Advertisement

ಗ್ರೀನ್ ಲ್ಯಾಂಡ್ ಖರೀದಿಗೆ ಟ್ರಂಪ್ ಹುನ್ನಾರ! ದ್ವೀಪಪ್ರದೇಶ ಮಾರಾಟಕ್ಕಿಲ್ಲ ಎಂದು ತಿರುಗೇಟು

09:37 AM Aug 18, 2019 | Nagendra Trasi |

ವಾಷಿಂಗ್ಟನ್:ಜಗತ್ತಿನ ಅತೀ ದೊಡ್ಡ ದ್ವೀಪ ಪ್ರದೇಶವಾದ ಗ್ರೀನ್ ಲ್ಯಾಂಡ್ ಅನ್ನು ಖರೀದಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ತಮ್ಮ ಸಲಹೆಗಾರರ ಜತೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂಬ ವರದಿಯ ಬೆನ್ನಲ್ಲೇ ಇದೀಗ, ಗ್ರೀನ್ ಲ್ಯಾಂಡ್ ದ್ವೀಪ ಮಾರಾಟಕ್ಕಿಲ್ಲ ಎಂಬುದಾಗಿ ಶುಕ್ರವಾರ ತಿರುಗೇಟು ನೀಡಿದೆ ಎಂದು ವರದಿ ತಿಳಿಸಿದೆ.

Advertisement

ವ್ಯಾಪಾರ, ವಹಿವಾಟು ನಡೆಸಲು ನಮ್ಮಲ್ಲಿ ಅವಕಾಶ ಇದೆ, ಆದರೆ ನಾವು ಮಾರಾಟಕ್ಕಿಲ್ಲ ಎಂದು ಗ್ರೀನ್ ಲ್ಯಾಂಡ್ ವಿದೇಶಾಂಗ ಸಚಿವ ಆ್ಯನೆ ಲೋನೆ ಬಾಗ್ಗೇರ್ ರಾಯಟರ್ಸ್ ಗೆ ತಿಳಿಸಿದ್ದಾರೆ.

ಸೆಪ್ಟೆಂಬರ್ ನಲ್ಲಿ ಡೆನ್ಮಾರ್ಕ್ ರಾಜಧಾನಿ ಕೋಪನ್ ಹೇಗನ್ ಗೆ ಭೇಟಿ ನೀಡಲಿರುವ ಡೊನಾಲ್ಡ್ ಟ್ರಂಪ್ ಗ್ರೀನ್ ಲ್ಯಾಂಡ್ ಖರೀದಿ ಬಗ್ಗೆ ಅಲ್ಲಿನ ಪ್ರಧಾನಿ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next