Advertisement

ವಾರಾಂತ್ಯ ರಜೆ: ನಗರದಲ್ಲಿ ಟ್ರಾಫಿಕ್‌ ದಟ್ಟಣೆ

12:09 PM Apr 17, 2022 | Team Udayavani |

ಉಡುಪಿ: ವಾರಾಂತ್ಯ ರಜೆ ಹಿನ್ನೆಲೆಯಲ್ಲಿ ಶನಿವಾರ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್‌ ದಟ್ಟಣೆ ಸವಾರರನ್ನು ಹೈರಾಣಾಗಿಸಿತು.

Advertisement

ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಹೆಚ್ಚಿನ ಪ್ರವಾಸಿಗರು ಉಡುಪಿಯ ಧಾರ್ಮಿಕ ಕ್ಷೇತ್ರದ ದರ್ಶನ ಹಾಗೂ ಬೀಚ್‌ಗಳನ್ನು ನೋಡಲು ಬಂದಿದ್ದರಿಂದ ಅಲ್ಲಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ಉಡುಪಿ ಶ್ರೀ ಕೃಷ್ಣಮಠ, ಕೊಲ್ಲೂರು ದೇವಸ್ಥಾನ, ಮಂದಾರ್ತಿ ಶ್ರೀ ದುರ್ಗಪರಮೇಶ್ವರೀ ದೇವಸ್ಥಾನ, ಆನೆಗುಡ್ಡೆ ಗಣಪತಿ ದೇವಸ್ಥಾನ, ಕಮಲಶಿಲೆ ಬ್ರಾಹ್ಮಿ ದುರ್ಗಪರಮೇಶ್ವರೀ ದೇವಸ್ಥಾನ ಸಹಿತ ಮಲ್ಪೆ, ಕಾಪು, ಪಡುಬಿದ್ರಿ, ಮರವಂತೆ, ಬೈಂದೂರು-ಸೋಮೇಶ್ವರ ಬೀಚ್‌ನಲ್ಲಿ ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದ್ದರು.

ಉಡುಪಿ ನಗರದಲ್ಲೂ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರಿಂದ ವಾಹನ ಸಂಚಾರವೂ ಜಾಸ್ತಿ ಇತ್ತು.

ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಕರಾವಳಿ ಬೈಪಾಸ್‌, ಮಲ್ಪೆ, ಕಲ್ಸಂಕ ಜಂಕ್ಷನ್‌ನಲ್ಲಿ ಟ್ರಾಫಿಕ್‌ ದಟ್ಟಣೆ ಇತ್ತು. ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಪೊಲೀಸರು ಹರಸಾಹಸ ಪಟ್ಟರು. ಬೆಳಗ್ಗೆ, ಸಂಜೆಯಲ್ಲಿ ಕಲ್ಸಂಕ ವೃತ್ತದಿಂದ ಉಡುಪಿ ಸಿಟಿ ಬಸ್‌ ನಿಲ್ದಾಣವರೆಗೆ, ಇನ್ನೊಂದು ಬದಿಯಲ್ಲಿ ಕಡಿಯಾಳಿವರೆಗೆ, ಅಂಬಾಗಿಲು ಮಾರ್ಗದಲ್ಲಿ ವಿಜಯತಾರ ಹೊಟೇಲ್‌ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಶಿರಿಬೀಡು ಸಿಟಿ ಬಸ್‌ ನಿಲ್ದಾಣದ ಬಳಿಯೂ ಹೆಚ್ಚಿನ ಟ್ರಾಫಿಕ್‌ನಿಂದ ಜನ ಸಮಾನ್ಯರು ಕಿರಿಕಿರಿ ಅನುಭವಿಸುವಂತಾಯಿತು. ಕರಾವಳಿ ಬೈಪಾಸ್‌ ರಸ್ತೆಯಲ್ಲಿ ಮಲ್ಪೆ ಬೀಚ್‌ಕಡೆ ಹೋಗುವ ವಾಹನ ಹೆಚ್ಚಿದ್ದರಿಂದ ಟ್ರಾಫಿಕ್‌ ಜಾಮ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next