Advertisement

ವೀಕೆಂಡ್‌ ರಜೆ , ದೀಪಾವಳಿ ಹಬ್ಬ: ಮಲ್ಪೆ ಬೀಚ್‌ನಲ್ಲಿ ಹೆಚ್ಚಿದ ಪ್ರವಾಸಿಗರು

01:32 AM Nov 01, 2021 | Team Udayavani |

ಮಲ್ಪೆ: ವೀಕೆಂಡ್‌ ರಜೆ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರವಿವಾರ ಮಲ್ಪೆ ಬೀಚ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಅಗಮಿಸಿರುವುದು ಕಂಡು ಬಂದಿದೆ.

Advertisement

ಶನಿವಾರ ಪ್ರವಾಸಿಗರು ವಿರಳವಾಗಿ ಕಂಡು ಬಂದಿದ್ದರೂ, ರವಿವಾರ ಮಾತ್ರ ಬೆಳಗ್ಗಿನಿಂದಲೇ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರ ವಾಹನಗಳು ಬೀಚ್‌ ಕಡೆಗೆ ಬರುತ್ತಿದ್ದವು.

ಸಂಜೆಯಾಗುತ್ತಲೇ ಸ್ಥಳೀಯ ಜನರು ಸೇರಿದಂತೆ ವಾಹನಗಳ ಸಾಲು ಹೆಚ್ಚಾಗಿ ಮಾಮೂಲಿನಂತೆ ಟ್ರಾಫಿಕ್‌ ಜಾಮ್‌ ಸಮಸ್ಯೆಯೂ ಉಂಟಾಗಿತ್ತು. ಸೀವಾಕ್‌ನಲ್ಲಿಯೂ ಹೆಚ್ಚಿನ ಪ್ರವಾಸಿಗರು ಕಂಡು ಬಂದಿದ್ದಾರೆ.

ಇದನ್ನೂ ಓದಿ:ನ. 5ಕ್ಕೆ ಪ್ರಧಾನಿ ಉತ್ತರಾಖಂಡ ಭೇಟಿ : ಕಾರ್ಯಕ್ರಮ ರಂಗು ಹೆಚ್ಚಿಸಲಿರುವ ಸಾಧು-ಸಂತರು

Advertisement

Udayavani is now on Telegram. Click here to join our channel and stay updated with the latest news.

Next