ಕೋಲಾರ: ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತಿದ್ದು. ಉತ್ತಮ ಗುಣಮಟ್ಟದಸೇವೆಯನ್ನು ನೀಡುತ್ತಾ ಬಂದಿದೆ. ವೈದ್ಯರು ಉತ್ತಮ ಸೇವೆಗಳನ್ನು ನೀಡುತ್ತಿದ್ದು, ಆಸ್ಪತ್ರೆಯಲ್ಲಿ ಸುಸಜ್ಜಿತ ಸೌಲಭ್ಯ ಹಾಗೂ ಸೇವೆಗಳನ್ನುಒದಗಿಸಲಾಗುತ್ತಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯ್‌ಕುಮಾರ್ ತಿಳಿಸಿದರು.
ನಗರದ ಜಿಲ್ಲಾ ಶಸ್ತ್ರಚಿಕಿತ್ಸಕರ ಕಚೇರಿಯಲ್ಲಿ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯ ಅಭಿವೃದ್ಧಿ ಮತ್ತು ಡಿಎನ್‌ಬಿ ಸ್ನಾತಕೋತ್ತರಗಳ ಬಗ್ಗೆ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕಿಮೊಥೆರಪಿಯನ್ನುನೀಡಲಾಗುತ್ತಿದೆ. ಎಂಆರ್‌ಐ ನವೀಕರಣವೂಆಗಿದೆ. ಪ್ರತಿದಿನ 45 ಎಂಆರ್‌ಐ ಪರೀಕ್ಷೆಗಳುನಡೆಯುತ್ತಿವೆ. ದಿನಕ್ಕೆ 46 ಸಿಟಿ ಸ್ಕಾÂನ್ ಪರೀಕ್ಷೆಗಳುನಡೆಯುತ್ತಿವೆ. ಯಾವುದೇ ಕಾರಣಕ್ಕೂ ಹೊರಗಿನಔಷಧಿಗಳನ್ನು ತರಲು ಬರೆಯದಂತೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.
ಪ್ರಸ್ತುತ ಈ ಆಸ್ಪತ್ರೆಯು 500 ಹಾಸಿಗೆಗಳ ಜಿಲ್ಲಾ ಆಸ್ಪತ್ರೆಯಾಗಿದ್ದು, ಈ ಜಿಲ್ಲೆಯು ಆಂದ್ರಪದೇಶ ಮತ್ತು ತಮಿಳುನಾಡು ಗಡಿಭಾಗದಲ್ಲಿದ್ದು, ಪಕ್ಕದ ರಾಜ್ಯದಿಂದಲೂ ರೋಗಿಗಳು ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ಬರುತ್ತಿದ್ದು ಈ ಜಿಲ್ಲಾ ಆಸ್ಪತ್ರೆಯು ಉನ್ನತ ಮಟ್ಟದ ಆಸ್ಪತ್ರೆಯಾಗಿದ್ದು, ರೆಫರಲ್ ಆಸ್ಪತ್ರೆಯಾಗಿರುತ್ತದೆ.ಮಾಸಿಕ 450 ರಿಂದ 500 ಹೆರಿಗೆಗಳು, 400 ರಿಂದ 500 ಸಾಮಾನ್ಯ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. ಕುಟುಂಬ ಕಲ್ಯಾಣ ಯೋಜನೆಯಡಿ ಸಂತಾನಹರಣ ಶಸ್ತ್ರಚಿಕಿತ್ಸೆ (ಟಿ.ಓ ಮತ್ತು ಎಲ್.ಟಿ.ಓ) ಕ್ಯಾಂಪ್‌ಗ್ಳು ಸಹ ನಡೆಯುತ್ತಿದ್ದು, ಪ್ರತೀ ತಿಂಗಳು 150 ರಿಂದ 200 ಫಲಾನುಭವಿಗಳು ಶಸ್ತ್ರಚಿಕಿತ್ಸೆಯ ಉಪಯೋಗ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಒಟ್ಟು 45 ವೈದ್ಯಾಧಿಕಾರಿಗಳಿದ್ದು, ಎಲ್ಲಾ ವಿಭಾಗದಲ್ಲೂ ತಜ್ಞ ವೈದ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ನುರಿತ ಪಿ.ಜಿ ಬೋಧಕರು ಸೇವೆ ಸಲ್ಲಿಸುತ್ತಿದ್ದು, ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಪಿಜಿ ಬೋಧಕರ ಸಹಾಯದಿಂದ ನಿರ್ವಹಿಸಲಾಗುತ್ತಿದ್ದು ಮತ್ತು ರೆಫರಲ್ ಕಡಿತಗೊಳಿಸಲಾಗಿದೆ.
ಗರ್ಭಿಣಿ ಸ್ತ್ರೀರೋಗ ಕಾರ್ಯಕ್ರಮದ ಮುಖ್ಯಸ್ಥರಾದ ಪ್ರೊ. ನಾರಾಯಣಸ್ವಾಮಿ, ಆರ್.ಎಂ.ಓ ಡಾ.ಬಾಲಸುಂದರ್, ಮಕ್ಕಳ ತಜ್ಞರಾದ ಶ್ರೀನಾಥ್, ಶುಶ್ರೂಷಕ ಅಧೀಕ್ಷಕ ಎಸ್. ವಿಜಯಮ್ಮ, ಸುಮತಿ ಇತರರಿದ್ದರು.