Advertisement

ಪಶ್ಚಿಮ ಬಂಗಾಳ : ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸಿ : ಮತದಾರರಿಗೆ ಪ್ರಧಾನಿ ಮನವಿ

11:52 AM Apr 10, 2021 | Team Udayavani |

ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ನಾಲ್ಕನೇ ಹಂತದ ಚುನಾವಣೆ ಇಂದು(ಏ.10, ಶನಿವಾರ) ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಒಟ್ಟು ಇಂದು ರಾಜ್ಯದ 44 ವಿಧಾನ ಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

Advertisement

ಈ ಕುರಿತು ತಮ್ಮ ವೈಯಕ್ತಿಕ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾವಣೆ ಮಾಡಿ ಎಂದು ಜನರನ್ನು ಕೋರಿದ್ದಾರೆ. ವಿಶೇಷವಾಗಿ ಯುವಕರು ಹಾಗೂ ಮಹಿಳೆಯರು ದಾಖಲೆಯ ಪ್ರಮಾಣದಲ್ಲಿ ಮತದಾನವನ್ನು ಮಾಡುವಂತೆ ವಿನಂತಿಸುತ್ತೇನೆ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಬಿಗಿ ಭದ್ರತೆಯೊಂದಿಗೆ ಪಶ್ಚಿಮ ಬಂಗಾಳದಲ್ಲಿ ಇಂದು 44 ವಿಧಾನ ಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಐದು ಜಿಲ್ಲೆಗಳಾದ  ಕೂಚ್ ಬೆಹರ್, ಅಲಿಪುರ್ದುರ್, ದಕ್ಷಿಣ 24 ಪರಗಣಗಳು, ಹೌರಾ ಮತ್ತು ಹೂಗ್ಲಿಗಳ 44 ಕ್ಷೇತ್ರಗಳಲ್ಲಿ 373 ಅಭ್ಯರ್ಥಿಗಳ ನಡುವೆ ನಡೆಯುವ ಜಿದ್ದಾ ಜಿದ್ದಿ ಪೈಪೋಟಿಗೆ ಕಾರಣವಾಗಲಿದೆ.

ಓದಿ : ಪಶ್ಚಿಮಬಂಗಾಳದ 44 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ, ಬಿಗಿ ಪೊಲೀಸ್ ಬಂದೋಬಸ್ತ್

Advertisement

44 ಕ್ಷೇತ್ರಗಳಲ್ಲಿ ಒಂಬತ್ತು ಕ್ಷೇತ್ರಗಳು ಹೌರಾದಲ್ಲಿ, ಹತ್ತು ಹೂಗ್ಲಿಯಲ್ಲಿ, ಹನ್ನೊಂದು ದಕ್ಷಿಣ 24 ಪರಗಣಗಳಲ್ಲಿ, ಐದು ಅಲಿಪುರ್ದುರ್ ಮತ್ತು ಒಂಬತ್ತು ಕೂಚ್ ಬೆಹಾರ್‌ ಜಿಲ್ಲೆಯಲ್ಲಿವೆ.

ಈ ಹಂತದಲ್ಲಿ ಒಟ್ಟು 1,15,81,022 ಮತದಾರರು ಭಾಗವಹಿಸಲಿದ್ದು, ಈ ಪೈಕಿ 2,63,016 ಮಂದಿ ಮೊದಲ ಬಾರಿಗೆ ಮತಚಲಾಯಿಸುತ್ತಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಇನ್ನು, ರಾಜ್ಯದ 1,76,001 ಮತದಾರರನ್ನು ಹೊಂದಿರುವ ಬ್ಯಾಲಿ ಅತ್ಯಂತ ಚಿಕ್ಕ ಕ್ಷೇತ್ರವಾದರೆ, ಚುಂಚುರಾ 3,13,701 ಮತದಾರರನ್ನು ಹೊಂದಿರುವ ದೊಡ್ಡ ಕ್ಷೇತ್ರವಾಗಿದೆ. ವಿಧಾನಸಭಾ ಚುನಾವಣೆಯ ಐದನೇ ಹಂತ ಏಪ್ರಿಲ್ 17 ರಿಂದ ಪ್ರಾರಂಭವಾಗಲಿದೆ. ಮತ ಎಣಿಕೆಯು ಮೇ 2 ರಂದು ನಡೆಯಲಿದೆ.

ಓದಿ : ಮಳೆ ಪ್ರಮಾಣದಲ್ಲಿ ವರ; ಉಳಿಸಿಕೊಳ್ಳುವಲ್ಲಿ ಶಾಪ

Advertisement

Udayavani is now on Telegram. Click here to join our channel and stay updated with the latest news.

Next