ಕೊಲ್ಕತ್ತಾ : ಪಂಚರಾಜ್ಯಗಳ ಚುನಾವಣೆಯಲ್ಲೇ ಬಾರಿ ಸದ್ದು ಮಾಡಿದ ಹೈ ವೋಲ್ಟೆಜ್ ವಿಧಾನ ಸಭಾ ಕ್ಷೇತ್ರ ನಂದಿಗ್ರಾಮದ ನಂದನಾಯಕ್ ಬಾರ್ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಮತವನ್ನು ಚಲಾಯಿಸಿದ ಪಶ್ಚಿಮ ಬಂಗಾಳದ ಬಿಜೆಪಿಯ ಪ್ರಭಾವಿ ಅಭ್ಯರ್ಥಿ ಸುವೇಂದು ಅಧಿಕಾರಿ ತಮ್ಮ ಗೆಲುವಿನ ಬಗ್ಗೆ ಭರವಸೆಯನ್ನು ವ್ಯಕ್ತ ಪಡಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಧಿಕಾರಿ, ನಂದಿಗ್ರಾಮದಲ್ಲಿ ನಿಸ್ಸಂಶಯವಾಗಿ, ಹೀನಾಯವಾಗಿ ಮಮತಾ ಬ್ಯಾನರ್ಜಿ ಸೋಲನ್ನು ಅನುಭವಿಸುತ್ತಾರೆ ಎಂದು ಹೇಳಿದ್ದಾರೆ.
ಓದಿ : ಸಿಎಂ ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿ: ಸಿದ್ದರಾಮಯ್ಯ ಆಗ್ರಹ
ನಾನು ನಂದಿಗ್ರಾಮದ ಜನರೊಂದಿಗೆ ಹಲವು ವರ್ಷಗಳಿಂದ ನಿಕಟ ಸಂಬಂಧವನ್ನು ಹೊಂದಿದ್ದೇನೆ. ಜನರು ನನಗಾಗಿ ತಮ್ಮ ಮತವನ್ನು ಚಲಾಯಿಸುತ್ತಾರೆ. ನನ್ನನ್ನು ಜನರು ಗೆಲ್ಲಿಸುತ್ತಾರೆ ಎಂದಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಯಾರು ಸೂಕ್ತವೆಂದು ಜನರಿಗೆ ಅರಿವಿದೆ. ಓಲೈಕೆ ರಾಜಕಾರಣ ಇಲ್ಲಿ ನಡೆಯುವುದಿಲ್ಲ. ಮತದಾನ ನಡೆಯುತ್ತಿದೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜನರು ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದಾರೆ ಮತ್ತು ಓಲೈಕೆ ರಾಜಕಾರಣದ ವಿರುದ್ಧ ತಮ್ಮ ಮತ ಚಲಾಯಿಸುತ್ತಾರೆ ಎಂದಿದ್ದಾರೆ.
ಮಮತಾ ಬ್ಯಾನರ್ಜಿ ಅವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಅಧಿಕಾರಿ, ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪರವಾಗಿ ಇಲ್ಲ, ಯುವಕರು ನಿರುದ್ಯೋಗ ಸಮಸ್ಯೆಯಿಂದ ಅವರಿಗೆ ಹಿಡಿಶಾಪ ಹಾಕುತ್ತಿದ್ದಾರೆ, ಕೃಷಿಕರು ಅತೃಪ್ತರಾಗಿದ್ದಾರೆ. ಅಂಫಾನ್ ಚಂಡಮಾರುತದ ನಿರ್ವಹಣಾ ನಿಧಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಹಾಗಾಗಿ ಬಂಗಾಳದಲ್ಲಿ ಯಾವೊಬ್ಬರು ಆಕೆಯ ಆಡಳಿತದಲ್ಲಿ ಸಂತೋಷದಿಂದಿಲ್ಲ ಎಂದು ಅವರು ಕಿಡಿ ಕಾರಿದ್ದಾರೆ.
ಇನ್ನು, ಬಾರಿ ಮತಗಳ ಅಂತರದಲ್ಲಿ ಗಲ್ಲುವ ಭರವಸೆಯನ್ನು ವ್ಯಕ್ತ ಪಡಿಸಿದ ಸುವೇಂದು, ಇದು ನನ್ನದೊಬ್ಬನ ಗೆಲುವಾಗಿರುವುದಿಲ್ಲ, ಬಿಜೆಪಿಯ ಗೆಲುವಾಗಲಿಕ್ಕಿದೆ. ಮಮತಾ ಬ್ಯಾನರ್ಜಿ ಹಿನಾಯ ಸೋಲು ಕಾಣುವುದು ಖಚಿತ, ಮತದಾರರು ಹೆಚಚಿ ಸಂಖ್ಯೆಯಲ್ಲಿ ಬಂದು ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಜನರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.
ಓದಿ : ಸಂಶೋಧನೆಯಲ್ಲಿ ಪರಿಶ್ರಮ ಮುಖ್ಯ: ಡಾ| ವಿಶ್ವನಾಥ್ ಕಾರ್ನಾಡ್