Advertisement
“ಇಂಗು-ತೆಂಗು’ ತಲೆಬಿಸಿ ಏಕೆ?: ವಿದ್ಯಾರ್ಥಿಗಳನ್ನು ನಳಪಾಕ, ಭೀಮಪಾಕ ತಜ್ಞರನ್ನಾಗಿಸುವ ಉದ್ದೇಶ ಖಂಡಿತವಾಗಿಯೂ ಮಂಡಳಿಗಿಲ್ಲ. ಬದಲಿಗೆ, ವಿದ್ಯಾರ್ಥಿಗಳಲ್ಲಿ ನಮ್ಮ ದೇಶದ ಧಾನ್ಯ, ತರಕಾರಿ, ಹಣ್ಣು-ಹಂಪಲು ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳ ಬಳಕೆ ಹಾಗೂ ಅವುಗಳ ಮೌಲ್ಯ ಅರ್ಥ ಮಾಡಿಸುವುದು. ದೇಸೀ ತಳಿಗಳ ಬಗ್ಗೆ ಅರಿವುಮೂಡಿಸುವುದು. ಜತೆಗೆ, ಬೀಜಗಳಿಂದ ಎಣ್ಣೆ ತೆಗೆಯುವಿಕೆ, ಕ್ರಮಬದಟಛಿವಾದ ಕೃಷಿ ಪದ್ಧಗಳ ಬಗ್ಗೆಯೂ ಜ್ಞಾನ ದೊರೆಯುವಂತೆ ಮಾಡುವ ಉದ್ದೇಶವನ್ನು ಮಂಡಳಿ ಹೊಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಆಹಾರ ಸಂಸ್ಕೃತಿಯ ಪರಿಚಯವಾಗುತ್ತದೆ ಎಂದು ಸಿಬಿಎಸ್‌ಇಯ
ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾಗಿಯಾಗಬೇಕು. ಈ ತರಗತಿಗಳ ಫಲಿತಾಂಶದಲ್ಲಿ ಅಡುಗೆ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ತೋರುವ ಸಾಧನೆಯ ಆಧಾರದಲ್ಲಿ ಗ್ರೇಡ್‌ಗಳನ್ನು ನೀಡಲಾಗುತ್ತದೆ” ಎಂದು ಅವರು ತಿಳಿಸಿದ್ದಾರೆ. ಶಾಲೆಗಳಿಗೆ ಮುಕ್ತ ಆಯ್ಕೆ
ಸಮರ್ಪಕವಾಗಿ ಅಡುಗೆ ತರಗತಿಗಳನ್ನು ನಡೆಸಲು ಆಯಾ ಶಾಲೆಗಳು ತಮ್ಮದೇ ಆದ ವಿಧಾನವನ್ನು ರೂಪಿಸಲು ಮುಕ್ತ ಅವಕಾಶವಿದೆ ಎಂದು ಸಿಬಿಎಸ್‌ಇ ಹೇಳಿದೆ. ಪ್ರಾತ್ಯಕ್ಷಿಕೆ ಮಾದರಿಯಲ್ಲಿ ಅಡುಗೆ ಮಾಡಿ ತೋರಿಸಲು ತನ್ನದೇ ಆದ ಅಡುಗೆ ಮನೆಯ ಮಾದರಿಯನ್ನು ಶಾಲೆಯಲ್ಲಿ
ನಿರ್ಮಿಸಬೇಕು. ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ
ಅಳವಡಿಸಿಕೊಳ್ಳಲೇಬೇಕಿರುತ್ತದೆ. ಒಟ್ಟಾರೆಯಾಗಿ, ಅಡುಗೆ
ಕಲೆಯನ್ನು ವಿದ್ಯಾರ್ಥಿಗಳು ಖುಷಿಯಿಂದ ಕಲಿಯುವಂಥ
ವಾತಾವರಣ ನಿರ್ಮಿಸಬೇಕು ಎಂದು ಸಿಬಿಎಸ್‌ಇ ಹೇಳಿದೆ.