Advertisement
ಅಷ್ಟೇ ಏಕೆ, ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್, “ಕಡ್ಡಾಯವಾಗಿ ಪರಿಸರ ಸ್ನೇಹಿ ಗಣೇಶನನ್ನೇ ಪ್ರತಿಷ್ಠಾಪನೆ ಮಾಡಬೇಕು’ ಎಂದು ತನ್ನ ಎಲ್ಲ ಸದಸ್ಯರಿಗೂ ಮೌಖೀಕವಾಗಿ ಫರ್ಮಾನು ಹೊರಡಿಸಿದೆ. ಈ ಒಕ್ಕೂಟದಡಿ 80 ಸಾವಿರ ಫ್ಲ್ಯಾಟ್‌ಗಳಿರುವ 450 ಅಪಾರ್ಟ್‌ಮೆಂಟ್‌ಗಳು ಬರುತ್ತವೆ.
Related Articles
Advertisement
ಲಾಬಿ; ಕೊನೆ ಗಳಿಗೆಯಲ್ಲಿ ಅವಕಾಶ: ಸಾರ್ವಜನಿಕರ ಪ್ರಯತ್ನಕ್ಕೆ ಪೂರಕವಾಗಿ ಸ್ಥಳೀಯ ಸಂಸ್ಥೆಗಳೂ ಕೈಜೋಡಿಸುವ ಅಗತ್ಯವಿದೆ. ಹಬ್ಬದ ಕೊನೆಯ ಗಳಿಗೆಯಲ್ಲಿ ಲಾಬಿಗೆ ಮಣಿದು ಪಿಒಪಿ ಗಣೇಶನ ಮಾರಾಟಕ್ಕೆ ಅಧಿಕಾರಿಗಳು ಅನುಮತಿ ಕೊಡುತ್ತಾರೆ. ಹಿಂದಿನ ಎರಡು-ಮೂರು ವರ್ಷಗಳಲ್ಲಿ ಆಗಿರುವುದು ಇದೇ. ಈ ಮಧ್ಯೆ “ಪರಿಸರ ಸ್ನೇಹಿ ಜಾಗೃತಿ’ ಕೂಡ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಪರಿಸರವಾದಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ವ್ಯಾಪ್ತಿಯಲ್ಲಿ 450 ಅಪಾರ್ಟ್‌ಮೆಂಟ್‌ಗಳು, 80 ಸಾವಿರ ಫ್ಲಾಟ್‌ಗಳು ಬರಲಿವೆ. ಈಗಾಗಲೇ ಫೆಡರೇಷನ್‌ನಿಂದ ನಿವಾಸಿಗಳಿಗೆ ಸಭೆಗಳಲ್ಲಿ, ಫೇಸ್‌ಬುಕ್, ವ್ಯಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಹಬ್ಬ ಸಮೀಪಿಸುತ್ತಿದ್ದಂತೆ ನಿವಾಸಿಗಳ ಅಧಿಕೃತ ಇ-ಮೇಲ್ ಹಾಗೂ ಮೊಬೈಲ್ ನಂಬರ್‌ಗೆ “ಪಿಒಪಿ ಮೂರ್ತಿ ಬೇಡ; ಮಣ್ಣಿನ ಮೂರ್ತಿ ಬಳಸಿ ಪರಿಸರ ಸ್ನೇಹಿಯಾಗೋಣ’ ಎಂಬ ಸಂದೇಶ ಕಳಿಸಲಾಗುತ್ತದೆ.
ಇನ್ನು ಬಹುತೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಲೋಹದಿಂದ ತಯಾರಿಸಿ ಕಾಯಂ ಪ್ರತಿಷ್ಠಾಪನೆ ಮಾಡಿರುವ ಮೂರ್ತಿಗಳಿದ್ದು, ಅಲ್ಲಿಯೇ ಬಂದು ಪೂಜಿಸಿ, ಸಾಂಸ್ಕೃತಿಕ ಚಟುವಟಿಗಳಲ್ಲಿ ಸಾಕಷ್ಟು ಮಂದಿ ಭಾಗವಹಿಸಲಿದ್ದಾರೆ ಎಂದು ಫೆಡರೇಷನ್ ಕಾರ್ಯದರ್ಶಿ ಶ್ರೀಕಾಂತ್ ತಿಳಿಸಿದರು. ಇದೇ ಮಾದರಿಯನ್ನು ಬಹುತೇಕ ಅಪಾರ್ಟ್‌ಮೆಂಟ್‌ಗಳು ಅನುಸರಿಸುತ್ತಿವೆ.
