Advertisement
ಆಚೆ ತೀರದಲ್ಲಿ ದನಗಾಹಿ ಹುಡುಗರು, ಗುಂಪುಗುಂಪಾಗಿ ಮನೆಗೆ ಹೊರಟಿದ್ದರು.ಅಕ್ರೂರ ಗಕ್ಕನೆ ನಿಂತು, ಗುಂಪಿನ ನಡುವೆ ಇದ್ದ ಬಾಲಕನೊಬ್ಬನನ್ನು ತೋರಿಸುತ್ತ ಹೇಳಿದ, “ನೋಡು ನೋಡು, ವಿದುರ, ಅವನೇ ಅವನೇ’.
“ಯಾರು ಯಾರು?’ ವಿದುರ ಆತುರದಿಂದ ಕೇಳಿದ.
“ನೋಡು ನೋಡಲ್ಲಿ ಅವನೇ, ತಲೆಯಲ್ಲಿ ನವಿಲಗರಿ, ಸೊಂಟದಲ್ಲಿ ಕೊಳಲು, ಸರಿಯಾಗಿ ನೋಡು’.
ವಿದುರ ನೋಡಿದ, ನೋಡುತ್ತಲೇ ಅಕ್ರೂರನ ಕಿವಿಯಲ್ಲಿ ಮೆಲ್ಲನೆ ಉಸುರಿದ, “ಈ ಹುಡುಗನನ್ನು ಒಮ್ಮೆ ಮನೆಗೆ ಕರೆದೊಯ್ಯುವ ಆಸೆಯಿದೆ ಅಕ್ರೂರ, ಕರೆದರೆ ಬಂದಾನೆ?’
“ಬಾಯಿಬಿಟ್ಟು ಕರೆಯದವರ ಮನೆಗೂ ಬಂದೇ ಬರುತ್ತಾನೆ. ಮನಸ್ಸು ತವಕಿಸಬೇಕು, ಅಷ್ಟೆ’ ಎಂದ ಅಕ್ರೂರ.
.
ಇದು ನಡೆದು ಎಷ್ಟು ಮಳೆಗಾಲ ಕಳೆದುವೊ ಏನೋ!
ಅದೊಂದು ದಿನ, ವಿದುರನ ಗುಡಿಸಲಿನೆದುರು ಒಂದು ರಥ ನಿಂತಿತು. ನೋಡಿದರೆ, ಸಾಕ್ಷಾತ್ ಕೃಷ್ಣಸ್ವಾಮಿ! ಅರಸನ ಮನೆಗೆ ಹೋಗದೆ, ಬಡವನ ಮನೆಗೆ ಬಂದಿದ್ದ.
.
ಎಲ್ಲರ ಜೀವನದಲ್ಲಿ ಇದು ಘಟಿಸುತ್ತದೆ. ಮನಸ್ಸು ತವಕಿಸಬೇಕು, ಅಷ್ಟೆ !