Advertisement

ಸಚಿವ ವೆಂಕಟರಾವ್‌ ನಾಡಗೌಡರಿಗೆ ಅದ್ಧೂರಿ ಸ್ವಾಗತ

02:09 PM Jun 13, 2018 | Team Udayavani |

ಸಿಂಧನೂರು: ಸಚಿವರಾದ ನಂತರ ಪ್ರಥಮ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಪಶು ಸಂಗೋಪನಾ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ಅವರಿಗೆ ಕ್ಷೇತ್ರದ ಜನತೆ ತಾಲೂಕಿನ ದಡೇಸುಗೂರು ಹತ್ತಿರದ ತುಂಗಭದ್ರಾ ನದಿ ಬಳಿ ಅದ್ಧೂರಿಯಾಗಿ ಸ್ವಾಗತಿಸಿ ತೆರೆದ ವಾಹನದಲ್ಲಿ ಸಿಂಧನೂರುವರೆಗೆ ಮೆರವಣಿಗೆ ನಡೆಸಿದರು.

Advertisement

ಸಚಿವ ವೆಂಕಟರಾವ ನಾಡಗೌಡ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ದಡೇಸುಗೂರು ಗ್ರಾಮದ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಅಲ್ಲಿಂದ ಸಿಂಧನೂರುವರೆಗೆ ಬರುವ ಎಲ್ಲ ಗ್ರಾಮ ಹಾಗೂ ಕ್ಯಾಂಪ್‌ ಗಳಲ್ಲಿನ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.

ಸಚಿವ ನಾಡಗೌಡ ತೆರೆದ ವಾಹನದಲ್ಲಿ ಬರುತ್ತಿದ್ದರೆ ಹಿಂದೆ ಹಿಂಬಾಲಕರ, ಕಾರ್ಯಕರ್ತರ ಸಾವಿರಾರು ವಾಹನ ಮೆರವಣಿಗೆಗೆ ಮೆರಗು ನೀಡಿದವು. ದಡೇಸುಗೂರು ಗ್ರಾಮಕ್ಕೆ 2 ಗಂಟೆ ಸುಮಾರಿಗೆ ಬಂದರೆ ಸಿಂಧನೂರು ತಲುಪುವ ವೇಳೆಗೆ ಸಂಜೆ 5:30 ಗಂಟೆ ಅಗಿತ್ತು. ಈ ಮಧ್ಯೆ ಶ್ರೀಪುರಂ ಜಂಕ್ಷನ್‌ನಲ್ಲಿರುವ ಮುಖಂಡ ಗುರ್ರಂ ಗುನ್ನೇಶ್ವರರಾವ್‌ ಅವರ ನಿವಾಸದಲ್ಲಿ ಸಚಿವರು ಮಧ್ಯಾಹ್ನ ಊಟ ಮಾಡಿದರು. 

ಮೆರವಣಿಗೆ ಸಿಂಧನೂರು ನಗರ ಪ್ರವೇಶಿಸುತ್ತಿದ್ದಂತೆ ಕಾರ್ಯಕರ್ತರು ಜೆಡಿಎಸ್‌ ಧ್ವಜಗಳನ್ನಿಡಿದುಕೊಂಡು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಜೊತೆಗೆ ಡೊಳ್ಳು ಕುಣಿತ, ಭಾಜಾ-ಭಜಂತ್ರಿಗಳು ಮೆರವಣಿಗೆಗೆ ಮೆರಗು ನೀಡಿದವು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ನಗರದ ಸತ್ಯಗಾರ್ಡನ್‌ಕ್ಕೆ ಆಗಮಿಸಿ ಸಮಾವೇಶ ನಡೆಸಲಾಯಿತು.

ಜೆಡಿಎಸ್‌ ತಾಲೂಕು ಅಧ್ಯಕ್ಷ ಎಂ.ಲಿಂಗಪ್ಪ, ಜಿಪಂ ಸದಸ್ಯ ಎನ್‌. ಶಿವನಗೌಡ ಗೊರೇಬಾಳ, ಜೆಡಿಎಸ್‌ ಮುಖ್ಯ ಸಂಚಾಲಕ ಬಿ.ಹರ್ಷ, ವಕ್ತಾರ ಬಸವರಾಜ ನಾಡಗೌಡ, ಕಾರ್ಯಾಧ್ಯಕ್ಷ ಮಲ್ಲೇಶಗೌಡ, ನಾಗೇಶ ಹಂಚಿನಾಳ ಕ್ಯಾಂಪ್‌, ಡಿ.ಸತ್ಯನಾರಾಯಣ, ಜಿ.ಸತ್ಯನಾರಾಯಣ, ಎಸ್‌. ಕೃಷ್ಣಮೂರ್ತಿ, ಧರ್ಮನಗೌಡ ಮಲ್ಕಾಪುರ, ಅಶೋಕಗೌಡ ಗದ್ರಟಗಿ, ರಾಮನಗೌಡ ಮಲ್ಕಾಪುರ, ರಂಗಾರೆಡ್ಡಿ, ಚಂದ್ರಶೇಖರ ಮೈಲಾರ, ಕೆ.ಮರಿಯಪ್ಪ, ಸಾಯಿರಾಮಕೃಷ್ಣ, ನದೀಮುಲ್ಲಾ ಸೇರಿದಂತೆ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Advertisement

ಟ್ರಾಫಿಕ್‌ ಜಾಮ್‌: ತಾಲೂಕಿನ ದಡೇಸುಗೂರು ಗ್ರಾಮದಿಂದಲೇ ಸಚಿವರನ್ನು ಮೆರವಣಿಗೆ ಮೂಲಕ ಸಿಂಧನೂರಿಗೆ ಬರಮಾಡಿಕೊಳ್ಳುವಾಗ ರಸ್ತೆಯುದ್ದಕ್ಕೂ ನೂರಾರು ವಾಹನಗಳು ನಿಂತು ಸಂಚಾರಕ್ಕೆ ಸಮಸ್ಯೆ ಆಯಿತು. ಟ್ರಾಕ್‌ ನಿಯಂತ್ರಣಕ್ಕೆ ಡಿವೈಎಸ್‌ಪಿ ಪ್ರದೀಪ ಕುಲ್ಕರ್ಣಿ, ಸಿಪಿಐ ನಾಗರಾಜ ಕಮ್ಮಾರ ಸೇರಿದಂತೆ ಪೊಲೀಸ್‌ ಸಿಬ್ಬಂದಿ ಹರಸಾಹಸ ಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next