Advertisement
ಅವರು ಶನಿವಾರ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ವಿಭಾಗ, ಮಕ್ಕಳ ಆರೋಗ್ಯಕೇಂದ್ರ, ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ, ಜಿಲ್ಲಾ ಸಂಯುಕ್ತ ಆಯುಷ್ ಆಸ್ಪತ್ರೆ ಕಟ್ಟಡಗಳ ಶಂಕು
ಸ್ಥಾಪನೆ ಹಾಗೂ ಎಚ್‌ಎಲ್‌ಎಲ್ ಎಂಆರ್‌ಐ ವಿಭಾಗದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಲೇಡಿಗೋಶನ್ ಆಸ್ಪತ್ರೆಯ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಕೇಂದ್ರ ಪೆಟ್ರೋಲಿಯಂ ಹಾಗೂ ರಾಜ್ಯ ಆರೋಗ್ಯ ಸಚಿವರ ಉಪಸ್ಥಿತಿಯಲ್ಲಿ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ ಎಂದು ರೈ ಹೇಳಿದರು.
Related Articles
Advertisement
ಬೆಂಗಳೂರು ನಗರ ಹೊರತುಪಡಿಸಿ 20 ಹಾಸಿಗೆಗಳ ಐಸಿಯು ಹೊಂದಿರುವ ಸರಕಾರಿ ಆಸ್ಪತ್ರೆ ವೆನಾÉಕ್ ಆಗಿದ್ದು,ಮುಂದಿನ 2 ವರ್ಷಗಳಲ್ಲಿ ಆಸ್ಪತ್ರೆಯು ಇನ್ನಷ್ಟು ಹೊಸ ಸೌಲಭ್ಯಗಳೊಂದಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಲಿದೆ ಎಂದು ಖಾದರ್ ವಿವರಿಸಿದರು.
ಶಾಸಕ ಜೆ.ಆರ್. ಲೋಬೋ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಭಾಸ್ಕರ ಕೆ.,ಉಪ ಮೇಯರ್ ಮುಹಮ್ಮದ್ ಕೆ.,ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು,ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಫಾದರ್ ಮುಲ್ಲರ್ ಹೋಮಿಯೋಪತಿ ವಿಭಾಗದ ಡಾ| ಶಿವಪ್ರಸಾದ್, ಆಳ್ವಾಸ್ ನ್ಯಾಚುರೋ ಪತಿ ಕಾಲೇಜಿನ ಪ್ರಿನ್ಸಿಪಾಲ್ ಡಾ| ವನಿತಾ ಶೆಟ್ಟಿ, ಡಾ| ಸಂತೋಷ್, ಎ.ಸಿ. ವಿನಯ್‌ರಾಜ್, ಅಬ್ದುಲ್ ಜಬ್ಟಾರ್, ಡಾ| ಆಶಾ ಜ್ಯೋತಿ ರೈ, ಕೆಎಂಸಿ ಡೀನ್ ಡಾ| ವೆಂಕಟರಾಯ ಪ್ರಭು, ಲೇಡಿಗೋಶನ್ ಆಸ್ಪತ್ರೆ ಅಧೀಕ್ಷಕಿ ಡಾ| ಸವಿತಾ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರಾಮಕೃಷ್ಣ ರಾವ್ ಸ್ವಾಗತಿಸಿದರು. ಒಂದೇ ಸೂರಿನಡಿ ಅಲೋಪತಿ- ಆಯುಷ್
ವೆನ್ಲಾಕ್ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ಆಯುಷ್ ಆಸ್ಪತ್ರೆ ನಿರ್ಮಾಣವಾಗುವ ಮೂಲಕ ಒಂದೇ ಸೂರಿನಡಿ ಅಲೋಪತಿ ಹಾಗೂ ಆಯುಷ್‌ಗೆ ಸಂಬಂಧಿಸಿದ ಚಿಕಿತ್ಸೆಗಳು ಸಾರ್ವಜನಿಕರಿಗೆ ಲಭ್ಯವಾಗಲಿವೆ ಎಂದು ಮುಖ್ಯ ಅತಿಥಿ ಆಹಾರ ಸಚಿವ ಯು.ಟಿ. ಖಾದರ್ ಹೇಳಿದರು. 95 ಮಂದಿಗೆ ಉಚಿತ ಸ್ಕ್ಯಾನಿಂಗ್
ಹಿಂದೂಸ್ಥಾನ್ ಹೆಲ್ತ್‌ಕೇರ್ ಲಿ. ವತಿಯಿಂದ ವೆನಾÉಕ್ ಆಸ್ಪತ್ರೆಯಲ್ಲಿ 2017ರ ಎ. 1ರಂದು ಎಂಆರ್‌ಐ ಸ್ಕ್ಯಾನಿಂಗ್ ವಿಭಾಗ ಆರಂಭಗೊಂಡಿದ್ದು, ಈವರೆಗೆ 2,265 ಎಂಆರ್‌ಐ ಸ್ಕ್ಯಾನಿಂಗ್‌ಗಳನ್ನು ಮಾಡಲಾಗಿದೆ. ಅದರಲ್ಲಿ 95 ಮಂದಿಗೆ ಸಂಪೂರ್ಣವಾಗಿ ಉಚಿತವಾಗಿ ಮಾಡಲಾಗಿದೆ ಎಂದರು. ಸೂಪರ್ ಸ್ಪೆಷಾಲಿಟಿ- ಹೊಸ ಸೌಲಭ್ಯ
ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ ಮಾತನಾಡಿ, ವೆನ್ಲಾಕ್ ಆಸ್ಪತ್ರೆ ಮೇಲ್ದರ್ಜೆಗೇರಿಸಲು 2017-18ನೇ ಸಾಲಿನಲ್ಲಿ ಸರಕಾರದಿಂದ ಮಂಜೂರಾದ 10 ಕೋಟಿ ರೂ. ಅನುದಾನದಲ್ಲಿ ಹೆಚ್ಚುವರಿಯಾಗಿ 124 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಮೆಡಿಕಲ್ ವಿಭಾಗದ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ. 176 ಹಾಸಿಗೆಗಳ ನೂತನ ಮೆಡಿಸಿನ್ ಬ್ಲಾಕ್ ಕಟ್ಟಡಕ್ಕೆ ಹೊಂದಿಕೊಂಡಂತೆ ಈ ಕಟ್ಟಡ ನಿರ್ಮಾಣಗೊಳ್ಳಲಿದ್ದು, ಇದರಲ್ಲಿ ಕಾರ್ಡಿಯಾಕ್, ಎಂಐಸಿಯು, ಎಂಡೋಸ್ಕೋಪಿ, ಕ್ಯಾಥ್‌ಲ್ಯಾಬ್ ವಿಭಾಗ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.