ಚಿಂತಾಮಣಿ: ಕನ್ನಡದ ಖಾಸಗಿ ವಾಹಿಯೊಂದರಲ್ಲಿ ನಡೆಯುವ ಬಿಗ್‌ಬಾಸ್ ರಿಯಾಲಿಟಿ ಶೋನ 6ನೇ ಆವೃತಿ ಯಲ್ಲಿ ವಿನ್ನರ್ ಆದ ತಾಲೂಕಿನ ಬಟ್ಲ ಹಳ್ಳಿ ಗ್ರಾಮದ ರೈತನ ಮಗ ಶಶಿ ಕುಮಾರ್ ಭಾನುವಾರ ತವರಿಗೆ ಬಂದ ಹಿನ್ನೆಲೆಯಲ್ಲಿ ಸ್ನೇಹಿತರು, ಅಭಿಮಾನಿ ಗಳಿಂದ ಭರ್ಜರಿ ಸ್ವಾಗತ ಕೋರ ಲಾಯಿತು.
ರೋಡ್ ಶೋ: ಮಾಡರ್ನ್ ರೈತ, ಬಹುಮುಖ ಪ್ರತಿಭೆ ಶಶಿಕುಮಾರ್ ಬಿಗ್‌ಬಾಸ್‌ನಲ್ಲಿ ವಿನ್ನರ್ ಆಗಿ ಆಯ್ಕೆ ಯಾಗಿದ್ದು, ತವರೂರು ಚಿಂತಾಮಣಿ ನಗರಕ್ಕೆ ಆಗಮಿಸಿದ ವೇಳೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ರೋಡ್ ಶೋ ನಡೆಸಿ ಶುಭ ಹಾರೈಸಿದರು.
ಶಶಿಕುಮಾರ್ ಚಿಂತಾಮಣಿ ತಾಲೂಕು ಮುಂಗಾನಹಳ್ಳಿ ಹೋಬ ಳಿಯ ಬಟ್ಲಹಳ್ಳಿ ಗ್ರಾಮದ ಪದ್ಮಾವತಿ ಶ್ರೀರಾಮರೆಡ್ಡಿ ದಂಪತಿಗಳ ಮಗನಾಗಿದ್ದು, ಎಂ.ಎಸ್‌ಸಿ ಕೃಷಿ ಪದವಿ ಪಡೆದು ಸರ್ಕಾರಿ ಕೆಲಸಕ್ಕೆ ಹೋಗದೆ, ಕೃಷಿ ಮಾಡಿಕೊಂಡು ಅನೇಕ ರೀತಿಯ ಬೆಳೆಗಳನ್ನು ಬೆಳೆಯುವುದರ ಮೂಲಕ ಮಾಡರ್ನ್ ರೈತನಾಗಿದ್ದಾನೆ.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಶಿಕುಮಾರ್, ಬಿಗ್‌ಬಾಸ್ ಅನ್ನೋದು ಒಂದು ಸ್ಪರ್ಧೆಯಲ್ಲ, ವ್ಯಕ್ತಿತ್ವವನ್ನು ಪರಿಚಯಿಸುವ ವೇದಿಕೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಛಲ ಹಾಗೂ ನಿರ್ದಿಷ್ಟ ಗುರಿಯಿರಬೇಕು ಎಂದು ಹೇಳಿದರು.
ಶಶಿಕುಮಾರ್ ತಂದೆ ಶ್ರೀರಾಮರೆಡ್ಡಿ, ತಾಯಿ ಪದ್ಮಾವತಿ ರೈತ ಸಂಘದ ಮುಖಂಡರಾದ ರಘುನಾಥರೆಡ್ಡಿ, ಸೀಕಲ್ ವೆಂಕರಮಣಾರೆಡ್ಡಿ, ಕರವೇ ಅಂಬರೀಶ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಯುವಕ ಯುವತಿಯರು ಉಪಸ್ಥಿತರಿದ್ದರು.