ನವದೆಹಲಿ : ”ಶೀಘ್ರದಲ್ಲೇ ನಾವು ಬಿಹಾರದಲ್ಲಿ ಜೆಡಿಯು-ಆರ್‌ಜೆಡಿ ಮೈತ್ರಿಯನ್ನು ಮುರಿದು ರಾಜ್ಯವನ್ನು ಜೆಡಿಯು ಮುಕ್ತಗೊಳಿಸುತ್ತೇವೆ” ಎಂದು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಸಂಸದ ಸುಶೀಲ್ ಮೋದಿ ಶನಿವಾರ ಹೇಳಿಕೆ ನೀಡಿದ್ದಾರೆ.
ಎಎನ್ ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ”ಮಣಿಪುರದಲ್ಲಿ ಐದು ಜೆಡಿಯು ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ರಾಜ್ಯವು ಜೆಡಿಯು ಮುಕ್ತವಾಗಿದೆ. ಆ ಶಾಸಕರು ಎನ್‌ಡಿಎಯಲ್ಲಿ ಉಳಿಯಲು ಬಯಸಿದ್ದರು” ಎಂದರು.
”ಹೋರ್ಡಿಂಗ್‌ಗಳು ಮತ್ತು ಪೋಸ್ಟರ್‌ಗಳನ್ನು ಹಾಕುವ ಮೂಲಕ ಯಾರೂ ಪ್ರಧಾನಿಯಾಗಲು ಸಾಧ್ಯವಿಲ್ಲ” ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಟಾಂಗ್ ನೀಡಿದರು.
ಪಕ್ಷವನ್ನು ನಾಶಕ್ಕೆ ಯತ್ನ
”ನಮ್ಮ ಪಕ್ಷವನ್ನು ನಾಶ ಮಾಡಲು ಬಿಜೆಪಿ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಹೇಳುತ್ತಿದ್ದೆವು. ಎನ್‌ಡಿಎ ಜೊತೆ ಇರುವಾಗ ನಾವು ಅದನ್ನು ಅನುಭವಿಸಿದ್ದೇವೆ ಮತ್ತು ಅದು ಇಂದು ಸಾಬೀತಾಗಿದೆ. ಇಂದು ನಾವು ಅವರ ವಿರುದ್ಧ ಇದ್ದೇವೆ ಹಾಗಾಗಿ ಅವರ ದಾಳಿ ಹೆಚ್ಚಾಗುತ್ತದೆ, ಆದರೆ ಎದುರಿಸಲು ನಾವು ಸಿದ್ಧ” ಎಂದು ಜೆಡಿಯು ನಾಯಕ ಉಪೇಂದ್ರ ಕುಶ್ವಾಹ ಕಿಡಿ ಕಾರಿದ್ದಾರೆ.