Advertisement

ಬಿಜೆಪಿಗೆ ಯಾರೇ ಬಂದ್ರೂ ಸ್ವಾಗತ: ರೆಡ್ಡಿ

12:30 AM Jan 03, 2019 | Team Udayavani |

ಬಳ್ಳಾರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ಬಿಜೆಪಿಗೆ ಯಾರು ಬಂದರೂ ಸ್ವಾಗತಾರ್ಹ ಎಂದು ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.

Advertisement

ನಗರದ ಮುಂಡ್ರಿಗಿ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಬೇಕು. ಯಡಿಯೂರಪ್ಪ ಮತ್ತೂಮ್ಮೆ ಮುಖ್ಯಮಂತ್ರಿಯಾಗಬೇಕು. ಹೀಗಾಗಿ ಬೇರೆ ಪಕ್ಷದ ಯಾರೇ ಬಿಜೆಪಿಗೆ ಬಂದರೂ ಅವರನ್ನು ನಾವು ಸ್ವಾಗತಿಸುತ್ತೇವೆ. ಕಾಂಗ್ರೆಸ್‌ ಅತೃಪ್ತ ಶಾಸಕರು ಬಂದರೂ ಸ್ವಾಗತಿಸುತ್ತೇವೆ. ಆದರೆ, ಅವರ್ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ವಾಪಸ್‌ ಬಿಜೆಪಿಗೆ ಬಂದರೆ ಅವರನ್ನು ಮೊದಲಿನಂತೆಯೇ ನೋಡಿಕೊಳ್ಳಲಾಗುವುದು. ಈಗಲೂ ನಾನು, ಅವರು ಸ್ನೇಹಿತರಾಗಿಯೇ ಇದ್ದೇವೆ. ಪಕ್ಷ ಬೇರೆ, ಸ್ನೇಹ ಬೇರೆ ಎಂದರು.
 

Advertisement

Udayavani is now on Telegram. Click here to join our channel and stay updated with the latest news.

Next