Advertisement

ವಿಲಿಯಮ್ಸನ್‌ ಶತಕ: ರೋಚಕ ಘಟ್ಟದಲ್ಲಿ ವೆಲ್ಲಿಂಗ್ಟನ್‌ ಟೆಸ್ಟ್‌

12:04 AM Feb 28, 2023 | Team Udayavani |

ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡ್‌-ಇಂಗ್ಲೆಂಡ್‌ ನಡುವಿನ ವೆಲ್ಲಿಂಗ್ಟನ್‌ ಟೆಸ್ಟ್‌ ಪಂದ್ಯ ರೋಚಕ ಘಟ್ಟ ತಲುಪಿದೆ. ಕಿವೀಸ್‌ ಪಡೆ ಸರಣಿಯನ್ನು ಸಮಬಲಕ್ಕೆ ತರಲು ದಿಟ್ಟ ಹೋರಾಟ ನಡೆಸುತ್ತಿದೆ. ಗೆಲುವಿಗೆ 258 ರನ್‌ ಪಡೆದಿರುವ ಸ್ಟೋಕ್ಸ್‌ ಬಳಗ 4ನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್‌ ಕಳೆದುಕೊಂಡು 48 ರನ್‌ ಮಾಡಿದೆ.

Advertisement

ಮಂಗಳವಾರ ಪಂದ್ಯದ ಅಂತಿಮ ದಿನ. ಇಂಗ್ಲೆಂಡ್‌ ಜಯಕ್ಕೆ ಇನ್ನೂ 210 ರನ್‌ ಅಗತ್ಯವಿದೆ. ಕಿವೀಸ್‌ ಬೌಲಿಂಗ್‌ ಮ್ಯಾಜಿಕ್‌ ಮಾಡಿ ಸರಣಿಯನ್ನು 1-1 ಸಮಬಲಕ್ಕೆ ತಂದೀತೇ ಅಥವಾ ಇಂಗ್ಲೆಂಡ್‌ ಎಚ್ಚರಿಕೆಯ ಬ್ಯಾಟಿಂಗ್‌ ಮೂಲಕ ಸರಣಿಯನ್ನು 2-0 ಕ್ಲೀನ್‌ಸಿÌàಪ್‌ ಆಗಿ ವಶಪಡಿಸಿಕೊಂಡೀತೇ ಎಂಬುದೊಂದು ಕುತೂಹಲ.

ವಿಲಿಯಮ್ಸನ್‌ 132
ಫಾಲೋಆನ್‌ ಪಡೆದ ನ್ಯೂಜಿಲ್ಯಾಂ ಡ್‌ಗೆ ಮಾಜಿ ನಾಯಕ ಕೇನ್‌ ವಿಲಿಯಮ್ಸನ್‌ ಅಮೋಘ ಶತಕದ ಮೂಲಕ ರಕ್ಷಣೆ ಒದಗಿಸಿದರು. ಕೇನ್‌ ಕೊಡುಗೆ 132 ರನ್‌. 282 ಎಸೆತಗಳನ್ನು ನಿಭಾಯಿಸಿದ ಅವರು 12 ಬೌಂಡರಿ ಹೊಡೆದರು.

ಡ್ಯಾರಿಲ್‌ ಮಿಚೆಲ್‌ ಮತ್ತು ಕೀಪರ್‌ ಟಾಮ್‌ ಬ್ಲಿಂಡೆಲ್‌ ಕೂಡ ಉತ್ತಮ ಹೋರಾಟ ಸಂಘಟಿಸಿದರು. ಮಿಚೆಲ್‌ ಎಸೆತಕ್ಕೊಂದರಂತೆ 54 ರನ್‌ ಮಾಡಿದರೆ (5 ಬೌಂಡರಿ, 1 ಸಿಕ್ಸರ್‌), ಬ್ಲಿಂಡೆಲ್‌ 166 ಎಸೆತಗಳನ್ನು ಎದುರಿಸಿ 90 ರನ್‌ ಹೊಡೆದರು (9 ಬೌಂಡರಿ). ಇವರ ಶತಕಕ್ಕೆ ಜಾಕ್‌ ಲೀಚ್‌ ಅಡ್ಡಗಾಲಿಕ್ಕಿದರು. ಇವರೆಲ್ಲರ ಬ್ಯಾಟಿಂಗ್‌ ಹೋರಾಟದಿಂದ ನ್ಯೂಜಿಲ್ಯಾಂಡ್‌ ಒಂದು ಹಂತದಲ್ಲಿ 5 ವಿಕೆಟಿಗೆ 455 ರನ್‌ ಪೇರಿಸಿತ್ತು. ಆದರೆ 28 ರನ್‌ ಅಂತರದಲ್ಲಿ ಕೊನೆಯ 5 ವಿಕೆಟ್‌ ಉರುಳಿತು.ಜಾಕ್‌ ಲೀಚ್‌ 5 ವಿಕೆಟ್‌ ಕೆಡವಿ ಹೆಚ್ಚಿನ ಯಶಸ್ಸು ಸಾಧಿಸಿದರು.

