Advertisement
ಬೌಲರ್‌ಗಳ ಅಮೋಘ ಬ್ಯಾಟಿಂಗ್‌ನಿಂದಾಗಿ ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 348 ರನ್ ಗಳಿಸಿ ಆಲೌಟಾಯಿತು. ಈ ಮೂಲಕ ಆತಿಥೇಯ ತಂಡ 183 ರನ್ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಿತು. ಇದಕ್ಕುತ್ತರವಾಗಿ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ ಮತ್ತೆ ಬ್ಯಾಟಿಂಗ್‌ನಲ್ಲಿ ಎಡವಿದ್ದು, ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟಿಗೆ 144 ರನ್ ಗಳಿಸಿದೆ. ಮುನ್ನಡೆ ಸಾಧಿಸಲು ಭಾರತ ಇನ್ನೂ 39 ರನ್ ಗಳಿಸಬೇಕಾಗಿದೆ. ಇನ್ನೆರಡು ದಿನಗಳ ಆಟ ಬಾಕಿ ಉಳಿದಿದ್ದು, ಭಾರತ ನಾಲ್ಕನೇ ದಿನವಿಡೀ ಆಡಿ ದೊಡ್ಡ ಮೊತ್ತ ಪೇರಿಸಿದರೆ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಲು ಪ್ರಯತ್ನಿಸಬಹುದು.
ಮೊದಲ ಇನ್ನಿಂಗ್ಸ್‌ನಲ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಭಾರತೀಯ ತಂಡ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಮತ್ತೆ ಕುಸಿತಕ್ಕೆ ಒಳಗಾಗಿದೆ. ಅಗ್ರ ಕ್ರಮಾಂಕದ ಆಟಗಾರರು ಟ್ರೆಂಟ್ ಬೌಲ್ಟ್ ಅವರ ಉನ್ನತ ಗುಣಮಟ್ಟದ ಸ್ವಿಂಗ್ ದಾಳಿಯನ್ನು ನಿಭಾಯಿಸಲು ವಿಫಲ ರಾಗಿದ್ದಾರೆ. ರನ್ ಗಳಿಸದಿದ್ದರೂ ಬಹಳಷ್ಟು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಅಗ್ರ ಕ್ರಮಾಂಕದ ಆಟಗಾರರು ಯಶಸ್ವಿಯಾಗಿದ್ದಾರೆ. ಮಾಯಾಂಕ್ ಅಗರ್ವಾಲ್ ಅವರನ್ನು ಬಿಟ್ಟರೆ ಪೃಥ್ವಿ ಶಾ, ಚೇತೇಶ್ವರ ಪೂಜಾರ ಮತ್ತು ಕೊಹ್ಲಿ ರನ್ ಗಳಿಸಲು ಬಹಳಷ್ಟು ಒದ್ದಾಡಿದರು. ಪೂಜಾರ 11 ರನ್ ತೆಗೆಯಲು 81 ಎಸೆತ ಎದುರಿಸಿದ್ದರೆ, ಕೊಹ್ಲಿ 43 ಎಸೆತಗಳಿಂದ 19 ರನ್ ಹೊಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ 34 ರನ್ ಗಳಿಸಿದ್ದ ಅಗರ್ವಾಲ್ ಮತ್ತೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 58 ರನ್ ಹೊಡೆದರು.
Related Articles
ಮೂರನೇ ದಿನದ ಅಂತಿಮ ಅವಧಿಯಲ್ಲಿ ಆಡಿದ ಅಜಿಂಕ್ಯ ರಹಾನೆ ಮತ್ತು ಹನುಮ ವಿಹಾರಿ ಅವರು ಮುರಿಯದ ಐದನೇ ವಿಕೆಟಿಗೆ ಈಗಾಗಲೇ 31 ರನ್ ಪೇರಿಸಿದ್ದಾರೆ. ಇವರಿಬ್ಬರು ನಾಲ್ಕನೇ ದಿನ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದರೆ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಒಳ್ಳೆಯ ಮೊತ್ತ ಪೇರಿಸಬಹುದು. ರಹಾನೆ 25 ಮತ್ತು ವಿಹಾರಿ 15 ರನ್ನುಗಳಿಂದ ನಾಲ್ಕನೇ ದಿನ ಆಟ ಮುಂದುವರಿಸಲಿದ್ದಾರೆ.
ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಟೆಸ್ಟ್ ಸರಣಿಯಲ್ಲಿ ಆಡಲಿಳಿದ ಬೌಲ್ಟ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದ ಮೇಲೆ ಎರಗಿ ಈಗಾಗಲೇ ಮೂರು ವಿಕೆಟ್ ಉರುಳಿಸಿದ್ದಾರೆ.
