Advertisement

ಪ್ರಯಾಣಿಕರೇ ಗಮನಿಸಿ; ಡಿ.22, 23ರಂದು ಮೆಟ್ರೋ ಸಂಚರಿಸುತ್ತೆ

06:28 PM Dec 21, 2018 | Team Udayavani |

ಬೆಂಗಳೂರು:ಈ ಶನಿವಾರ ಮತ್ತು ಭಾನುವಾರ ಎಂದಿನಂತೆ ಮೆಟ್ರೋ ಸಂಚರಿಸಲಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಟ್ರಿನಿಟಿ ಸರ್ಕಲ್ ನ ಮೆಟ್ರೋ ಪಿಲ್ಲರ್ ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ಮಾಡಲು ಡಿಸೆಂಬರ್ 22, 23ರಂದು ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು.

Advertisement

ಬೈಯಪ್ಪನಹಳ್ಳಿ-ನಾಯಂಡನಹಳ್ಳಿ ಮಾರ್ಗದ ಟ್ರಿನಿಟಿ ಸರ್ಕಲ್ ನ ಮೆಟ್ರೊ ಪಿಲ್ಲರ್ ಬಳಿ ಬಿರುಕು ಕಾಣಿಸಿಕೊಂಡಿದ್ದು ಅದರ ದುರಸ್ತಿ ಕಾರ್ಯದ ಪೂರ್ವ ಸಿದ್ಧತೆ ಕಾರ್ಯ ಪೂರ್ಣಗೊಂಡ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next