Advertisement

ವೀಕೆಂಡ್‌ with ಸಿನಿಮಾ

09:19 AM Mar 01, 2020 | Lakshmi GovindaRaj |

12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅದ್ಧೂರಿಯಾಗಿ ಚಾಲನೆಗೊಂಡಿದೆ. ಜಗತ್ತಿನ ನೂರಾರು ಸಿನಿಮಾಗಳನ್ನು ಒಂದೆಡೆ ನೋಡುವಂಥ ಅವಕಾಶ ಸಿನಿಪ್ರಿಯರಿಗೆ. ಶನಿವಾರ, ಭಾನುವಾರದಂದು ಫಿಲಂ ಫೆಸ್ಟಿವಲ್‌ನಲ್ಲಿ ನೋಡಬಹುದಾದ ಪ್ರಮುಖ ಸಿನಿಮಾಗಳ ಬಗ್ಗೆ ಇಲ್ಲಿ ಪುಟ್ಟ ಟಿಪ್ಪಣಿಯನ್ನು ನೀಡಲಾಗಿದೆ…

Advertisement

ಸಿಸ್ಟರ್‌
ನಿರ್ದೇಶಕ: ಸ್ವೆಟ್ಲಾ ಸೊತ್ಸೋರ್ಕೋವಾ
ದೇಶ: ಬಲ್ಗೇರಿಯಾ
ನಿಮಿಷ: 97 ನಿಮಿಷ
ಬಲ್ಗೇರಿಯಾದ ಒಂದು ಪುಟ್ಟ ಹಳ್ಳಿಯ, ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳ ಕಡುಬಡತನದ ಚಿತ್ರಣವುಳ್ಳ ಕಥೆ. ಕಾಲಾಂತರದಲ್ಲಿ ಕಿರಿಯ ಮಗಳಿಗೆ ತಾನು, ಈ ತಾಯಿಯ ಮಗಳಲ್ಲ ಎನ್ನುವ ಸತ್ಯದ ಅರಿವಾಗುತ್ತದೆ. ಸೋದರಿಯ ಕೈಯಲ್ಲಿ ಅರಳಿದ ಗೊಂಬೆಗಳೇ ಆ ವಾಸ್ತವ ಹೇಳುತ್ತಿರುತ್ತವೆ.
ಪ್ರದರ್ಶನ: ಫೆ.29, ಶನಿವಾರ, ಬೆ.9.30, ಒರಾಯನ್‌ ಮಾಲ್‌

ಎ ಕಾಲೋನಿ
ನಿರ್ದೇಶಕ: ಜೆನೆವೀವ್‌ ಡಿ ಸೆಲ್ಸ್‌
ದೇಶ: ಕೆನಡಾ
ನಿಮಿಷ: 102 ನಿಮಿಷ
12 ವರ್ಷದ ಮಿಲಿಯಾಳ ತಾರುಣ್ಯದ ತೊಳಲಾಟವನ್ನು ಫೋಕಸ್‌ ಮಾಡಿರುವ ಚಿತ್ರ. ಆಕೆ ಹೊಸ ಪ್ರೌಢಶಾಲೆಗೆ ಸೇರಿದಾಗ, ವಯೋಸಹಜ ಆಕರ್ಷಣೆಗಳಿಗೆ ಮುಜುಗರ ಪಟ್ಟು, ಒಂಟಿತನವನ್ನು ಅಪ್ಪುತ್ತಾಳೆ. ಕೊನೆಗೆ ಗೆಳೆಯನೊಬ್ಬನ ಸಖ್ಯದಿಂದ ಹೊಸದೊಂದು ಲೈಫ್ಸ್ಟೈಲ್‌ಗೆ ಹಾತೊರೆದು, ಸ್ವತಂತ್ರಳಾಗುತ್ತಾಳೆ.
ಪ್ರದರ್ಶನ: ಫೆ.29, ಶನಿವಾರ, ಮ.12.20, ಒರಾಯನ್‌ ಮಾಲ್‌

