Advertisement
ಛಾಯಾಚಿತ್ರ ತೆಗೆಯಲು ಅನುಮತಿ ಕೊಟ್ಟುದಕ್ಕೆ ಹೆಗ್ಗಡೆ ಕುಟುಂಬದವರು ಮೋದಿ ಅವರಿಗೆ ಧನ್ಯವಾದ್ ಎಂದರು. ಅದಕ್ಕೆ ಅವರು ಕೂಡ ಪ್ರತಿ ವಂದನೆ ಸಲ್ಲಿಸಿದರು. ವೀರೇಂದ್ರ ಹೆಗ್ಗಡೆ ಅವರ ಜತೆ ಪ್ರತ್ಯೇಕವಾಗಿ ಔಪ ಚಾರಿಕ ಮಾತುಕತೆ ನಡೆಸಿದರು. ಪೂರ್ವ ನಿಗದಿ ಯಂತೆ ದೇವಾಲಯದ ಅಂಗಣದಲ್ಲಿ ವಿಶೇಷವಾಗಿ ಸಿದ್ಧ ಪಡಿಸಿದ ಕೊಠಡಿಯಲ್ಲಿ ಕುರ್ತಾ ತೆಗೆದು ತಾವೇ ತಂದಿದ್ದ ಕೇಸರಿ ಬಣ್ಣದ ಶಾಲು ಹೊದ್ದುಕೊಂಡರು.
ದೇವಾಲಯದ ಹೊರಗಿನ ಕ್ಯೂ ಲೈನ್ ಹಾಗೂ ಪ್ರವಚನ ಮಂಟಪದಲ್ಲಿ ಮುನ್ನೂರಕ್ಕಿಂತ ಅಧಿಕ ಮಂದಿ ದೇವಾಲಯದ ಸಿಬಂದಿ ಮೋದಿ ಅವರನ್ನು ಕಾಣಲು ನಿಂತಿದ್ದರು. ಅವರೆಲ್ಲರಿಗೂ ವಂದನೆ ಸಲ್ಲಿಸಿದರು. ಅನಂತರ ಉಜಿರೆಗೆ ನಿರ್ಗಮಿಸಿದರು. ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಚಿತ್ರವನ್ನು ಮೋದಿ ಟ್ವೀಟರ್ ಹಾಗೂ ಫೇಸ್‌ಬುಕ್‌ನಲ್ಲಿ ಹಂಚಿ ಕೊಂಡರು.