Advertisement

ವೆಲ್ಡಿಂಗ್‌ ವರ್ಕ್‌ಗಿದೆ ಆದ್ಯತೆ

10:11 PM Jun 11, 2019 | mahesh |

ಆಟೋ ಮೊಬೈಲ್‌ ಕ್ಷೇತ್ರದಿಂದ ಹಿಡಿದು ಬಿಲ್ಡಿಂಗ್‌ಗಳ ನಿರ್ಮಾಣಗಳಲ್ಲಿ ವೆಲ್ಡಿಂಗ್‌ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ಇದ್ದು ವಿವಿಧ ರೀತಿಯ ಡಿಸೈನ್‌ಗಳಲ್ಲಿ ವೆಲ್ಡಿಂಗ್‌ಗಳನ್ನು ಮಾಡುವ ವೆಲ್ಡರ್‌ಗಳಿಗೆ ಈ ಕ್ಷೇತ್ರ ಹೆಚ್ಚು ಲಾಭದಾಯಕವಾಗಿದೆ.  ಹೆಚ್ಚುತ್ತಿರುವ ನಗರಾಭಿವೃದ್ಧಿಯಲ್ಲಿ ಈ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿದ್ದು ಹೊಸ ಹೊಸ ಮಾದರಿ ಡಿಸೈನ್‌ಗಳು ಜನ್ಮತಾಳಿದ್ದು ಮನೆ, ರೆಸ್ಟೋರೆಂಟ್‌, ಅದಲ್ಲದೆ ವಿವಿಧ ರೀತಿಯ ವಾಹನಗಳಲ್ಲಿ ಬಿಡಿ ಭಾಗಗಳನ್ನು ಜೋಡಿಸಿ ಅದಕ್ಕೊಂದು ಹೊಸ ರೂಪ ನೀಡುವ ಕಲೆಗಾರಿಕೆ ವೆಲ್ಡರ್‌ಗಳದ್ದಾಗಿದೆ.

Advertisement

ಸುರಕ್ಷತೆಗೆ ಮಹತ್ವ
ವಿದ್ಯುತ್‌ನ ಜತೆ ಕೆಲಸ ಮಾಡುವುದರಿಂದ ಇದರ ಬಗ್ಗೆ ಪೂರ್ವ ತಯಾರಿಗಳಿರಬೇಕಾಗುತ್ತದೆ. ಅದಲ್ಲದೆ ವೈಯಕ್ತಿಕ ರಕ್ಷಣಾತ್ಮಕತೆ ಮುಖ್ಯವಾಗಿರುತ್ತದೆ. ಲೋಹ ಮತ್ತು ಥರ್ಮೋ ಪ್ಲಾಸ್ಟಿಕ್‌ ಇನ್ನಿತರ ಒಗ್ಗೂಡಿಸುವಿಕೆಯಿಂದ ಈ ಪ್ರಕ್ರಿಯೆ ನಡೆಯುವುದರಿಂದ ಮೊದಲೇ ಕೆಲವು ಮಾಹಿತಿ ಮತ್ತು ಅದರ ಕುರಿತು ಕೆಲವು ಮುನ್ಸೂಚನೆ ಅಗತ್ಯವಾಗಿರುತ್ತದೆ. ಮತ್ತೂಂದೆಡೆ ವೆಲ್ಡರ್‌ಗಳಿಗೆ ವೆಲ್ಡಿಂಗ್‌ ಬಗ್ಗೆ ವ್ಯಾಪಕವಾದ ಜ್ಞಾನ ಮತ್ತು ಕೌಶಲ ಅಗತ್ಯವಾಗಿರುತ್ತದೆ.

ವಿದ್ಯಾರ್ಹತೆ
ವೆಲ್ಡಿಂಗ್‌ ಆಪರೇಟರ್‌ಗ ಳಿಗೆ ಯಾವುದೇ ನಿರ್ದಿಷ್ಟ ವಿದ್ಯಾರ್ಹತೆಗಳಿರುವುದಿಲ್ಲ, ಆದರೆ ಹೈಸ್ಕೂಲ್‌ ಅನಂತರ ಡಿಪ್ಲೊಮಾ ತೆಗೆದುಕೊಡು ಅದಕ್ಕೆ ಸಂಬಂಧಪಟ್ಟ ಹಾಗೆ ಕೋರ್ಸ್‌ಗಳನ್ನು ತೆಗೆದುಕೊಂಡು ಓದಬಹುದು. ಇದಾದ ಅನಂತರ ಅವರಿಗೆ ಕೆಲವು ಕಡೆ ಕೆಲಸ ಮಾಡಿದ ಅನುಭವಬೇಕಾಗುತ್ತದೆ. ಅದರ ಆಧಾರದ ಮೇಲೆ ಕಂಪೆನಿ ಅಥವಾ ಪಾರ್ಟ್‌ ಟೈಮ್‌ ಜಾಬ್‌ಗಳನ್ನು ಮಾಡಬಹುದಾಗಿದೆ.