ದಿ ವಿಸ್ಲರ್
ನಿರ್ದೇಶಕ: ಕೊರ್ನೆಲ್ಯು ಪೊರಂಬ್ಯು
ದೇಶ: ರೊಮೇನಿಯಾ
ನಿಮಿಷ: 97 ನಿಮಿಷ
ವಿವಾದಿತ ಉದ್ಯಮಿಯ ಬಂಧನ ವಿಚಾರವಾಗಿ ಪೊಲೀಸ್‌ ಆಫೀಸರ್‌ ಕ್ರಿಸ್ಟಿ, ಲಾ ಗೊಮೆರಾ ದ್ವೀಪಕ್ಕೆ ಬರುತ್ತಾನೆ. ಅಲ್ಲಿನ ಶಿಳ್ಳೆ ಭಾಷೆ “ಎಲ್‌ ಸಿಲ್ಬೊ’ವನ್ನು ಕಲಿತು, ಪ್ರಕರಣದ ಆಳಕ್ಕಿಳಿದಾಗ, ಅಲ್ಲಿ ಗೋಚರಿಸುವ ವಾಸ್ತವ ಪ್ರಪಂಚವೇ ಬೇರೆ. ಕ್ರೈಂ ಥ್ರಿಲ್ಲರ್‌ಪ್ರಿಯರಿಗೆ ಇಷ್ಟವಾಗುವಂಥ ಸಿನಿಮಾ.
ಪ್ರದರ್ಶನ: ಫೆ.29, ಶನಿವಾರ, ಮ.2.30, ಒರಾಯನ್‌ ಮಾಲ್‌

ಬಿರಿಯಾನಿ
ನಿರ್ದೇಶಕ: ಸಾಜಿನ್‌ ಬಾಬು
ದೇಶ: ಭಾರತ (ಮಲಯಾಳಂ)
ನಿಮಿಷ: 96 ನಿಮಿಷ
ನಾಲ್ಕು ಗೋಡೆಗಳ ನಡುವೆ ಕಳೆದುಹೋದ, ಖದೀಜಾ ಎಂಬ ಗೃಹಿಣಿಯ ಬದುಕಿನ ತಿರುವುಗಳನ್ನು ತೋರಿಸಿರುವ ಸಿನಿಮಾ. ಧರ್ಮ ಮತ್ತು ಸಾಮಾಜಿಕ ಕಟ್ಟುಪಾಡುಗಳನ್ನು ದಾಟಿ, ಹೊಸ ಬದುಕನ್ನು ಕಟ್ಟಿಕೊಳ್ಳುವಾಗ ಎದುರಾಗುವ ಸವಾಲುಗಳನ್ನು ಇಲ್ಲಿ ಚಿತ್ರಿಸಲಾಗಿದೆ.
ಪ್ರದರ್ಶನ: ಫೆ.29, ಶನಿವಾರ, ರಾ.7.45, ಒರಾಯನ್‌ ಮಾಲ್‌

Advertisement

ಮುಂದಿನ ನಿಲ್ದಾಣ
ನಿರ್ದೇಶಕ: ವಿನಯ್‌ ಭಾರದ್ವಾಜ್‌
ದೇಶ: ಭಾರತ (ಕನ್ನಡ)
ನಿಮಿಷ: 106 ನಿಮಿಷ
ಟೆಕ್ಕಿ ಕಂ ಫೋಟೊಗ್ರಾಫ‌ರ್‌ ಆದ ಪಾರ್ಥ, ಹೊಸ ತಲೆಮಾರಿನ ಪ್ರತಿನಿಧಿ. ಅವನ ಬದುಕಿನಲ್ಲಿ ಸುಳಿಯುವರು ಮೀರಾ ಮತ್ತು ಅಹನಾ. ಇಷ್ಟಬಂದಂತೆ ಬದುಕಿದರಾಯಿತು ಎಂದುಕೊಂಡು ಜಾಲಿ ಆಗಿದ್ದವರಿಗೆ, ಕಾಣದ ಸಂಬಂಧಗಳು ಕಟ್ಟಿಹಾಕುತ್ತವೆ. ಬದುಕು ಬೇರೆಯದ್ದೇ ನಿಲ್ದಾಣಕ್ಕೆ ಬಂದು ನಿಂತಿರುತ್ತದೆ.
ಪ್ರದರ್ಶನ: ಫೆ.29, ಶನಿವಾರ, ರಾ.1.30, ನವರಂಗ್‌ ಚಿತ್ರಮಂದಿರ

