Advertisement

West Bengal: 25,753 ಶಿಕ್ಷಕರ ನೇಮಕ ರದ್ದು

01:23 AM Apr 23, 2024 | Team Udayavani |

ಕೋಲ್ಕತಾ: ಸರಕಾರಿ ಶಾಲೆಗಳಿಗೆ ಮತ್ತು ಅನುದಾನಿತ ಶಾಲೆಗಳಿಗೆ 2016ರಲ್ಲಿ ಪಶ್ಚಿಮ ಬಂಗಾಲ ಸರಕಾರ ನಡೆಸಿದ್ದ ಶಿಕ್ಷಕರ ನೇಮಕಾತಿ ರದ್ದುಪಡಿಸಿ ಸೋಮವಾರ ಕಲ್ಕತ್ತಾ ಹೈಕೋರ್ಟ್‌ ತೀರ್ಪು ನೀಡಿದೆ. ಇದರಿಂದ ಮಮತಾ ಬ್ಯಾನರ್ಜಿ ಸರಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಹೀಗಾಗಿ ಬಂಗಾಲದ 25,753 ಶಿಕ್ಷ ಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಜತೆಗೆ ಶೇ.12ರಷ್ಟು ಬಡ್ಡಿಯೊಂದಿಗೆ ಸಂಬಳ ಹಿಂತಿರುಗಿಸುವಂತೆ ಆದೇಶಿಸಲಾಗಿದೆ.

Advertisement

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದಿಬಾಂಗುÏ ಬಸಕ್‌ ಮತ್ತು ಮೊಹಮ್ಮದ್‌ ಶಬ್ಬರ್‌ ರಶೀದಿ ಅವರಿದ್ದ ನ್ಯಾಯಪೀಠ, ಖಾಲಿ ಒಎಂಆರ್‌ ಶೀಟ್‌ ಸಲ್ಲಿಸಿ ಕಾನೂನು ಬಾಹಿರವಾಗಿ ನೇಮಕಗೊಂಡ ಶಾಲಾ ಶಿಕ್ಷಕರು ನಾಲ್ಕು ವಾರಗಳಲ್ಲಿ ತಮ್ಮ ವೇತನ ಹಿಂದಿರುಗಿಸಬೇಕು ಎಂದು ನಿರ್ದೇಶಿಸಿದೆ. ಜತೆಗೆ ಈ ಶಿಕ್ಷಕರಿಂದ ಸಂಬಳ ವಸೂಲಿ ಮಾಡುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗೆ ವಹಿಸಲಾಗಿದೆ.

ಒಬ್ಬರಿಗೆ ವಿನಾಯಿತಿ: ಏತನ್ಮಧ್ಯೆ ನೇಮ ಕಾತಿಯಲ್ಲಿ ಆಯ್ಕೆಯಾಗಿದ್ದ ಸೋಮ ದಾಸ್‌ ಎಂಬವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆ ಯಲ್ಲಿ ಮಾನವೀಯತೆ ದೃಷ್ಟಿಯಿಂದ ಅವರನ್ನು ಕೆಲಸದಲ್ಲಿ ಮುಂದುವರಿ ಸುವಂತೆ ಹೈಕೋರ್ಟ್‌ ಆದೇಶಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪಶ್ಚಿಮ ಬಂಗಾಲ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ, ಅನೇಕ ಟಿಎಂಸಿ ನಾಯಕರು ಮತ್ತು ಮಾಜಿ ಅಧಿಕಾರಿಗಳು ಜೈಲಿನಲ್ಲಿದ್ದಾರೆ. ಇನ್ನೊಂದೆಡೆ, ಹೈಕೋ ರ್ಟ್‌ ತೀರ್ಪಿನ ವಿರುದ್ಧ ಪಶ್ಚಿಮ ಬಂಗಾಲ ಸರಕಾರವು ಸುಪ್ರೀಂಕೋರ್ಟ್‌ ಮೊರೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೈಕೋರ್ಟ್‌ ಹೇಳಿದ್ದೇನು?
ಅವ್ಯವಹಾರ ಹಿನ್ನೆಲೆಯಲ್ಲಿ 2016ರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸುತ್ತಿದ್ದೇವೆ
ಈ ಅವಧೀಲಿ ನೇಮಕವಾದ ಶಿಕ್ಷಕರು ಹುದ್ದೆ ಬಿಡಬೇಕು
ಶೇ.12ರಷ್ಟು ಬಡ್ಡಿಯೊಂದಿಗೆ ಎಲ್ಲರೂ ಈವರೆಗಿನ ವೇತನ ವನ್ನು ಹಿಂದಿರುಗಿಸಬೇಕು
ನೇಮಕಾತಿ ಬಗ್ಗೆ ಸಿಬಿಐ ತನಿಖೆ ನಡೆಸಿ, 3 ತಿಂಗಳೊಳಗೆ ವರದಿ ಸಲ್ಲಿಸಬೇಕು
ಶೀಘ್ರದಲ್ಲೇ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು

Advertisement

Udayavani is now on Telegram. Click here to join our channel and stay updated with the latest news.

Next