Advertisement
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾವಣೆಗೂ ಮೊದಲು ಮಹದೇವಪ್ಪ ನಿಂಗೂ ಫ್ರೀ, ಕಾಕಾ ಪಾಟೀಲ್ ನಿಂಗೂ ಫ್ರೀ ಎಂದು ಘೋಷಿಸಿದ್ದರು. ಆದರೆ ಈಗ ಮಹದೇವಪ್ಪ ನಿಂಗೂ ಕತ್ತಲು ಕಾಕಾ ಪಾಟೀಲ್ ನಿಂಗೂ ಕತ್ತಲು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಗೃಹಜ್ಯೋತಿ ಹೆಸರಿನಲ್ಲಿ ಹೊರ ರಾಜ್ಯದಿಂದ ವಿದ್ಯುತ್ ಖರೀದಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂಧನ ಇಲಾಖೆ ಅಧೋಗತಿಗೆ ತಲುಪಿದೆ. ಗೃಹ ಜ್ಯೋತಿ ಹೆಸರಲ್ಲಿ ಕತ್ತಲ ಭಾಗ್ಯ ನೀಡುತ್ತಿದೆ ಎಂದು ವ್ಯಂಗ್ಯವಾಡಿದರು.
Related Articles
Advertisement
ಬಿಜೆಪಿ ಸರ್ಕಾರ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ 10 ಸಾವಿರ ಕೊಡುತ್ತಿತ್ತು. ತೆಲಂಗಾಣದಲ್ಲಿ ರೈತರಿಗೆ 15 ಸಾವಿರ ಕೊಡುತ್ತೇವೆಂದು ಡ್ಯುಪ್ಲಿಕೇಟ್ ಸಿಎಂ ಹೇಳುತ್ತಾರೆ. ಆದರೆ ರಾಜ್ಯದ ರೈತರ ಹಿತ ಕಾಪಾಡುವ ಕೆಲಸ ಮರೆತು ಹೋಯ್ತಾ.? ರೈತರಿಗೆ ಈ ಹಿಂದೆ ಕೊಡುತ್ತಿದ್ದ ನಾಲ್ಕು ಸಾವಿರ ಯಾಕೆ ಕಡಿತ ಮಾಡಿದಿರಿ ಎಂದು ಪ್ರಶ್ನಿಸಿದರು.
ಗೃಹ ಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ತಲುಪುತ್ತಿಲ್ಲ ಹಣ. ಕೇವಲ ನಾಮಾಕಾವಸ್ತೆ ಎನ್ನುವಂತೆ ಯೋಜನೆ ಜಾರಿ ಮಾಡಲಾಗಿದೆ. ಸಿಎಂ ತವರು ಕ್ಷೇತ್ರದಲ್ಲಿ ಒಂದೂ ಮುಕ್ಕಾಲು ಫಲಾನುಭವಿಗಳಿಗೆ ಮೊದಲ ಕಂತು ಹಣ ತಲುಪಿಲ್ಲ. ತೆಲಂಗಾಣದಲ್ಲಿ ಅತ್ತೆಗೆ ನಾಲ್ಕು ಸಾವಿರ ಸೊಸೆಗೆ ಎರಡು ಸಾವಿರ ಕೊಡುತ್ತೇವೆ ಎನ್ನುತ್ತಾರೆ, ಅಲ್ಲಿ ಕೊಡುತ್ತೇವೆ ಎಂದಾದರೆ ಇಲ್ಲಿ ಯಾಕೆ ಅಷ್ಟು ಹಣ ಘೋಷಣೆ ಮಾಡಿಲ್ಲ ಎಂದು ಎಚ್ ಡಿಕೆ ಪ್ರಶ್ನೆ ಮಾಡಿದರು.
ಶಕ್ತಿ ಯೋಜನೆಯಡಿ ಉಚಿತ ಬಸ್ ನಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಉಚಿತ ಬಸ್ ಪ್ರಯಾಣದಿಂದ ಆಟೋ ಚಾಲಕರ ಜೀವನ ದುಸ್ತರವಾಗಿದೆ. ಜೆಸಿಬಿಗಳ ಮೂಲಕ ಮಕ್ಕಳು ಶಾಲೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇಂದಿರಾ ಕ್ಯಾಂಟೀನ್, ಗುತ್ತಿಗೆದಾರರಿಂದ ಕಮೀಷನ್ ಪಡೆಯಲಾಗುತ್ತಿದೆ ಎಂದು ಆರೋಪ ಮಾಡಿದರು.
ಸಮಾಜ ಕಲ್ಯಾಣ ಇಲಾಖೆಯ 11 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗೆ ಬಳಕೆ ಮಾಡುತ್ತಿರುವುದು ಸರಿಯಾ? ಗ್ಯಾರಂಟಿ ಸ್ಕೀಂ ಎಂದು ಉದ್ದುದ್ದ ಭಾಷಣ ಮಾಡುತ್ತಿದ್ದಾರೆ ಆದರೆ ಗ್ಯಾರಂಟಿ ಜಾರಿಗಾಗಿ ಸಾಲ ಮಾಡಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.