ಸಂಕ್ಷಿಪ್ತ ಸ್ಕೋರ್‌
ಇಂಗ್ಲೆಂಡ್‌-8 ವಿಕೆಟಿಗೆ 435 ಡಿಕ್ಲೇರ್‌ ಮತ್ತು ಒಂದು ವಿಕೆಟಿಗೆ 48. ನ್ಯೂಜಿಲ್ಯಾಂಡ್‌-209 ಮತ್ತು 483 (ವಿಲಿಯಮ್ಸನ್‌ 132, ಬ್ಲಿಂಡೆಲ್‌ 90, ಲ್ಯಾಥಂ 83, ಕಾನ್ವೇ 61, ಮಿಚೆಲ್‌ 54, ಲೀಚ್‌ 157ಕ್ಕೆ 5).

Advertisement

ವಿಲಿಯಮ್ಸನ್‌ ಗರಿಷ್ಠ ರನ್‌ ದಾಖಲೆ
ತಮ್ಮ 26ನೇ ಟೆಸ್ಟ್‌ ಶತಕದ ವೇಳೆ ಕೇನ್‌ ವಿಲಿಯಮ್ಸನ್‌ ನೂತನ ಮೈಲುಗಲ್ಲೊಂದನ್ನು ನೆಟ್ಟರು. ಅವರು ನ್ಯೂಜಿಲ್ಯಾಂಡ್‌ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸರ್ವಾಧಿಕ ರನ್‌ ಬಾರಿಸಿದ ಆಟಗಾರನೆನಿಸಿದರು. ಈ ಸಂದರ್ಭದಲ್ಲಿ ರಾಸ್‌ ಟೇಲರ್‌ ದಾಖಲೆ ಪತನಗೊಂಡಿತು.

29 ರನ್‌ ಗಳಿಸಿದ ವೇಳೆ ಬ್ಯಾಟ್‌ ಮೇಲೆತ್ತುವ ಮೂಲಕ ವಿಲಿಯಮ್ಸನ್‌ ಸಂಭ್ರಮವನ್ನಾಚರಿಸಿದರು. ಆಗ ಟೇಲರ್‌ ಅವರ 7,683 ರನ್‌ ದಾಖಲೆಯನ್ನು ಕೇನ್‌ ಮೀರಿ ನಿಂತರು. ಸ್ಟೀಫನ್‌ ಫ್ಲೆಮಿಂಗ್‌ ತೃತೀಯ ಸ್ಥಾನದಲ್ಲಿದ್ದಾರೆ (7,172 ರನ್‌). ಇದು ವಿಲಿಯಮ್ಸನ್‌ ಅವರ 92ನೇ ಟೆಸ್ಟ್‌ ಪಂದ್ಯದ 161ನೇ ಇನ್ನಿಂಗ್ಸ್‌. ಟೇಲರ್‌ಗಿಂತ ಬೇಗ ಅವರು ಈ ಸಾಧನೆಗೈದರು. ಟೇಲರ್‌ 112 ಟೆಸ್ಟ್‌, 196 ಇನ್ನಿಂಗ್ಸ್‌ ತೆಗೆದುಕೊಂಡಿದ್ದರು. ಗರಿಷ್ಠ ಟೆಸ್ಟ್‌ ರನ್‌ ಸಾಧಕರ ಯಾದಿಯಲ್ಲಿ ವಿಲಿಯಮ್ಸನ್‌ಗೆ ಈಗ 35ನೇ ಸ್ಥಾನ.

ಗರಿಷ್ಠ ರನ್‌ ಸಾಧನೆಯ ಬಳಿಕ ರಾಸ್‌ ಟೇಲರ್‌ ವಿಲಿಯಮ್ಸನ್‌ಗೆ ಅಭಿನಂದನೆ ಸಲ್ಲಿಸಿದರು. “ಕಂಗ್ರಾಟ್ಸ್‌ ಕೇನ್‌. ಈ ಸಾಧನೆ ನಿಮ್ಮ ಕಠಿನ ದುಡಿಮೆ ಮತ್ತು ಬದ್ಧತೆಗೆ ಸಂದ ಪ್ರತಿಫಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next