ಅರೆಕಾಲಿಕ ಉದ್ಯೋಗಕ್ಕೆ ಆದ್ಯತೆ
ಕೆಲವರು ಇದನ್ನು ಪಾರ್ಟ್‌ ಟೈಮ್‌ ಆಗಿಯೂ ಮಾಡಬಹುದು. ಕಾಲೇಜುಗಳಿಗೆ ಹೋಗುತ್ತಿರುವಂತೆಯೇ ಇದನ್ನು ಮಾಡ ಬಹುದು. ಇದಕ್ಕೆ ಹೆಚ್ಚಿನ ಕೌಶಲ ಅಗತ್ಯವಿದ್ದು, ಯಾವ ರೀತಿಯಲ್ಲಿ ಅದನ್ನು ಚೆನ್ನಾಗಿ ನಿರ್ವಹಿಸಿ ಇರುವುದಕ್ಕಿಂತ ಹೇಗೆ ವಿಭಿನ್ನವಾಗಿ ಮಾಡಬಹುದು ಎನ್ನುವುದು ತಿಳಿದಿದ್ದರೆ ಉತ್ತಮ. ಅದಲ್ಲದೆ ಇತ್ತೀಚೆಗೆ ಮನೆಯ ಹೊರಾಂಗಣ, ಕಿಟಕಿ ಅಡುಗೆ ಮನೆಯನ್ನು ಸುಂದರವಾಗಿ ಕಾಣುವಂತೆ ಮಾಡಲು ಕೆಲವರು ವೆಲ್ಡರ್‌ಗಳ ಮೊರೆ ಹೋಗುವುದರಿಂದ ಇದಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಮನೆಗಳಲ್ಲಿ ಅದಲ್ಲದೆ ವಿವಿಧ ರೆಸ್ಟೋರೆಂಟ್‌ಗಳಲ್ಲಿ ವಿಭಿನ್ನ ವಿನ್ಯಾಸ ಮಾಡಿ ಅದಕ್ಕೆ ಹೊಂದುವ ಪೇಂಟ್‌ಗಳನ್ನು ನೀಡುತ್ತಾರೆ.

ಯುರೋಪ್‌ನಂತಹ ಪ್ರದೇಶಗಳಲ್ಲಿ ಕೆಲವು ಕಾಲೇಜುಗಳಿದ್ದು, ಅದಕ್ಕೆ ತಕ್ಕಂತೆ ಕೆಲವು ಅರ್ಹತಾ ಪರೀಕ್ಷೆಗಳನ್ನು ನಡೆಸಿ ಪ್ರಮಾಣ ಪತ್ರಗಳನ್ನು ಅವರ ಕಾರ್ಯ ಕ್ಷಮತೆಗನುಗುಣವಾಗಿ ನೀಡಲಾಗುತ್ತದೆ. ಈ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ಇರುವವರು ಇಂತಹ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಬಹುದು. ಇದರಿಂದ ಪಾರ್ಟ್‌ ಟೈಮ್‌ ಆಗಿಯೂ ಈ ಕೆಲಸವನ್ನು ನಿರ್ವಹಿಸಬಹುದಲ್ಲದೆ, ಬ್ಯುಸಿಸ್‌ನೆಸ್‌ ಆಗಿ ಇದನ್ನು ನಿರ್ವಹಿಸುವವರ ಕೆಳಗೆ ಸ್ವಲ್ಪ ವರ್ಷಗಳ ಮಟ್ಟಿಗೆ ಕೆಲಸ ಮಾಡಿ ಅನಂತರ ನೀವೇ ನಿಮ್ಮ ಕಾರ್ಯ ಕ್ಷಮತೆಗೆ ತಕ್ಕಂತೆ ಕೆಲಸವನ್ನು ನಿರ್ವಹಿಸಬಹುದಾಗಿದೆ.

Advertisement

-   ಪ್ರೀತಿ ಭಟ್‌ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next