ಗಣೇಶ ಹಬ್ಬದ ನಿಮಿತ್ತ ಈ ವಾರಾಂತ್ಯ ಸಭೆ ನಡೆಯಲಿದ್ದು, ಈ ಸಭೆಗಳಲ್ಲಿ ಪರಿಸರ ಸ್ನೇಹಿ ಗಣಪ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ನಿಯಮಗಳಲ್ಲಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಅಂಶ ಸೇರಿಸಿ ಜಾರಿಗೆ ತರಲಾಗುತ್ತಿದೆ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘದ ಸದಸ್ಯರೊಬ್ಬರು ತಿಳಿಸಿದರು.
8 ಸಾವಿರಕ್ಕೂ ಅಧಿಕ ಅಪಾರ್ಟ್‌ಮೆಂಟ್: ರಾಜಧಾನಿಯಲ್ಲಿ ಎಂಟು ಸಾವಿರಕ್ಕೂ ಅಧಿಕ ಅಪಾರ್ಟ್‌ಮೆಂಟ್‌ಗಳಿವೆ. ಅದರಲ್ಲಿ ಮೂರು ಲಕ್ಷಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿವೆ. ಒಂದು ವೇಳೆ ಅವರೆಲ್ಲರೂ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶನಿಗೆ ಮೊರೆಹೋದರೆ, ಸುತ್ತಲಿನ ಹತ್ತಾರು ಕೆರೆಗಳು ಕಲುಷಿತಗೊಳ್ಳುತ್ತವೆ. ಜತೆಗೆ ಅಂತರ್ಜಲ ಕೂಡ ವಿಷವಾಗುತ್ತದೆ.
ಒಳಗೆರೆಹಳ್ಳಿಯಲ್ಲಿ ಮಣ್ಣಿನ ಮೂರ್ತಿಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಒಂದು ವೇಳೆ ಬಡವಾಣೆಗಳ ವ್ಯಾಪ್ತಿಯಲ್ಲಿ ಯಾರಾದರೂ ಪಿಒಪಿ ಗಣೇಶ ಪ್ರತಿಷ್ಠಾಪಿಸಿದರೆ, ಬಿಬಿಎಂಪಿಗೆ ದೂರು ನೀಡಲಾಗುತ್ತದೆ. ಇದೇ ಮಾದರಿಯನ್ನು ನಗರದ ಎಲ್ಲಾ ಒಕ್ಕೂಟಗಳು, ಸಂಘಗಳು ಅಳವಡಿಸಿಕೊಳ್ಳಬೇಕು.-ಎನ್.ಕದರಪ್ಪ, ಒಳಗೆರೆ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಸ್ವತಃ ನಿರ್ಣಯ ಕೈಗೊಳ್ಳುವ ಮೂಲಕ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಮುಂದಾಗಿರುವುದು ಸಂತಸದ ವಿಚಾರ. ಈ ಮಾದರಿಯನ್ನು ನಗರದ ಚಿಕ್ಕ ಸಂಘ ಸಂಸ್ಥೆಗಳೂ ಅನುಸರಿಸಿದರೆ ಬೆಂಗಳೂರು ಕೆರೆಗಳು ಇನ್ನಷ್ಟು ಅವನತಿಗೆ ಸರಿಯುವುದನ್ನು ತಪ್ಪಿಸಬಹುದು.
-ಯಲ್ಲಪ್ಪ ರೆಡ್ಡಿ, ಪರಿಸರ ತಜ್ಞ ಬಹುತೇಕ ಅಪಾರ್ಟ್‌ಮೆಂಟ್ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ನಾಗರಿಕ ವೇದಿಕೆಗಳು ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಮುಂದಾಗಿವೆ. ಅವುಗಳಿಗೆ ಬಿಬಿಎಂಪಿ ಅಗತ್ಯ ಸೌಲಭ್ಯ ನೀಡಬೇಕು. ಈ ಕುರಿತು ಚರ್ಚೆ ನಡೆಸಿ ತಾತ್ಕಾಲಿಕ ಕೊಳನ್ನು ಹೆಚ್ಚಿಸಿ ಅಗತ್ಯ ಸಿಬ್ಬಂದಿ ನಿಯೋಜಿಸಬೇಕು.
-ಜಗದೀಶ್, ವರ್ತೂರು ರೈಸಿಂಗ್ ನಾಗರಿಕ ಒಕ್ಕೂಟ * ಜಯಪ್ರಕಾಶ್ ಬಿರಾದಾರ್