Advertisement

ಡಬ್ಬೂ ರತ್ನಾನಿ ವಿರುದ್ಧ ಕೃತಿ ಚೌರ್ಯ ಆರೋಪ

10:06 AM Feb 24, 2020 | Hari Prasad |

ಮುಂಬೈ: ಖ್ಯಾತ ಫೋಟೋಗ್ರಾಫ‌ರ್‌ ಡಬ್ಬೂ ರತ್ನಾನಿ ಕೃತಿಚೌರ್ಯದ ಆರೋಪ ಎದುರಿಸುತ್ತಿದ್ದಾರೆ. 2020ರ ಕ್ಯಾಲೆಂಡರ್‌ ಫೋಟೋ ಶೂಟ್‌ಗಾಗಿ ಡಬ್ಬೂ ಕ್ಲಿಕ್ಕಿಸಿದ, ನಟಿ ಕೈರಾ ಅಡ್ವಾನಿ ರೂಪದರ್ಶಿಯಾಗಿರುವ ಚಿತ್ರ, ಜರ್ಮನಿಯ ಖ್ಯಾತ ಛಾಯಾಚಿತ್ರಗಾರ್ತಿ ಮೇರಿ ಬರ್ಷ್‌ ತೆಗೆದ ಚಿತ್ರದ ಯಥಾವತ್‌ ರೂಪ ಎಂದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಬಳಕೆದಾರರು ಟೀಕಿಸಿದ್ದಾರೆ.

Advertisement

ಡಬ್ಬೂ ಹಾಗೂ ಮೇರಿ ತೆಗೆದಿರುವ ಚಿತ್ರಗಳಲ್ಲಿ ಸಾಕಷ್ಟು ಸಾಮ್ಯತೆಗಳಿವೆ. ಎರಡೂ ಚಿತ್ರಗಳಲ್ಲಿ ರೂಪದರ್ಶಿಗಳು ದೊಡ್ಡದಾದ ಹಸಿರು ಎಲೆಯಿಂದ ತಮ್ಮ ದೇಹ ಮುಚ್ಚಿಕೊಂಡಿದ್ದಾರೆ. ಈ ಎರಡೂ ಫೋಟೋಗಳನ್ನು ಪ್ರಕಟಿಸಿ ಇನ್‌ಸ್ಟಾಗ್ರಾಂ ಬಳಕೆದಾರರು ರತ್ನಾನಿ ವಿರುದ್ಧ ಕೃತಿಚೌರ್ಯದ ಆರೋಪ ಹೊರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next