Advertisement

ವೀಕೆಂಡ್ ಕರ್ಫ್ಯೂ: ಮಾಂಸದಂಗಡಿಗಳಲ್ಲಿ ಫುಲ್ ರಶ್, ಇನ್ನು ರಸ್ತೆಗಿಳಿದರೆ ಬೀಳುತ್ತೆ ಲಾಠಿ ಏಟು

10:15 AM Apr 25, 2021 | Team Udayavani |

ಬೆಂಗಳೂರು: ಕೋವಿಡ್-19 ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ವಿಧಿಸಿರುವ ವೀಕೆಂಡ್ ಲಾಕ್ ಡೌನ್ ನ ಎರಡನೇ ದಿನ ಇಂದು ನಡೆಯುತ್ತಿದೆ. ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ಇದೀಗ ಎಲ್ಲಾ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸುತ್ತಿದ್ದಾರೆ.

Advertisement

ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಸರ್ಕಾರ ಅವಕಾಶ ನೀಡಿತ್ತು. ಹಾಲು, ತರಕಾರಿ, ಹಣ್ಣು ಹಂಪಲು, ದಿನಸಿ ಅಂಗಡಿಗಳಿಗೆ ಅವಕಾಶ ನೀಡಲಾಗಿತ್ತು. ಜನರು ಬೆಳ್ಳಂಬೆಳಗ್ಗೆ ಖರೀದಿಗೆ ಮುಗಿಬಿದ್ದ ದೃಶ್ಯ ಹಲವೆಡೆ ಕಂಡುಬಂತು.

ಇದನ್ನೂ ಓದಿ:ಆಕ್ಸಿಜನ್ ಕೊರತೆಯಿಂದ ಪ್ರಾಣ ಬಿಟ್ಟ ನವಜಾತ ಅವಳಿ ಶಿಶುಗಳು

ಹಲವೆಡೆ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಖರೀದಿ- ಮಾರಾಟ ಮಾಡುತ್ತಿರುವ ದೃಶ್ಯಗಳು ಕಂಡುಬಂತು. 10 ಗಂಟೆಯ ನಂತರ ಪೊಲೀಸರು ಹಲವೆಡೆ ಅಂಗಡಿಗಳನ್ನು ಮುಚ್ಚಿಸಿದರು.

ಮಾಂಸದಂಗಡಿಗಳಲ್ಲಿ ರಶ್: ರವಿವಾರವಾದ ಕಾರಣ ಮಾಂಸದಂಗಡಿ, ಮೀನು ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂತು. ಮಹಾವೀರ ಜಯಂತಿ ಕಾರಣ ಹಲವೆಡೆ ಮಾಂಸ ಮಾರಾಟ ನಿಷೇಧ ಹೇರಲಾಗಿದೆ. ಆದರೆ ನಿಷೇಧದ ನಡುವೆ ಮಾಂಸ ಮಾರಾಟ ಮಾಡುತ್ತಿರುವ ವ್ಯಾಪಾರಿಗಳಿಗೆ ದಂಡ ವಿಧಿಸಲಾಗಿದೆ.

Advertisement

ಇನ್ನು ಹೊರಬರುವಂತಿಲ್ಲ: 10 ಗಂಟೆಯವರೆಗಿನ ಅವಕಾಶ ಇದೀಗ ಅಂತ್ಯವಾಗಿದ್ದು, ಇನ್ನು ಅನಗತ್ಯವಾಗಿ ಜನರು ತಿರುಗಾಡಲು ಅವಕಾಶವಿಲ್ಲ. ವೈದ್ಯಕೀಯ ತುರ್ತು ಸೇರಿದಂತೆ ತೀರಾ ಅಗತ್ಯ ಸಂದರ್ಭಕ್ಕೆ ಮಾತ್ರ ರಸ್ತೆಗಳಿಯಲು ಅವಕಾಶವಿದೆ. ನಾಳೆ ಬೆಳಗ್ಗೆ 6 ಗಂಟೆಯವರೆಗೆ ಈ ಕರ್ಫ್ಯೂ ಹೀಗೆ ಮುಂದುವರಿಯಲಿದೆ.

ಇದನ್ನೂ ಓದಿ:ಸಿರೋ ಸಮೀಕ್ಷೆ : ಕೋವಿಡ್ ವಿರುದ್ಧ ಹೋರಾಡಲು ಮಹಿಳೆಯರಲ್ಲಿ ಹೆಚ್ಚು ರೋಗನಿರೋಧಕ ಶಕ್ತಿ ಇದೆ!

Advertisement

Udayavani is now on Telegram. Click here to join our channel and stay updated with the latest news.

Next