ಇಟ್‌ ಮಸ್ಟ್‌ ಬಿ ಹೆವನ್‌
ನಿರ್ದೇಶಕ: ಎಲಿಯಾ ಸುಲೈಮಾನ್‌
ದೇಶ: ಪ್ಯಾಲೆಸ್ತೀನ್‌/ ಫ್ರಾನ್ಸ್‌
ನಿಮಿಷ: 97 ನಿಮಿಷ
ಪ್ಯಾಲೆಸ್ತೀನ್‌ನಲ್ಲಿ ಬದುಕಲಾಗದೇ, ಎಸ್ಕೇಪ್‌ ಆಗುವ ಕಥಾನಾಯಕ. ಪರ್ಯಾಯ ಮಾತೃಭೂಮಿಗಾಗಿ ಪ್ಯಾರಿಸ್‌, ನ್ಯೂಯಾರ್ಕ್‌ ಎನ್ನುತ್ತಾ ಅಲೆಯುತ್ತಾನೆ. ಎಲ್ಲಿ ಹೋದರೂ, ತಾಯ್ನಾಡಿನಲ್ಲಿ ಕಾಡಿದಂಥ ಮುಖಗಳೇ ಎದುರಾಗುತ್ತವೆ. ಈಗ ತನ್ನ ತಾಯ್ನಾಡು ಯಾವುದು ಎನ್ನುವುದೇ ಆತನ ಮುಂದಿರುವ ಪ್ರಶ್ನೆ.
ಪ್ರದರ್ಶನ: ಮಾ.1, ಭಾನುವಾರ, ಮ.12, ಒರಾಯನ್‌ ಮಾಲ್‌

ರಂಗನಾಯಕಿ
ನಿರ್ದೇಶಕ: ದಯಾಳ್‌ ಪದ್ಮನಾಭನ್‌
ದೇಶ: ಭಾರತ (ಕನ್ನಡ)
ನಿಮಿಷ: 105
ಆಕೆ ಅನಾಥೆ. ಸಂಗೀತ ಶಿಕ್ಷಕಿ. ಪ್ರೇಮಿಸಿದ ಹುಡುಗನ ಕೈಹಿಡಿದು, ಇನ್ನು ಚೆಂದದ ಬದುಕು ಕಟ್ಟಿಕೊಳ್ಳಬೇಕು ಎನ್ನುವಷ್ಟರಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಯುತ್ತದೆ. ತನಗೆ ಅನ್ಯಾಯ ಎಸಗಿದ ದುಷ್ಟರ ವಿರುದ್ಧ ಹೋರಾಡುವ ಕಥೆ ಈ ಚಿತ್ರದ್ದು.
ಪ್ರದರ್ಶನ: ಮಾ.1, ಭಾನುವಾರ, ಸಂ.4.30, ಒರಾಯನ್‌ ಮಾಲ್‌

ಸ್ಟಾಕರ್‌
ನಿರ್ದೇಶಕ: ಅಂದ್ರೆ ಟಾರ್ಕೊವ್‌ಸ್ಕಿ
ದೇಶ: ರಷ್ಯಾ
ನಿಮಿಷ: 161
ನಂಬಿಕೆ ಮತ್ತು ಅಪನಂಬಿಕೆಗಳ ನಡುವಿನ ದ್ವಂದ್ವವನ್ನು ಚಿತ್ರಿಸಿದ ಕಥೆ. ನಂಬಿಕೆ ಎಂಬ ಜಗತ್ತೂಂದು ಇದೆ ಎನ್ನುವ ಒಂದು ಮನಸ್ಸು. ಆದರೆ, ಆ ಝೋನ್‌ ಒಳಗೆ ಪ್ರವೇಶಿಸಿದ ಲೇಖಕ ಮತ್ತು ಪ್ರೊಫೆಸರ್‌ಗೆ ಇಲ್ಲೇನೂ ಇಲ್ಲ ಎಂದೆನ್ನಿಸುವ ಸ್ಥಿತಿ. ರೂಪಕ, ಪ್ರತಿಮೆಗಳ ಮೂಲಕವೇ ಆಪ್ತಗೊಳ್ಳುವ ಸಿನಿಮಾ.
ಪ್ರದರ್ಶನ: ಮಾ.1, ಭಾನುವಾರ, ಮ.1.30, ಸುಚಿತ್ರಾ ಫಿಲಂ ಸೊಸೈಟಿ

Advertisement

Udayavani is now on Telegram. Click here to join our channel and stay updated with the latest news.

Next