Advertisement
ಬ್ಯಾಟಿಂಗ್‌ನಲ್ಲಿ ಮಿಂಚಿದ ಜಾಮೀಸನ್ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಉರುಳಿಸಿದ್ದ ಕೈಲ್ ಜಾಮೀಸನ್ ಬ್ಯಾಟಿಂಗ್‌ನಲ್ಲೂ ಗಮನಾರ್ಹ ನಿರ್ವಹಣೆ ನೀಡಿದ್ದಾರೆ. ಅವರ ಸಹಿತ ಗ್ರ್ಯಾಂಡ್‌ಹೋಮ್, ಬೌಲ್ಟ್ ಅವರ ಬಿರುಸಿನ ಆಟದಿಂದಾಗಿ ನ್ಯೂಜಿಲ್ಯಾಂಡ್ 348 ರನ್ ಪೇರಿಸಿ ಆಲೌಟಾಯಿತು. ಈ ಮೂಲಕ 183 ರನ್ ಮೊದಲ ಇನ್ನಿಂಗ್ಸ್ ಮುನ್ನಡೆ ದಾಖಲಿಸಿತು. ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿದ ಜಾಮೀಸನ್ 45 ಎಸೆತಗಳಿಂದ 4 ಸಿಕ್ಸರ್ ಮತ್ತು 1 ಬೌಂಡರಿ ನೆರವಿನಿಂದ 44 ರನ್ ಗಳಿಸಿದ್ದರು. ಸ್ಕೋರ್ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್ 165
ನ್ಯೂಜಿಲ್ಯಾಂಡ್ ಪ್ರಥಮ ಇನ್ನಿಂಗ್ಸ್
(ನಿನ್ನೆ 5 ವಿಕೆಟಿಗೆ 216)
ಬ್ರಾಡ್ಲಿ ವಾಟಿÉಂಗ್ ಸಿ ಪಂತ್ ಬಿ ಬುಮ್ರಾ 14
ಗ್ರ್ಯಾಂಡ್‌ಹೋಮ್ ಸಿ ಪಂತ್ ಬಿ ಅಶ್ವಿನ್ 43
ಟಿಮ್ ಸೌಥಿ ಸಿ ಶಮಿ ಬಿ ಇಶಾಂತ್ 6
ಕೈಲ್ ಜಾಮೀಸನ್ ಸಿ ವಿಹಾರಿ ಬಿ ಅಶ್ವಿನ್ 44
ಅಜಾಜ್ ಪಟೇಲ್ ಔಟಾಗದೆ 4
ಟ್ರೆಂಟ್ ಬೌಲ್ಟ್ ಸಿ ಪಂತ್ ಬಿ ಇಶಾಂತ್ 38
ಇತರ 8
ಒಟ್ಟು (ಆಲೌಟ್) 348
ವಿಕೆಟ್ ಪತನ: 6-216, 7-225, 8-296, 9-310.
ಬೌಲಿಂಗ್: ಜಸ್‌ಪ್ರೀತ್ ಬುಮ್ರಾ 26-5-88-1
ಇಶಾಂತ್ ಶರ್ಮ 22.2-6-68-5
ಮೊಹಮ್ಮದ್ ಶಮಿ 23-2-91-1
ಆರ್. ಅಶ್ವಿನ್ 29-1-99-3
ಭಾರತ ದ್ವಿತೀಯ ಇನ್ನಿಂಗ್ಸ್
ಪೃಥ್ವಿ ಶಾ ಸಿ ಲಾಥಂ ಬಿ ಬೌಲ್ಟ್ 14
ಅಗರ್ವಾಲ್ ಸಿ ವಾಟಿÉಂಗ್ ಬಿ ಸೌಥಿ 58
ಚೇತೇಶ್ವರ್ ಪೂಜಾರ ಬಿ ಬೌಲ್ಟ್ 11
ವಿರಾಟ್ ಕೊಹ್ಲಿ ಸಿ ವಾಟಿÉಂಗ್ ಬಿ ಬೌಲ್ಟ್ 19
ಅಜಿಂಕ್ಯ ರಹಾನೆ ಬ್ಯಾಟಿಂಗ್ 25
ಹನುಮ ವಿಹಾರಿ ಬ್ಯಾಟಿಂಗ್ 15
ಇತರ 2
ಒಟ್ಟು (4 ವಿಕೆಟಿಗೆ) 144
ವಿಕೆಟ್ ಪತನ: 1-27, 2-78, 3-96, 4-113.
ಬೌಲಿಂಗ್: ಟಿಮ್ ಸೌಥಿ 15-5-41-1
ಟ್ರೆಂಟ್ ಬೌಲ್ಟ್ 16-6-27-3
ಗ್ರ್ಯಾಂಡ್‌ಹೋಮ್ 14-5-25-0
ಕೈಲ್ ಜಾಮೀಸನ್ 17-7-33-0
ಅಜಾಜ್ ಪಟೇಲ್ 3-0-18-0