ಪುರ್ಬಾ : ಮೂರು ವರ್ಷಗಳ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟ ಬಿಜೆಪಿ ನಾಯಕ ಸುವೇಂದು ಅಧಿಕಾರಿಯವರ ಮಾಜಿ ಬಾಡಿಗಾರ್ಡ್ ಅಥವಾ ಅಂಗರಕ್ಷಕ ಶುಭಬ್ರತಾ ಚಕ್ರವರ್ತಿ ಸಾವಿನ ತನಿಖೆಗಾಗಿ ನಾಲ್ಕು ಸದಸ್ಯರ ಅಪರಾಧ ತನಿಖಾ ಇಲಾಖೆ (ಸಿಐಡಿ) ನಿಯೋಗ ಇಂದು(ಬುಧವಾರ, ಜುಲೈ 14) ಪುರ್ಬಾ ಮೆದಿನಿಪುರಕ್ಕೆ ಭೇಟಿ ನೀಡಿದೆ.
ಇದನ್ನೂ ಓದಿ : ಶೀಘ್ರದಲ್ಲಿಯೇ ಗೋವಾ ಪ್ರವಾಸೋದ್ಯಮಕ್ಕೆ ಚಾಲನೆ : ಶ್ರೀಪಾದ ನಾಯ್ಕ
ಸಿಐಡಿ ನಿಯೋಗ ಇಂದು ಪುರ್ಬಾ ಮದಿನಿಪುರ ಜಿಲ್ಲೆಯ ಕಾಂತಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಕಾಂತಿ ಪೊಲೀಸ್ ಠಾಣೆ ಅಧಿಕಾರಿಗಳೊಂದಿಗೆ ಅಂದಾಜು ಅರ್ಧ ಘಂಟೆಯವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚಿಸಿ ನಂತರ ಶುಭಭ್ರತ ಚಕ್ರವರ್ತಿ ಅವರ ಪತ್ನಿ ಸುಪರ್ಣ ಕಾಂಜಿಲಾಲ್ ಚಕ್ರವರ್ತಿ ದಾಖಲಿಸಿದ್ದ ಪ್ರಕರಣವನ್ನು ಪೊಲೀಸರ ವಶದಿಂದ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ನಂತರ ಸುಭಾಬ್ರತಾ ಚಕ್ರವರ್ತಿ ವಾಸವಾಗಿದ್ದ ಕಾಂತಿಯ ವಾರ್ಡ್ 17 ರಲ್ಲಿರುವ ಪೊಲೀಸ್ ಬ್ಯಾರಕ್ ಗೆ ಭೇಟಿ ನೀಡಿದರು. ಆ ಬಳಿಕ ಸಿಐಡಿ ಸುವೇಂದು ಅಧಿಕಾರಿಯ ಮನೆ ಭೇಟಿ ನೀಡಿದರು. ಸಿಐಡಿ ತಂಡವು ತನಿಖೆ ಮುಂದುವರಿಸಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.
ಇದನ್ನೂ ಓದಿ : ನಮಗೆ ರಾಜಕೀಯ ಮಾಡುವುದಕ್ಕೆ ಬರುವುದಿಲ್ಲ, ಜನರ ಸೇವೆಗಾಗಿ ಇಲ್ಲಿ ಇದ್ದೇವೆ : ಕೇಜ್ರಿವಾಲ್