೂರುತ್ತದೆ. ಆದರೆ ಬಿಜೆಪಿ ಅಸ್ಸಾಂಗೆ ಹೆಚ್ಚು ಮಹತ್ವ ನೀಡಿ ಪಶ್ಚಿಮ ಬಂಗಾಲವನ್ನು ಅವಗಣಿಸಿತು ಎನ್ನುವ ಆರೋಪ ತೃಣಮೂಲದ್ದು. ಅದರಲ್ಲೂ ಆಂಫಾನ್ ಪರಿಹಾರ ವಿತರಣೆಯ ವಿಷಯದಲ್ಲಿ ತೃಣಮೂಲ ನಾಯಕರು ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ, ಇದು ಆಂಫಾನ್ ದುನೀìತಿ ಎಂದೇ ಬಿಜೆಪಿ ಪ್ರಚಾರ ಮಾಡುತ್ತಾ ಬಂದಿದೆ. ಗಮನಾರ್ಹ ಸಂಗತಿ ಯೆಂದರೆ, ಆಂಫಾನ್ ಪೀಡಿತ ಪ್ರದೇಶಗಳೆಲ್ಲವೂ 2019ರ ಚುನಾವಣೆಯಲ್ಲಿ ಬಿಜೆಪಿಗೆ ವಿರುದ್ಧ ಮತ ಹಾಕಿದ್ದವು, ಈಗ ಈ ಪ್ರದೇಶಗಳ ಜನರು ಬಿಜೆಪಿ ಅಥವಾ ಎಡ ಮೈತ್ರಿಯ ಪರ ವಾಲಿದರೆ ಹೇಗೆ ಎಂಬ ಭಯ ತೃಣಮೂಲಕ್ಕೆ ಇದೆ. ಎಡರಂಗದ ಲೆಕ್ಕಾಚಾರ
ಬಿಜೆಪಿ ಪಶ್ಚಿಮ ಬಂಗಾಲದಲ್ಲಿ ಬೆಳೆದದ್ದಕ್ಕೆ ಎಡರಂಗವು ತನ್ನ ಶಕ್ತಿಯನ್ನು ಕಳೆದುಕೊಂಡು ಅದರ ಮತವರ್ಗವೆಲ್ಲ ಹರಿದು ಹಂಚಿ ಹೋಗಿದ್ದೂ ಪ್ರಮುಖ ಕಾರಣ. 2019ರ ಲೋಕಸಭಾ ಚುನಾವಣೆಯಲ್ಲಿ ಸಿಪಿಐ(ಎಂ) ನೇತೃತ್ವದ ಎಡರಂಗಕ್ಕೆ ದಕ್ಕಿದ್ದು ಕೇವಲ 7.5 ಪ್ರತಿಶತ ಮತಗಳಷ್ಟೇ, ಹತ್ತು ವರ್ಷಗಳ ಹಿಂದೆ ಈ ಪ್ರಮಾಣ 35.8 ಪ್ರತಿಶತದಷ್ಟಿತ್ತು. ಆದಾಗ್ಯೂ ಎಡ ರಂಗವು ಚುನಾವಣ ದೃಷ್ಟಿ ಯಿಂದ ಅಪ್ರಸ್ತುತ ಎಂದು ಕೆಲವು ಪರಿಣತರು ಹೇಳುತ್ತಾರಾದರೂ, ಎಡರಂಗದ ಈಗಿನ ಮತ್ತು ಪರಿತ್ಯಕ್ತ ಮತವರ್ಗ 2021ರ ಫಲಿತಾಂಶವನ್ನು ರೂಪಿಸುವಲ್ಲಿ ಪಾತ್ರ ವಹಿಸಬಲ್ಲದು ಎನ್ನುವ ನಿರೀಕ್ಷೆಯೂ ಇದೆ. ಎಡರಂಗವು ಈ ಬಾರಿ ಕಾಂಗ್ರೆಸ್ ಹಾಗೂ ಇಂಡಿಯನ್ ಸೆಕ್ಯೂಲರ್ ಫ್ರಂಟ್ ಜತೆ ಮೈತ್ರಿ ಮಾಡಿಕೊಂಡಿದ್ದು, ಅತ್ತ ತೃಣಮೂಲವನ್ನು ಇತ್ತ ಬಿಜೆಪಿಯನ್ನು ಟಾರ್ಗೆಟ್ ಮಾಡುತ್ತಿದೆ. ಪಶ್ಚಿಮ ಬಂಗಾಲದಲ್ಲಿ ಮುಸ್ಲಿಂ ಮತವರ್ಗದ ಸಂಖ್ಯೆ 30 ಪ್ರತಿಶತದಷ್ಟಿದ್ದು, ಅವರು ನಿರ್ಣಾಯಕ ಪಾತ್ರ ವಹಿಸಬಲ್ಲರು. ಈ ಕಾರಣಕ್ಕಾಗಿಯೇ ಎಡ ಮೈತ್ರಿಯು ಇಂಡಿಯನ್ ಸೆಕ್ಯೂಲರ್ ಫ್ರಂಟ್ ಜತೆ ಕೈಜೋಡಿಸಿರುವುದು. ಮುಸ್ಲಿಂ ಮತವರ್ಗ ತೃಣಮೂಲದ ಕಡೆ ಹೋಗುವುದೋ ಅಥವಾ ಎಡ ಮೈತ್ರಿಯೆಡೆಗೋ ನೋಡಬೇಕಿದೆ. ಬೆಂಗಾಲಿ ವರ್ಸಸ್ ಹೊರಗಿನವರು
ಪಶ್ಚಿಮ ಬಂಗಾಲದಲ್ಲಿ ಈಗ ಪ್ರಚಾರಗಳಲ್ಲಿ ಹರಿದಾಡುತ್ತಿರುವ ಪ್ರಮುಖ ಘೋಷಣೆಯೆಂದರೆ ಬೆಂಗಾಲಿ ವರ್ಸಸ್ ಹೊರಗಿನವರು ಎನ್ನುವ ಮಾತು. ತೃಣಮೂಲವಷ್ಟೇ ಅಲ್ಲ, ಎಡ ಮೈತ್ರಿಯೂ ಹೀಗೆಯೇ ಹೇಳುತ್ತಿದೆ. ಐಡೆಂಟಿಟಿ ರಾಜಕೀಯ ಈಗ ತಿರುವು ಪಡೆದಿದ್ದು, ಇದೇ ವಿಷಯವನ್ನು ಮುನ್ನೆಲೆ ಯಲ್ಲಿಟ್ಟು ಬಿಜೆಪಿ, ಪಶ್ಚಿಮ ಬಂಗಾಲದಲ್ಲಿರುವ 30 ಪ್ರತಿಶತಕ್ಕೂ ಅಧಿಕ ಬಂಗಾಲೇತರ ಜನಸಂಖ್ಯೆಯನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ಡಾರ್ಜಿಲಿಂಗ್, ಜಲ್ಪಾಯಿಗುರಿ, ಉತ್ತರ ದಿನಾಜು³ರ ಮತ್ತು ರಾಜಧಾನಿ ಕೋಲ್ಕತಾದಲ್ಲೂ ಅನ್ಯ ಭಾಷಿಕರು ಅಧಿಕ ಸಂಖ್ಯೆಯಲ್ಲಿದ್ದಾರೆ.