Advertisement

ತೂಕ ಇಳಿಸುವ ಮಖಾನ

10:21 PM Jul 15, 2019 | Sriram |

ಇಂಗ್ಲಿಷ್‌ನಲ್ಲಿ ಫಾಕ್ಸ್‌ ನಟ್ಸ್‌ ಎಂದು ಕರೆಸಿಕೊಳ್ಳುವ ಮಖಾನ ರುಚಿಯಾದ ತಿಂಡಿಗೆ ಮಾತ್ರವಲ್ಲ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಪದಾರ್ಥ. ಆರೋಗ್ಯಕರ ತಿಂಡಿಗಳಲ್ಲಿ ಇತ್ತೀಚೆಗೆ ಮಖಾನ ಕೂಡ ಒಂದಾಗಿ ಬದಲಾಗಿದೆ. ಸುವಾಸನೆಯಿಂದ ಹಿಡಿದು ಹುರಿದ ಮಖಾನ ವರೆಗೂ ಮಾರುಕಟ್ಟೆಯಲ್ಲಿ ಇದರ ತಿಂಡಿಗಳು ಲಭ್ಯವಿವೆ. ಈ ಆರೋಗ್ಯಕರ ಮಖಾನದ ಇನ್ನೊಂದು ಪ್ರಮುಖ ಲಕ್ಷಣ ಕಂಡುಬಂದಿದೆ. ಅದೇ ತೂಕ ಇಳಿಕೆ. ಹೌದು ಮಖಾನ ದೇಹದ ತೂಕ ಇಳಿಕೆ ಒಂದು ಉತ್ತಮ ಪದಾರ್ಥ. ಮನೆಯಲ್ಲೇ ತಯಾರಿಸಿದ ತಿಂಡಿಗಳನ್ನು ಸೇವಿಸುವುದು ದೇಹದ ತೂಕ ಇಳಿಕೆ ಹೆಚ್ಚು ಪ್ರಯೋಜನಕಾರಿ.

Advertisement

ಕ್ಯಾಲೋರಿ
50 ಗ್ರಾಮ್‌ ಒಣ ಹಾಗೂ ಹುರಿದ ಮಖಾನದಲ್ಲಿ ಸ್ಯಾಚುರೇಟೆಡ್‌ ಕೊಬ್ಬು ಅಥವಾ ಸೋಡಿಯಂ ಇಲ್ಲದೆ 180 ಕ್ಯಾಲೋರಿಗಳಿವೆ. ಹೀಗಾಗಿ ಇದು ಕಡಿಮೆ ಕ್ಯಾಲೋರಿ ಇರುವ ಆಹಾರ. ಇದೇ ಕಾರಣ ತೂಕ ಇಳಿಕೆಯ ಡಯಟ್‌ನಲ್ಲಿ ಇದಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.

ಪೋಷಕಾಂಶಗಳು
ಮಖಾನ ಪ್ರೊಟಿನ್‌ ಹಾಗೂ ಉತ್ತಮ ಕಾಬೋìಹೈಡ್ರೇಟ್‌ಗಳನ್ನು ಹೇರಳವಾಗಿ ಹೊಂದಿದೆ. ಕ್ಯಾಂಪ್ಪೆರಾಲ್‌ ಎಂಬ ಫ್ಲೇವನಾಯ್ಡ ಅನ್ನು ಹೊಂದಿರುವ ಮಖಾನ ವಯಸ್ಸಾಗುವಿಕೆ ಹಾಗೂ ಊರಿಯೂತದ ವಿರುದ್ಧ ಹೋರಾಡುತ್ತದೆ. ಅಂಟು ರಹಿತವಾಗಿದ್ದು, ಮ್ಯಾಗ್ನೇಶಿಯಂ ಅಧಿಕವಾಗಿದೆ. ಹೃದಯ ರೋಗಿಗಳಿಗೆ ಸೂಕ್ತ ಆಹಾರ. ಕಾಬೋìಹೈಡ್ರೇಟ್‌ಗಳಿಂದ ಶ್ರೀಮಂತವಾಗಿರುವುದರಿಂದ ಈ ಪಫ್x ಕಮಲದ ಬೀಜಗಳಲ್ಲಿ ಸಾಮಾನ್ಯ ಆಹಾರವಾದ ಬ್ರೆಡ್‌ ಮತ್ತು ಅಕ್ಕಿಗಿಂತ ಜಿಐ ಸೂಚ್ಯಂಕವು ಕಡಿಮೆಯಿದೆ. ಕಬ್ಬಿಣದ ಅಂಶದಿಂದಲೂ ಸಮೃದ್ಧವಾಗಿದೆ. ಇದು ರಕ್ತದಲ್ಲಿ ಹಿಮೋಗ್ಲೋಬಿನ್‌ ರಚನೆಗೆ ಮುಖ್ಯವಾಗಿದೆ.

ತೂಕ ಇಳಿಕೆಗೆ ಮಖಾನ
ಕೊಲೆಸ್ಟ್ರಾಲ್‌ ಹಾಗೂ ಸಾಚ್ಯುರೇಟೆಡ್‌ ಕೊಬ್ಬು ಇಲ್ಲದಿರುವುದು ದೇಹದ ತೂಕ ಇಳಿಕೆಗೆ ಪೂರಕವಾದ ಆಹಾರ. ಕಡಿಮೆ ಜಿಐ ಸೂಚ್ಯಂಕ ಇರುವುದು ಹೊಟ್ಟೆ ಸಂಪೂರ್ಣಗೊಂಡ ಭಾವ ನೀಡುವುದರಿಂದ ಹಸಿವಾಗದಂತೆ ಮಾಡುತ್ತದೆ. ಆಯುರ್ವೇದದ ಪ್ರಕಾರ ಮಖಾನ ದೇಹದ ತೂಕ ಇಳಿಕೆ ಮಾತ್ರವಲ್ಲದೆ ಕಿಡ್ನಿಯನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗಿದೆ.

ಬೇರೆ ಪ್ರಯೋಜನಗಳು
1 ವಯಸ್ಸಾಗದಂತೆ ತಡೆಯುತ್ತದೆ.
2 ಆರೋಗ್ಯಕರ ಹೃದಯಕ್ಕೆ ಸಹಕಾರಿ.
3 ನಿದ್ರಾಹೀನತೆ ಕಡಿಮೆಗೊಳಿಸುವುದು.
4 ಬಂಜೆತನ ನಿವಾರಣೆ.

Advertisement

-  ಆರ್‌.ಕೆ


Advertisement

Udayavani is now on Telegram. Click here to join our channel and stay updated with the latest news.

Next