Advertisement
ಬಾವಿ ನೀರೇ ಬೇಕುಪದವಿ, ಪ.ಪೂ. ಕಾಲೇಜುಗಳು, ಪ್ರೌಢಶಾಲೆ, ಹಾಸ್ಟೆಲ್, ಕ್ಯಾಂಟೀನ್ ಹೀಗೆ ಕ್ಯಾಂಪಸ್‌ನ ಒಳಗೆ ಎಲ್ಲೆಡೆಯೂ ಬಾವಿ ನೀರನ್ನು ಬಳಕೆ ಮಾಡುವುದು ಇಲ್ಲಿನ ವಿಶೇಷ. ಕಾಲೇಜು ಕ್ಯಾಂಪಸ್‌ನಲ್ಲಿ ಒಂದೇ ಒಂದು ಕೊಳವೆ ಬಾವಿ ಇಲ್ಲ. ಒಂದು ಬೃಹತ್ ಬಾವಿ ಸೇರಿದಂತೆ ಒಟ್ಟು 4 ಬಾವಿಗಳು ಇವೆ. ಆದರೆ ಕಳೆದ ಬೇಸಗೆಯಲ್ಲಿ ಬಾವಿಗಳಲ್ಲಿಯೂ ನೀರಿನ ಕೊರತೆಯುಂಟಾಯಿತು. ಬೇಸಗೆಯ ಕೊನೆಯ ಒಂದು ತಿಂಗಳು ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳಬೇಕಾಯಿತು. ಇದು ಮಳೆಕೊಯ್ಲಿನ ಕಡೆಗೆ ಯೋಚಿಸುವಂತೆ ಮಾಡಿತು. ಪ್ರಾಂಶುಪಾಲ ಡಾ| ಎಂ.ಜಿ.ವಿಜಯ್ ಅವರು ಸ್ವತಃ ಆಸಕ್ತಿ ವಹಿಸಿ ಆಡಳಿತ ಮಂಡಳಿಯ ಒಪ್ಪಿಗೆ ಪಡೆದು ಜಲಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಬಿಟ್ಟರು. ಮಣಿಪಾಲ ಎಂಐಟಿಯ ಭೂಗರ್ಭಶಾಸ್ತ್ರಜ್ಞ ಉದಯ ಶಂಕರ್ ಅವರ ಮಾರ್ಗದರ್ಶನದಲ್ಲಿ ಜಲಕೊಯ್ಲು ಘಟಕ ಅಳವಡಿಸಲಾಗಿದೆ.
Related Articles
Advertisement
ಕ್ಯಾಂಪಸ್‌ನಲ್ಲೇ ಇರುವ ಇಂದ್ರಾಳಿ ಪ್ರೌಢಶಾಲೆಯ ಹಿಂಭಾಗದಲ್ಲಿರುವ ಬಾವಿಗೆ ಕಳೆದ ವರ್ಷ ನೇರವಾಗಿ ಮಳೆ ನೀರು ಹಾಯಿಸುವ ಪ್ರಯತ್ನ ನಡೆಸಲಾಗಿತ್ತು. ಆದರೆ ಅದು ಅಷ್ಟು ಸೂಕ್ತವಲ್ಲ ಎಂಬ ಕಾರಣಕ್ಕೆ ಅದನ್ನು ಕೈಬಿಟ್ಟು ಈ ಬಾರಿ ವ್ಯವಸ್ಥಿತವಾಗಿ ಘಟಕ ಅಳವಡಿಸಲಾಗಿದೆ.
ಇಂಗುಗುಂಡಿ 20 ಅಡಿ ಆಳವಿದೆ. 4 ಅಡಿ ವ್ಯಾಸವಿದೆ. ಸರಳವಾಗಿಯೇ ಮಾಡಿದ್ದೇವೆ. ಆದರೆ ನೀರು ಇಂಗಿಸುವ ಗುಂಡಿಗೆ ಸಿಮೆಂಟ್ ರಿಂಗ್‌ಗಳನ್ನು ಹಾಕಿದ್ದೇವೆ. ಇದರಿಂದ ನೀರು ಪಕ್ಕದಲ್ಲೇ ಇಂಗಿ ಬಾವಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಪೈಪ್ ಕೂಡ ತುಂಬ ಉದ್ದಕ್ಕೆ ಬಳಸಿದ್ದೇವೆ. ಮುಂದಿನ ವರ್ಷ ಜಲಕ್ಷಾಮ ಬಾರದು ಎಂಬ ವಿಶ್ವಾಸ ಪ್ರಾಂಶುಪಾಲರದ್ದು.
ಮಕ್ಕಳಿಗೂ ಜಲಪಾಠಕಾಲೇಜು ಕ್ಯಾಂಪಸ್‌ನಲ್ಲೇ ಅಳವಡಿಸಿರುವ ಜಲಕೊಯ್ಲು ಘಟಕ ಕಾಲೇಜಿನ ವಿದ್ಯಾರ್ಥಿಗಳಿಗೂ ಜಲಪಾಠ ಹೇಳುತ್ತಿದೆ. ಪ್ರಾಂಶುಪಾಲರು ಖುದ್ದಾಗಿ ಆಸಕ್ತಿ ವಹಿಸಿ ಮಕ್ಕಳಲ್ಲಿ ಜಲಜಾಗೃತಿಯ ಪ್ರಯತ್ನ ನಡೆಸಿದ್ದಾರೆ. ಕೆಲವು ಮಕ್ಕಳು ತಮ್ಮ ಮನೆಗಳಲ್ಲಿಯೂ ಜಲಕೊಯ್ಲು ಮಾಡುವ ಉತ್ಸಾಹ ತೋರಿಸಿದ್ದಾರೆ. ಪೂರ್ಣ ಸಹಕಾರದಿಂದ ಸಾಧ್ಯ
ಕಳೆದ ವರ್ಷದ ಬೇಸಗೆಯಲ್ಲಿ ಉಂಟಾದ ಜಲಕ್ಷಾಮ ನಮ್ಮಲ್ಲಿ ಜಾಗೃತಿ ಮೂಡಿಸಿತು. ನಮ್ಮ ಬಾವಿಗಳಲ್ಲಿ ಮುಂದಿನ ಬೇಸಗೆಯಲ್ಲಿಯೂ ನೀರಿನ ಮಟ್ಟ ಉಳಿಸಿಕೊಳ್ಳಬೇಕು ಎಂಬ ಉದ್ದೇಶ ನಮ್ಮದು. ಕಾಲೇಜಿನ ಆಡಳಿತ ಮಂಡಳಿಯ ಪೂರ್ಣ ಸಹಕಾರದಿಂದ ಇದು ಸಾಧ್ಯವಾಗಿದೆ.
– ಡಾ| ಎಂ.ಜಿ.ವಿಜಯ್, ಪ್ರಾಂಶುಪಾಲರು, ಎಂಜಿಎಂ ಕಾಲೇಜು ಉಡುಪಿ ನೀವೂ ಅಳವಡಿಸಿ, ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನ ದಿಂದ ಪ್ರೇರಣೆಗೊಂಡು ಕಾರ್ಯಾ ಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸಲು ಮುಂದಾಗಿದ್ದಾರೆ. ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
– 7618774529