Advertisement

ಯೋಗ ಸಾಧಕಿ ಧನ್ವಿ ಮರವಂತೆಗೆ ಸ್ವಾಗತ

11:16 PM Oct 17, 2019 | Sriram |

ಕುಂದಾಪುರ: ಅತಿ ಸಣ್ಣ ವಯಸ್ಸಿನ ಯೋಗ ಸಾಧಕಿ ಮಲೇಶಿಯಾ ದಲ್ಲಿ ಏರ್ಪಡಿಸಲಾದ ಅತೀ ಸಣ್ಣ ವಯಸ್ಸಿನ ಯೋಗ ಸ್ಪರ್ಧೆ – 2019 ರಲ್ಲಿ ಚಿನ್ನದ ಪದಕ ವಿಜೇತೆ ಧನ್ವಿ ಪೂಜಾರಿ ಮರವಂತೆ ಅವರನ್ನು ಗುರುವಾರ ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಸ್ವಾಗತಿ ಸಲಾಯಿತು.

Advertisement

ತೆರೆದ ವಾಹನದಲ್ಲಿ ಮೆರವಣಿಗೆ
ಅಥ್ಲೆಟಿಕ್‌ ಯೋಗ ಚಾಂಪಿಯನ್‌ ಷಿಪ್‌ ಮೊದಲ ಸ್ಥಾನ ಚಿನ್ನದ ಪದಕ, ಆರ್ಟಿಸ್ಟಿಕ್‌ ಯೋಗ ಚಾಂಪಿಯನ್‌ ಷಿಪ್‌ ದ್ವಿತೀಯ ಸ್ಥಾನ ಬೆಳ್ಳಿಯ ಪದಕ ವಿಜೇತರಾದ ಧನ್ವಿ ಅವರನ್ನು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆತ್ಮೀಯ ಸ್ವಾಗತ ಕೋರಿ ಅನಂತರ ತೆರೆದ ವಾಹನದಲ್ಲಿ ಶಾಸ್ತ್ರಿ ಸರ್ಕಲ್‌ನಿಂದ ಬಸ್‌ ನಿಲ್ದಾಣವರೆಗೆ ಮೆರವಣಿಗೆ ನಡೆಸಲಾಯಿತು.

ಪ್ರೋತ್ಸಾಹ ನೀಡಿ
ಈ ಸಂದರ್ಭ ಮಾತನಾಡಿದ ಬೈಂದೂರು ಪತ್ರಕರ್ತರ ಸಂಘದ ಅಧ್ಯಕ್ಷ ಜನಾರ್ದನ ಮರವಂತೆ, ನಮ್ಮ ಊರಿನ ಸಾಧಕಿ, ಎಳೆ ಪ್ರತಿಭೆ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದು ಹೆಮ್ಮೆಯಾಗಿದೆ. ಇದನ್ನು ಮುಂದುವರಿ ಸಿಕೊಂಡು ಹೋಗಬೇಕು. ಇದಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದರು.

ಧನ್ವಿ ಮಾತನಾಡಿ, ಮುಂದಿನ ದಿನಗಳಲ್ಲಿ ಕಲಿತು ವೈದ್ಯಳಾಗಬೇಕೆಂದು ಆಸೆಯಿದೆ. ಸರಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಚಿಕಿತ್ಸೆಗೆ ನಿರ್ಲಕ್ಷ್ಯ ಮಾಡುತ್ತಾರೆ ಎಂಬ ಭಾವನೆ ಇದೆ ಎಂದರು.

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಿರ್ದೇಶಕ ರಾಜು ಪೂಜಾರಿ, ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ರಾಧಾದಾಸ್‌, ಜೆಸಿಐ ಸಿಟಿ ಸ್ಥಾಪಕಾಧ್ಯಕ್ಷ ಹುಸೇನ್‌ ಹೈಕಾಡಿ, ಕುಂದಾಪುರ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಮಂಜು ಬಿಲ್ಲವ, ತಾ. ಪಂ. ಮಾಜಿ ಅಧ್ಯಕ್ಷ ಭಾಸ್ಕರ ಬಿಲ್ಲವ, ಬಿಜೆಪಿ ಮಂಡಲ ಅಧ್ಯಕ್ಷ ಕಾಡೂರು ಸುರೇಶ್‌ ಶೆಟ್ಟಿ, ಪುರಸಭೆ ಸದಸ್ಯರಾದ ಶೇಖರ ಪೂಜಾರಿ,ವನಿತಾ ಎಸ್‌. ಬಿಲ್ಲವ, ಪ್ರಭಾಕರ, ಸಂತೋಷ್‌ ಕುಮಾರ್‌ ಶೆಟ್ಟಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next